ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯದಲ್ಲಿ ಜನಿಸಿತು ವಿಚಿತ್ರ ಹೆಣ್ಣು ಮಗು

|
Google Oneindia Kannada News

ಮಂಡ್ಯ, ಜನವರಿ 29: ದೇಹದ ಚರ್ಮ ದಪ್ಪವಾಗಿ ಮೈಮೇಲೆ ರಕ್ತ ಚೆಲ್ಲಿದಂತೆ ಕಾಣುತ್ತಿರುವ ಅಪರೂಪದ ವಿಚಿತ್ರ ಹೆಣ್ಣು ಮಗುವೊಂದು ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಮಿಮ್ಸ್) ಮಂಗಳವಾರ ರಾತ್ರಿ ಜನಿಸಿದ್ದು ಜನ ಅಚ್ಚರಿ ಪಡುವಂತಾಗಿದೆ.

Recommended Video

A Dog saves a Taiwan woman from Corona virus | Corona Virus | Dog | Oneinida kannada

ಸದ್ಯ ಮಗು ಒಣ ಚರ್ಮ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೆತ್ತವರಲ್ಲಿ ಆತಂಕ ಮನೆ ಮಾಡಿದೆ. ರಾಮನಗರ ಮೂಲದ ದಂಪತಿ ಈ ವಿಚಿತ್ರ ಮಗುವಿಗೆ ಜನ್ಮ ನೀಡಿದ್ದು, ದಂಪತಿಗೆ ಇದೇ ಮೊದಲ ಮಗುವಾಗಿದೆ. ಮಹಿಳೆಯನ್ನು ಹೆರಿಗೆಗಾಗಿ ಮಿಮ್ಸ್ ‌ಗೆ ದಾಖಲು ಮಾಡಲಾಗಿತ್ತು. ಡಾ.ಗೀತಾ ಅವರು ಹೆರಿಗೆ ಮಾಡಿಸಿದ ಸಂದರ್ಭದಲ್ಲಿ ವಿಚಿತ್ರ ಮಗುವಿನ ಜನನವಾಗಿದೆ.

ಬೆಂಗಳೂರಿನಲ್ಲಿ ಭಾರೀ ಗಾತ್ರದ ಮಗು ಜನನ!ಬೆಂಗಳೂರಿನಲ್ಲಿ ಭಾರೀ ಗಾತ್ರದ ಮಗು ಜನನ!

ಮಗುವಿನ ದೇಹದ ಚರ್ಮವು ತೀರ ದಪ್ಪವಾಗಿದ್ದು, ಒಣಗಿದಂತಿದೆ. ಇದರಿಂದಾಗಿ ಅಲ್ಲಲ್ಲಿ ದೇಹದ ಚರ್ಮವು ಬಿರುಕು ಬಿಟ್ಟಿದೆ. ಹೀಗಾಗಿ ಮೈಮೇಲೆ ರಕ್ತ ಚೆಲ್ಲಿದಂತೆ ಕಾಣುತ್ತಿದ್ದು, ಪಾಲಕರ ಆತಂಕಕ್ಕೆ ಕಾರಣವಾಗಿದೆ. ಅಸ್ವಸ್ಥಗೊಂಡಂತಿರುವ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆನುವಂಶೀಯತೆಯಿಂದಾಗಿ ಮಗು ಈ ರೀತಿ ಜನಿಸಿರಬಹುದು. ಎಬಿಸಿಎ 12 ಜೀನ್ ಮ್ಯುಟೇಶನ್ ಕಾರಣದಿಂದ ಈ ರೀತಿ ವಿಚಿತ್ರ ಒಣಚರ್ಮ ಕಾಯಿಲೆಗೆ ಒಳಗಾಗಿರಬಹುದು. ಇನ್ನು ಮಗು ಸರಿಯಾಗಬೇಕಾದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಕೊಡಿಸಬೇಕಿದೆ ಎಂದು ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Strange Baby Born in Mandya Mims Hospital

ಸುಮಾರು ಐದು ಲಕ್ಷಕ್ಕೆ ಒಂದು ಮಗುವಿಗೆ ಈ ರೀತಿಯ ಸಮಸ್ಯೆ ಕಂಡುಬರುತ್ತದೆ. ಸದಾ ತೀವ್ರ ನಿಗಾ ಘಟಕದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ಎಂ.ಆರ್. ಹರೀಶ್ ತಿಳಿಸಿದ್ದಾರೆ.

English summary
Strange baby with skin disease born today in mims hospital,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X