ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾಂಡವಪುರ ಶಾಸಕ ಸಿ.ಎಸ್. ಪುಟ್ಟರಾಜು ಮನೆ ಮೇಲೆ ಕಲ್ಲು ತೂರಾಟ; ಕಾರಣ?

|
Google Oneindia Kannada News

ಮಂಡ್ಯ, ಅಕ್ಟೋಬರ್ 8: ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದಲ್ಲಿ ಜೆಡಿಎಸ್ ಶಾಸಕ ಸಿ.ಎಸ್. ಪುಟ್ಟರಾಜು ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದು, ಕಿಟಕಿ ಗಾಜು ಪುಡಿ ಮಾಡಿರುವ ಘಟನೆ ಗುರುವಾರ ರಾತ್ರಿ (ಅ.7) ನಡೆದಿದೆ.

ಅಪರಿಚಿತ ಯುವಕರ ಗುಂಪೊಂದು ಕ್ಷುಲ್ಲಕ ಕಾರಣಕ್ಕಾಗಿ ಕಲ್ಲು ಎಸೆದಿರುವುದಾಗಿ ತಿಳಿದು ಬಂದಿದೆ. ಪಾಂಡವಪುರ ಪಟ್ಟಣದ ಐದು ದೀಪ ವೃತ್ತದಲ್ಲಿ ಶಾಸಕ ಸಿ.ಎಸ್. ಪುಟ್ಟರಾಜು ಹುಟ್ಟುಹಬ್ಬದ ಅಂಗವಾಗಿ ಬೆಂಬಲಿಗರು ಹಾಕಿದ್ದ ಫ್ಲೆಕ್ಸ್ ಹರಿದು ವಿಕೃತಿ ಮೆರೆದಿದ್ದಾರೆ.

ಪಾಂಡವಪುರ ಪಟ್ಟಣದಲ್ಲಿ ಕಳೆದ ರಾತ್ರಿ ಶಾಸಕ ಸಿ.ಎಸ್. ಪುಟ್ಟರಾಜು ಮನೆ ಸೇರಿದಂತೆ ಎಂಟು ಕಾರು, ಹೋಂಡಾ ಶೋರೂಂ, ಖಾಸಗಿ ಬಸ್ ಸೇರಿದಂತೆ ಅನೇಕ ಸ್ಥಳಗಳಿಗೆ ಅಪರಿಚಿತ ಯುವಕರ ಗುಂಪೊಂದು ಕಲ್ಲು ಎಸೆದು, ಕಾರಿನ ಗಾಜುಗಳನ್ನು ಪುಡಿ ಪುಡಿ ಮಾಡಿರುವ ಘಟನೆ ನಡೆದಿದೆ.

Mandya: Stone Pelting On MLA CS Puttarajus Residence In Pandavapura

ಪಾಂಡವಪುರ ಟೌನ್ ಪೊಲೀಸ್ ಠಾಣೆ ಮುಂಭಾಗದಲ್ಲಿರುವ ಕಾರಿಗೆ ಸೈಜು ಕಲ್ಲು ಎಸೆದು ಗಾಜು ಪುಡಿ ಮಾಡಲಾಗಿದೆ. ಪೊಲೀಸ್ ಠಾಣೆ ರಸ್ತೆಯಲ್ಲಿರುವ ಮೂರು ಕಾರಿಗೆ ಕಲ್ಲು ಎಸೆದು ಗಾಜು ಪುಡಿ ಮಾಡಿ ಡ್ಯಾಮೇಜ್ ಮಾಡಿರುವ ಘಟನೆ ನಡೆದಿರುವುದು ಕಾರಿನ‌ ಮಾಲೀಕರಲ್ಲಿ ಆತಂಕ ಉಂಟುಮಾಡಿದೆ.

ಮಾರುತಿ, ಇಂಡಿಕಾ, ಖಾಸಗಿ ಬಸ್ ಕಾರು, ಶಾಸಕರ ನಿವಾಸದ ಗಾಜು, ಹೋಂಡಾ ಶೋರೂಂ ಸೇರಿದಂತೆ ಅನೇಕ ಸ್ಥಳಗಳಲ್ಲಿ ಅಪರಿಚಿತ ಯುವಕರ ಗುಂಪೊಂದು ಸೈಜು ಕಲ್ಲು ಎಸೆದು ಗಾಜು ಪುಡಿ ಮಾಡಿ, ಕಾರನ್ನು ಡ್ಯಾಮೇಜ್ ಮಾಡಿದ್ದಾರೆ. ಕಿಡಿಗೇಡಿಗಳ ದುಷ್ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪುಟ್ಟರಾಜು ಸಹೋದರ ಅಶೋಕ್ ಹೇಳಿಕೆ ನೀಡಿದ್ದು, "ಇದು ನಮ್ಮನ್ನು ಟಾರ್ಗೆಟ್ ಮಾಡಿರುವುದು ಅಲ್ಲ. ಯಾರೋ ಕುಡುಕರು ಈ ಕೃತ್ಯವೆಸಗಿದ್ದಾರೆ. ಯಾವುದೇ ಅಪಾಯವಿಲ್ಲ," ಎಂದು ತಿಳಿಸಿದ್ದಾರೆ.

"ಗುರುವಾರ ರಾತ್ರಿ ಮೂವರು ಕುಡಿದು ಪೆಟ್ರೋಲ್ ಬಂಕ್ ಬಳಿ ಗಲಾಟೆ ಮಾಡಿಕೊಂಡಿದ್ದಾರೆ. ನಂತರ ಸುಮಾರು ಕಾರು, ಮನೆಗಳ ಮೇಲೆ ಕಲ್ಲು ತೂರಿದ್ದಾರೆ. ಈ ವೇಳೆ ನಮ್ಮ ಮನೆಗೂ ಕಲ್ಲು ತೂರಿದ್ದಾರೆ ಎಂದಿದ್ದಾರೆ. ಈ ಬಗ್ಗೆ ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದು, ಕಾರ್ಯಕರ್ತರು ಯಾರು ಭಯಪಡುವ ಅವಶ್ಯಕತೆ ಇಲ್ಲ," ಎಂದಿದ್ದಾರೆ.

Recommended Video

ವಿರಾಟ್ ನಂತರ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಅಲ್ವಂತೆ!!ಯಾಕೆ ಗೊತ್ತಾ? | Oneindia Kannada

ಶಾಸಕ ಪುಟ್ಟರಾಜು ಮನೆ ಮೇಲೆ ಕಲ್ಲು ತೂರಾಟಕ್ಕೆ ರೇವಣ್ಣ ಪ್ರತಿಕ್ರಿಯೆ
ಪಾಂಡವಪುರ ಜೆಡಿಎಸ್ ಶಾಸಕ ಪುಟ್ಟರಾಜು ಮನೆ ಮೇಲೆ ಕಲ್ಲು ತೂರಾಟ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹಾಸನದಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

"ಇಂತಹದ್ದನ್ನು ನಾನು ಖಂಡಿಸುತ್ತೇನೆ, ಸರ್ಕಾರ ಪುಟ್ಟರಾಜುರಿಗೆ ಹಾಗೂ ಅವರ ಮನೆಗೆ ರಕ್ಷಣೆ ಕೊಡಬೇಕು. ನಮಗೆ ಏನೇ ಮಾತನಾಡಿದರೂ ಹೆದರಿಕೆ, ನಮಗೆಲ್ಲಿ ಗುಂಡು ಬೀಳುತ್ತಾವೋ ಎಂದು ಹೆದರಿಕೆಯಾಗುತ್ತದೆ," ಎಂದು ರೇವಣ್ಣ ಹೇಳಿದರು.

English summary
Stone Pelting On JDS MLA CS Puttaraju's Residence In Pandavapura town of Mandya district on thursday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X