ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಆರ್‌ಎಸ್ ಡ್ಯಾಂ ಬಿರುಕು ವಿವಾದದ ಬೆನ್ನಲ್ಲೇ ಡ್ಯಾಂ ಮೆಟ್ಟಿಲಿನ ಕಲ್ಲು ಕುಸಿತ!

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಜುಲೈ 19: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಡ್ಯಾಂ ಬಿರುಕು ವಿವಾದದ ಬೆನ್ನಲ್ಲೇ ಡ್ಯಾಂ ಮೆಟ್ಟಿಲಿನ ಕಲ್ಲು ಕುಸಿತವಾಗಿ ಆತಂಕ ಮೂಡಿಸಿದೆ.

ಕೆಆರ್‌ಎಸ್ ಜಲಾಶಯ ಮೆಟ್ಟಿಲಿನ ಗೋಡೆಯಿಂದ 30ಕ್ಕೂ ಹೆಚ್ಚು ಕಲ್ಲು ಕುಸಿತಗೊಂಡಿದ್ದು, ಗಣಿಗಾರಿಕೆಯಿಂದ ಅಣೆಕಟ್ಟೆಗೆ ಅಪಾಯದ ಭೀತಿ ಹೆಚ್ಚಿಸಿದೆ. 'ಡ್ಯಾಂ'ನಿಂದ ಬೃಂದಾವನ ಹಾಗೂ ಕಾವೇರಿ ಮಾತೆ ಪ್ರತಿಮೆಗೆ ಹೋಗಲು ಮೆಟ್ಟಿಲು ನಿರ್ಮಿಸಲಾಗಿತ್ತು.

ಕೆಆರ್‌ಎಸ್ ಸುತ್ತ ಗಣಿಗಾರಿಕೆ ನಿಲ್ಲಿಸುವಂತೆ ಪುಣೆ ಟೆಕ್ನಿಕಲ್ ಟೀಂ ಸೂಚಿಸಿತ್ತುಕೆಆರ್‌ಎಸ್ ಸುತ್ತ ಗಣಿಗಾರಿಕೆ ನಿಲ್ಲಿಸುವಂತೆ ಪುಣೆ ಟೆಕ್ನಿಕಲ್ ಟೀಂ ಸೂಚಿಸಿತ್ತು

+80 ಅಡಿ ಗೇಟುಗಳ ಬಳಿ ಇರುವ ಮೆಟ್ಟಿಲು ಇದಾಗಿದ್ದು, ಡ್ಯಾಂ ಭದ್ರತೆ ದೃಷ್ಟಿಯಿಂದ ಹಲವು ವರ್ಷದ ಹಿಂದೆಯೇ ಮೆಟ್ಟಿಲು ಮೇಲೆ ಸಾರ್ವಜನಿಕರ ಸಂಚಾರ ನಿರ್ಬಂಧಿಸಲಾಗಿತ್ತು. ಡ್ಯಾಂ ಬಿರುಕು ವಿವಾದದ ಬೆನ್ನಲ್ಲೇ ಕಲ್ಲು ಕುಸಿತವಾಗಿರುವುದು ಆತಂಕ ಹೆಚ್ಚಳವಾಗಿದೆ.

Mandya: Stone Fell Down Near KRS Dam Garden Area Creates Panic

ಮಣ್ಣು, ಸುರ್ಕಿಯಿಂದ ಮೆಟ್ಟಿಲುಗಳನ್ನು ನಿರ್ಮಾಣ ಮಾಡಿದ್ದು, ಸತತ ಮಳೆಯಿಂದಾಗಿ ಏಕಾಏಕಿ ಕಲ್ಲುಗಳು ಕುಸಿದಿವೆ. ಕಲ್ಲು ಕುಸಿತ ಘಟನೆಯಿಂದಾಗಿ ಬೇಬಿ ಬೆಟ್ಟದ ಕಲ್ಲು ಗಣಿಗಾರಿಕೆಯಿಂದ ಡ್ಯಾಂಗೆ ಅಪಾಯದ ಭೀತಿ ಮತ್ತಷ್ಟು ಜಾಸ್ತಿಯಾಗಿದೆ.

Mandya: Stone Fell Down Near KRS Dam Garden Area Creates Panic

Recommended Video

ಕರ್ನಾಟಕದಲ್ಲಿ ಮುಂದುವರಿದ ವರುಣನ ಆರ್ಭಟ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ | Oneindia Kannada

ಕಾವೇರಿ ನೀರಾವರಿ ನಿಯಮದ SE ವಿಜಯ್ ಕುಮಾರ್ ನೇತೃತ್ವದಲ್ಲಿ ಪರಿಶೀಲನೆ ಮಾಡಲಾಗಿದ್ದು, ಆತಂಕ ಬೇಡ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

English summary
More than 30 stones have collapsed from the KRS reservoir's stairway wall, raising the fear of mining being a threat to the dam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X