ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರೀರಂಗಪಟ್ಟಣ; ಕಾವೇರಿ ನದಿ ತೀರದಲ್ಲಿ ಪಿತೃಪಕ್ಷದ ಆಚರಣೆ; ಪೂರ್ವಜರಿಗೆ ಪಿಂಡ ಪ್ರದಾನ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಸೆಪ್ಟೆಂಬರ್‌ 25: ಮಹಾಲಯ ಅವಮಾಸ್ಯೆ ಅಂಗವಾಗಿ ಪಟ್ಟಣದ ಕಾವೇರಿ ನದಿ ತಟದಲ್ಲಿ ಪಿತೃಪಕ್ಷದ ಆಚರಣೆ ಜೋರಾಗಿ ನಡೆದಿದೆ. ದೂರದ ಊರುಗಳಿಂದ ಹಲವಾರು ಜನ ಶ್ರೀರಂಗಪಟ್ಟಣಕ್ಕೆ ಆಗಮಿಸಿದ್ದು, ಪಿತೃದೇವತೆಗಳಿಗೆ ತರ್ಪಣ ಬಿಟ್ಟರು.

ಪಟ್ಟಣದ ಕಾವೇರಿ ನದಿ ತೀರಗಳಾದ ಪಶ್ಚಿಮ ವಾಹಿನಿ, ಪಟ್ಟಣದ ಸ್ನಾನಘಟ್ಟ, ಕಾವೇರಿ ಸಂಗಮ, ಗೋಸಾಯ್ ಘಾಟ್ ಸೇರಿದಂತೆ ಹಲವು ಕಡೆ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ನೂರಾರು ಜನರು ಅಗಲಿದ ತಮ್ಮ ಪೂರ್ವಜರಿಗೆ ಪಿಂಡಪ್ರಧಾನ ಮಾಡಿದರು. ತಿಲಕತರ್ಪಣ ಅರ್ಪಿಸಿ ಮೋಕ್ಷವನ್ನು ಕೋರಿದರು. ಹಿಂದಿನಿಂದಲೂ ಪವಿತ್ರ ಸ್ಥಳವೆಂಬ ಖ್ಯಾತಿಗೆ ಪಾತ್ರವಾಗಿರುವ ಪಶ್ಚಿಮ ವಾಹಿನಿಯಲ್ಲಿ ಹೆಚ್ಚಿನ ಅಸ್ಥಿ ಸರ್ಜನೆ, ಪಿಂಡ ತರ್ಪಣ ಮಾಡುವುದು ಸಂಪ್ರದಾಯವಾಗಿ ಬೆಳೆದುಕೊಂಡು ಬಂದಿದೆ.

ಶ್ರೀರಂಗಪಟ್ಟಣ ದಸರಾ ಉದ್ಘಾಟನೆಗೆ ದೇಶಿಕೇಂದ್ರ ಮಹಾಸ್ವಾಮೀಜಿಗೆ ಆಹ್ವಾನಶ್ರೀರಂಗಪಟ್ಟಣ ದಸರಾ ಉದ್ಘಾಟನೆಗೆ ದೇಶಿಕೇಂದ್ರ ಮಹಾಸ್ವಾಮೀಜಿಗೆ ಆಹ್ವಾನ

Srirangapatna; Pitru Paksha Celebration on Banks of Kaveri River

ಕಾವೇರಿ ನದಿ ತಟದಲ್ಲಿ ಪಿತೃಪಕ್ಷದ ಆಚರಣೆ
ಮೈಸೂರು- ಬೆಂಗಳೂರು ಹೆದ್ದಾರಿಯ ಪಶ್ಚಿಮವಾಹಿನಿ ಬಳಿಗೆ ವಾಹನಗಳಲ್ಲಿ ಆಗಮಿಸಿದ ಜನರು ಕಾವೇರಿ ನದಿಯಲ್ಲಿ ತಿಲಕ ತರ್ಪಣ ಬಿಟ್ಟರೆ, ಕೆಲವರು ಪಿಂಡ ಪ್ರದಾನ ಮಾಡಿದರು. ಈ ಸ್ಥಳದಲ್ಲಿ ವಾಹನಗಳ ದಟ್ಟಣೆ ಕೂಡ ಹೆಚ್ಚಾಗಿತ್ತು. ಜನ ಸಂಚಾರಕ್ಕೆ ಕಿರಿಕಿರಿ ಉಂಟಾಗುತ್ತಿತ್ತು. ಸಾಲುಗಟ್ಟಿ ವಾಹನಗಳು ರಸ್ತೆಯುದ್ದಕ್ಕೂ ನಿಂತಿದ್ದವು. ಮಹಾಲಯ ಅಮವಾಸ್ಯೆ ಶುರುವಾಗುವ ಒಂದು ವಾರದ ಮೊದಲೇ ಈ ಪಿತೃಪಕ್ಷದ ಪಿಂಡ ಪ್ರದಾನ ಮಾಡಲಾಗುತ್ತದೆ.
ಪಿತೃಪಕ್ಷದ ಪಿಂಡ ತರ್ಪಕ್ಕೆ ಹೆಚ್ಚಿನ ಜನರು ಶ್ರೀರಂಗಪಟ್ಟಣಕ್ಕೆ ಆಗಮಿಸಿದ ಕಾರಣ, ಪಟ್ಟಣದ ನದಿ ತೀರಗಳು ಜನರಿಂದ ತುಂಬಿ ತುಳುಕುತ್ತಿತ್ತು.

Srirangapatna; Pitru Paksha Celebration on Banks of Kaveri River

ಪಿತೃಪಕ್ಷದ ಆಚರಣೆಯ ಮಹತ್ವ
ಸಾವನ್ನಪ್ಪಿದವರ ಆತ್ಮಗಳಿಗೆ ಮುಕ್ತಿ ಸಿಗಲು ಸರಿಯಾದ ರೀತಿಯಲ್ಲಿ ಅಂತ್ಯಕ್ರಿಯೆ, ಶ್ರಾದ್ಧ, ಪಿಂಡದಾನ, ಅಸ್ಥಿ ವಿಸರ್ಜನೆ ಇತ್ಯಾದಿ ವಿಧಿವಿಧಾನಗಳನ್ನು ನೆರವೇರಿಸಬೇಕು. ಇಲ್ಲದಿದ್ದರೆ ಮುಕ್ತಿ ಸಿಗುವುದಿಲ್ಲ ಎಂಬ ನಂಬಿಕೆ ಹಿಂದೂಗಳಲ್ಲಿದೆ. ಶ್ರಾದ್ಧ, ಪಿಂಡದಾನ, ತರ್ಪಣ ಕ್ರಿಯೆಗಳಿಗೆ ಪಿತೃಪಕ್ಷ ಸರಿಯಾದ ಸಮಯ ಎಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಶ್ರಾದ್ಧ ಮಾಡಿದರೆ ನಮ್ಮ ಮೂರು ತಲೆಮಾರುಗಳ ಆತ್ಮಗಳಿಗೆ ಮುಕ್ತಿ ಸಿಗುತ್ತದೆ. ಪಿತೃಪಕ್ಷದ ಕೊನೆಯ ದಿನವಾದ ಮಹಾಲಯ ಅಮಾವಾಸ್ಯೆ ಬರುತ್ತದೆ. ಈ ವರ್ಷ ಇದು ಸೆಪ್ಟೆಂಬರ್ 25ರಂದು ಇಂದು ಇತ್ತು. ಅಮಾವಾಸ್ಯೆ ಆದ್ದರಿಂದ ಈ ದಿನದಂದು ಶ್ರಾದ್ಧ, ಪಿಂಡಪ್ರದಾನ, ತರ್ಪಣ ಬಿಡುವುದು ಬಹಳ ಉತ್ತಮ ಎಂದು ನಂಬಿದ ಜನರು ಕಿಕ್ಕಿರಿದು ಬಂದು ಕಾರ್ಯಗಳನ್ನು ಮುಗಿಸಿಕೊಂಡು ತೆರಳಿದ್ದಾರೆ.

English summary
Sunday is the last day of Pitru paksha. Many people thronged on the banks of Kaveri river in Srirangapatna to pay respects for the departed souls of their family. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X