ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಂದಿನ ವರ್ಷ ಐದು ದಿನಗಳ ವಿಜೃಂಭಣೆ ಶ್ರೀರಂಗಪಟ್ಟಣ ದಸರಾ ಆಚರಣೆ

|
Google Oneindia Kannada News

ಮಂಡ್ಯ, ಅಕ್ಟೋಬರ್ 11: ''ಕೊರೊನಾ ಮಹಾಮಾರಿ ನಿರ್ನಾಮವಾಗಿ, ಕೋವಿಡ್ ಇಲ್ಲದಂತಾದರೇ ಮುಂದಿನ ವರ್ಷ 5 ದಿನಗಳ ಕಾಲ ದಸರಾ ಆಚರಿಸೋಣ. ಕೊರೋನಾ ಮುಕ್ತವಾಗಲು ತಾಯಿ ಚಾಮುಂಡೇಶ್ವರಿ ದೇವಿಯನ್ನು ಪ್ರಾರ್ಥಿಸೋಣ,'' ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ತಿಳಿಸಿದರು.

ಶ್ರೀರಂಗಪಟ್ಟಣದ ಶ್ರೀರಂಗವೇದಿಕೆಯಲ್ಲಿ ನಡೆದ ಶ್ರೀರಂಗಪಟ್ಟಣ ದಸರಾ 2021ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಶ್ರೀರಂಗಪಟ್ಟಣದಲ್ಲಿ ಮೊದಲು ಪ್ರಾರಂಭವಾಗಿದ್ದು ದಸರಾ,ನಂತರ ಮೈಸೂರಿನಲ್ಲಿ ಪ್ರಾರಂಭವಾಯಿತು ಎಂದರು.

ಕರ್ನಾಟಕದಲ್ಲಿ ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ದಸರಾ ಮಾಡ್ತಿದ್ದೇವೆ, ಯುದ್ದದ ಸಾಮಾಗ್ರಿಗಳಿಗೆ ಪೂಜೆ ಮಾಡುವಂತ ಹಬ್ಬ ದಸರಾ ಎಂದರು.

ಮೈಸೂರಿನಲ್ಲೂ ದಸರಾ ಉದ್ಘಾಟನೆ ಮಾಡಲಾಗಿದೆ, ಶ್ರೀರಂಗಪಟ್ಟಣದಲ್ಲೂ ಯಶಸ್ವಿಯಾಗಿ ದಸರಾ ನಡೆಯುತ್ತಿದೆ ಎಂದರು.
ಕಳೆದ 2 ವರ್ಷದಿಂದ ಕೊರೊನಾ ಸಂದರ್ಭದಲ್ಲಿ ಸಾವು ನೋವುಗಳ ಮಧ್ಯೆ, ಇವತ್ತು ಇದ್ದವರು ನಾಳೆ ನಮ್ಮ ಜೊತೆ ಇರ್ತಿರಲ್ಲಿಲ್ಲ, ಕೊರೊನಾ ಬಂದು ಲಕ್ಷಾಂತರ ಜನ ಸಾವನ್ನಪ್ಪಿದಾರೆ, ಆದ್ದರಿಂದ ಕೊರೊನಾ ಮಹಾಮಾರಿ ತೊಲಗಲಿ ಈ ಮೂಲಕ ನಾಡದೇವತೆ ಜನರಿಗೆ ಒಳಿತನ್ನು ಮಾಡಲಿ ಎಂದು ಹಾರೈಸಿದರು.

ಬೊಮ್ಮಾಯಿ ಅವರ ಸರ್ಕಾರ ಯಶಸ್ವಿಯಾಗಲಿ, ಯಾವುದೇ ಕಾರಣಕ್ಕೂ ಮತ್ತೆ ಕೊರೊನಾ ಮಹಾಮಾರಿ ಬರದಂತೆ ತಾಯಿ ಚಾಮುಂಡೇಶ್ವರಿಯಲ್ಲಿ ಕೇಳಿಕೊಳ್ಳುತ್ತೇನೆ ಎಂದರು.

ಸಚಿವ ಡಾ.ಕೆ.ಸಿ.ನಾರಾಯಣ್ ಗೌಡ

ಸಚಿವ ಡಾ.ಕೆ.ಸಿ.ನಾರಾಯಣ್ ಗೌಡ

ನಂತರ ಮಾತನಾಡಿದ ಸಚಿವ ಡಾ.ಕೆ.ಸಿ.ನಾರಾಯಣ್ ಗೌಡ, ''ಈ ಬಾರಿಯ ಮೈಸೂರು ದಸರಾ ಉದ್ಘಾಟನೆ ಮಾಡಿರೋದು ಈ ಜಿಲ್ಲೆಯ ಮಣ್ಣಿನ ಮಗ, ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರು. ಇದು ನಮ್ಮೆಲ್ಲರ ಹೆಮ್ಮೆ ಎಂದು ನಾರಾಯಣ ಗೌಡ ಅವರು ಸಂತಸ ವ್ಯಕ್ತಪಡಿಸಿದರು.
ಶ್ರೀರಂಗಪಟ್ಟಣ ನಾಡಹಬ್ಬವನ್ನು ನಾವು ಕೂಡ ಯಶಸ್ವಿಯಾಗಿ ಆಚರಣೆ ಮಾಡಿದ್ದೇವೆ,'' ಎಂದರು.

ಆರ್, ಅಶೋಕ್ ನೇತೃತ್ವದಲ್ಲಿ ಕೊರೊನಾ ದಿಂದ ಸತ್ತವರ ಅಸ್ತಿಯನ್ನು ಬಿಟ್ಟು ಮುಕ್ತಿಕೊಟ್ಟಿದ್ದಾರೆ ಅವರಿಗೆ ಅಭಿನಂದನೆ ಸಲ್ಲಿಸ್ತೇನೆ ಎಂದರು.
ಮೂರು ದಿನ ಒಳ್ಳೆಯ ಕಾರ್ಯಕ್ರಮ ನಡೆಸಲಾಗಿದೆ,ಮುಂದಿನ ವರ್ಷ ಐದು ದಿನ ಕಾರ್ಯಕ್ರಮ ಮಾಡಲಾಗುತ್ತದೆ ಎಂದು ಹೇಳಿದರು.

ಈ ಕೊರೊನಾ ಮಹಾಮಾರಿ ಯಾವುದೇ ಕಾರಣಕ್ಕೂ ಬರಬಾರದು, ಆದಷ್ಟು ಬೇಗ ಕೊರೊನಾ ತೊಲಗಲಿ ನಮ್ಮ ಜನರ ಸಂಕಷ್ಟ ನಿವಾರಣೆಯಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ

ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ

ನಂತರ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, "ಈ ಬಾರಿ ಶ್ರೀರಂಗಪಟ್ಟಣ ದಸರಾ ಅರ್ಥಪೂರ್ಣವಾಗಿ ನಡೆದಿದೆ,'' ಎಂದರು.

2019 ರಲ್ಲಿ ಕುಮಾರಸ್ವಾಮಿ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ನೆಡೆದಿತ್ತು, ಮುಖ್ಯಮಂತ್ರಿ ಕುಮಾರಸ್ವಾಮಿ ಅದ್ದೂರಿಯಾಗಿ ದಸರಾ ನಡೆಸಿಕೊಟ್ಟಿದ್ದರು, ಶ್ರೀರಂಗಪಟ್ಟಣ ಮೊದಲು ದಸರಾ ಮಾಡ್ತಿದಂಥ ಜಾಗ, ಅದನ್ನು ಮುಂದುವರೆಸಿಕೊಂಡು ಹೋಗಲಿ ಎಂದರು.
ವೇದಿಕೆ ಕಾರ್ಯಕ್ರಮದಲ್ಲಿ ಸಚಿವರಿಗೆ ಮನವಿ ಮಾಡಿದ ಶಾಸಕ ರವೀಂದ್ರ ಶ್ರೀಕಂಠಯ್ಯ, ಶ್ರೀರಂಗಪಟ್ಟಣಕ್ಕೆ ಪ್ರತ್ಯೇಕ ಹಣ ಮೀಸಲಿಡುವಂತೆ ಆಗ್ರಹಿಸಿದರು.

ಶ್ರೀರಂಗಪಟ್ಟಣದ ಕೆ.ಆರ್.ಎಸ್. ಗ್ರಾಮ ಕಂದಾಯ ಗ್ರಾಮವಾಗಬೇಕು ಎಂಬ ನಿಟ್ಟಿನಲ್ಲಿ ಕೆ.ಆರ್.ಎಸ್ ಗ್ರಾಮ ಮ್ಯಾಪ್ ನಲ್ಲೆ ಇಲ್ಲ, ಅದನ್ನ ಪರಿಗಣಿಸಿ ಎಂದ ಕಂದಾಯ ಸಚಿವರಲ್ಲಿ ಮನವಿ ಮಾಡಿದ್ದೆ, ಇವತ್ತು ಕೆ.ಆರ್.ಎಸ್ ಗ್ರಾಮ ಎಂದು ಘೋಷಣೆಯಾಗಿದೆ,
ಕಂದಾಯ ಗ್ರಾಮವಾಗಿಸಿದ ಕಂದಾಯ ಸಚಿವ ಆರ್.ಅಶೋಕ್ ರಿಗೆ ಧನ್ಯವಾದ ಸಲ್ಲಿಸಿದರು.

ಸ್ಟಾರ್ ನೈಟ್ ಕಾರ್ಯಕ್ರಮ ಆಯೋಜನೆ

ಸ್ಟಾರ್ ನೈಟ್ ಕಾರ್ಯಕ್ರಮ ಆಯೋಜನೆ

ಕಾರ್ಯಕ್ರಮದಲ್ಲಿ ಶ್ರೀರಂಗಪಟ್ಟಣ ದಸರಾ ಹಿನ್ನೆಲೆಯಲ್ಲಿ ನಡೆದ ಹಲವು ಕ್ರೀಡೆಗಳಲ್ಲಿ ಭಾಗವಹಿಸಿ, ಮನರಂಜನೆ ನೀಡಿದ ಕ್ರೀಡಾಪಟುಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕೋವಿಡ್ ನಿರ್ಮೂಲನೆಗಾಗಿ ಹಗಲು- ರಾತ್ರಿ ದುಡಿದ ವಿವಿಧ ಇಲಾಖೆಗಳ ಕೊರೋನಾ ವಾರಿಯರ್ಸ್ ಗಳಿಗೆ ಸನ್ಮಾನವನ್ನು ಮಾಡಲಾಯಿತು‌.

ಶ್ರೀರಂಗಪಟ್ಟಣ ದಸರಾ ಹಿನ್ನೆಲೆಯಲ್ಲಿ ಖ್ಯಾತ ಚಲನಚಿತ್ರ ನಟಿಯರಾದ ಆಶಾ ಭಟ್ , ಮಾನ್ವಿತಾ ಹರೀಶ್, ಅದಿತಿ ಪ್ರಭುದೇವ್ ಹಾಗೂ ಮೇಘನಾ ಗಾವಂಕರ್ ತಂಡದವರಿಂದ ಫ್ಯಾಷನ್ ಶೋ - ಸ್ಟಾರ್ ನೈಟ್ ಕಾರ್ಯಕ್ರಮ ಆಯೋಜಿಸಲಾಗಿತ್ತು.

Recommended Video

ವಿರಾಟ್ ಎದೆಯಲ್ಲಿ ಎರಡು ನೋವು:ಕಣ್ಣೀರು ಹಾಕಿದ ವಿಡಿಯೋ ವೈರಲ್ | Oneindia Kannada
ಕಾರ್ಯಕ್ರಮದಲ್ಲಿ ಹಲವರು ಗಣ್ಯರ ಉಪಸ್ಥಿತಿ

ಕಾರ್ಯಕ್ರಮದಲ್ಲಿ ಹಲವರು ಗಣ್ಯರ ಉಪಸ್ಥಿತಿ

ಕಾರ್ಯಕ್ರಮದಲ್ಲಿ ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ನಾಗಮಂಗಲ ಶಾಸಕರಾದ ಸುರೇಶ್ ಗೌಡ್ರು, ಜಿಲ್ಲಾಧಿಕಾರಿ ಎಸ್.ಅಶ್ವತಿ, ಅಪರ ಜಿಲ್ಲಾಧಿಕಾರಿ ಶೈಲಜಾ, ಸಿಇಓ ದಿವ್ಯಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಅಶ್ವಿನಿ, ಪಾಂಡವಪುರ ಉಪವಿಭಾಗಧಿಕಾರಿ ಶಿವನಂದಮೂರ್ತಿ, ವೇದಬ್ರಹ್ಮ ಭಾನುಪ್ರಕಾಶ್ ಶರ್ಮ ವಾರ್ತಾಧಿಕಾರಿ ಟಿ.ಕೆ ಹರೀಶ್, ಶ್ರೀರಂಗಪಟ್ಟಣ ತಹಸೀಲ್ದಾರ್ ಶ್ವೇತಾ, ಶ್ರೀರಂಗಪಟ್ಟಣ ಪುರಸಭೆಯ ಅಧ್ಯಕ್ಷರು ಮತ್ತು ಸದಸ್ಯರುಗಳು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

English summary
Srirangapatna Dasara will be Five days celebration from next year amid of Covid pandemic: Minister R Ashoka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X