ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳು : ಐತಿಹಾಸಿಕ ಶ್ರೀರಂಗಪಟ್ಟಣ ದಸರಾ ಜಂಬೂ ಸವಾರಿ

|
Google Oneindia Kannada News

ಮಂಡ್ಯ, ಅಕ್ಟೋಬರ್ 16 : ಐತಿಹಾಸಿಕ ಶ್ರೀರಂಗಪಟ್ಟಣ ದಸರಾ ಮಹೋತ್ಸವ 2018ಕ್ಕೆ ಚಾಲನೆ ಸಿಕ್ಕಿದೆ. ಕೋಟೆಕೊತ್ತಲಗಳ ನಾಡು ಶ್ರೀರಂಗಪಟ್ಟಣದಲ್ಲಿ ಅಕ್ಟೋಬರ್ 16 ರಿಂದ 18ರ ತನಕ ದಸರಾ ಉತ್ಸವ ನಡೆಯಲಿದೆ.

ಮಂಗಳವಾರ ಅಧಿಕಾರಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ನಾಡದೇವತೆ ಚಾಮುಡೇಶ್ವರಿ ದೇವಿಯ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಜಂಬೂ ಸವಾರಿಗೆ ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರಿನಲ್ಲಿ ಚಾಲನೆ ನೀಡಲಾಯಿತು.

ಕೆಆರ್‌ಎಸ್ ಸುತ್ತಮುತ್ತ 20 ಕಿ.ಮೀ.ಯಲ್ಲಿ ಗಣಿಗಾರಿಕೆ ನಿಷೇಧಕೆಆರ್‌ಎಸ್ ಸುತ್ತಮುತ್ತ 20 ಕಿ.ಮೀ.ಯಲ್ಲಿ ಗಣಿಗಾರಿಕೆ ನಿಷೇಧ

ಜಂಬೂ ಸವಾರಿಗೂ ಮೊದಲೇ ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರಿನಲ್ಲಿರುವ ಬನ್ನಿ ಮಂಟಪದ ಹತ್ತಿರ ಭಾನುಪ್ರಕಾಶ್ ಶರ್ಮರವರ ಮಾರ್ಗದರ್ಶನದಲ್ಲಿ ಮಧ್ಯಾಹ್ನ 1.30 ಗಂಟೆಗೆ ನಂದಿಧ್ವಜ ಪೂಜೆ ನೆರವೇರಿತು. ನಂತರ ನಾಡದೇವತೆ ಶ್ರೀ ಚಾಮುಂಡೇಶ್ವರಿಗೆ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಿ, ಜಂಬೂ ಸವಾರಿ ಆರಂಭಿಸಲಾಯಿತು.

1,001 ಮೆಟ್ಟಿಲೇರಿ ಚಾಮುಂಡಿ ತಾಯಿಯ ದರ್ಶನ ಪಡೆದ ನಟಿ ಹರಿಪ್ರಿಯಾ1,001 ಮೆಟ್ಟಿಲೇರಿ ಚಾಮುಂಡಿ ತಾಯಿಯ ದರ್ಶನ ಪಡೆದ ನಟಿ ಹರಿಪ್ರಿಯಾ

ಜಂಬೂ ಸವಾರಿ ಕಿರಂಗೂರಿನ ಬನ್ನಿ ಮಂಟಪದಿಂದ ಹೊರಟು ಮೈಸೂರು-ಬೆಂಗಳೂರು ಹೆದ್ದಾರಿ ಮೂಲಕ ಸಂಚರಿಸಿ, ನಗರದ ಹಳೆ ಮಸೀದಿ ಮಾರ್ಗವಾಗಿ ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣವನ್ನು ತಲುಪಿತು.

ಮೈಸೂರು ಅರಮನೆಗಳ ಫಿರಂಗಿ ಇತಿಹಾಸವನ್ನು ನೋಡಿಮೈಸೂರು ಅರಮನೆಗಳ ಫಿರಂಗಿ ಇತಿಹಾಸವನ್ನು ನೋಡಿ

ಜಂಬೂ ಸವಾರಿಗೆ ಚಾಲನೆ

ಜಂಬೂ ಸವಾರಿಗೆ ಚಾಲನೆ

ಮಂಗಳವಾರ ಮಧ್ಯಾಹ್ನ 2.45ರ ಸುಮಾರಿಗೆ ಶುಭ ಲಗ್ನದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅವರು ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮೈಸೂರು ದಸರಾ - ವಿಶೇಷ ಪುರವಣಿ

ಕಲಾತಂಡಗಳ ಮೆರವಣಿಗೆ

ಕಲಾತಂಡಗಳ ಮೆರವಣಿಗೆ

ಮುಖ್ಯಮಂತ್ರಿಗಳು ಪುಷ್ಪಾರ್ಚನೆ ಮಾಡಿದ ಬಳಿಕ ಜಂಬೂ ಸವಾರಿ ಮೆರಮಣಿಗೆ ಆರಂಭವಾಯಿತು. ಸ್ಥಳೀಯ ಮತ್ತು ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದಿರುವ ವಿವಿಧ ಕಲಾತಂಡಗಳು ಮೆರವಣಿಯಲ್ಲಿ ಪಾಲ್ಗೊಂಡು ಅಂದವನ್ನು ಹೆಚ್ಚಿಸಿದವು.

ಸ್ತಬ್ಧ ಚಿತ್ರಗಳು ಭಾಗಿ

ಸ್ತಬ್ಧ ಚಿತ್ರಗಳು ಭಾಗಿ

ಮೆರವಣಿಗೆಯಲ್ಲಿ ಆರೋಗ್ಯ ಭಾರತ, ಅರಣ್ಯ ಸಂರಕ್ಷಣೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ, ರೇಷ್ಮೆ ಹುಳು ಸಾಕಣಿಕೆ, ಕೃಷಿ ಮಾಹಿತಿ, ತೋಟಗಾರಿಕೆ ಬೆಳೆಗಳ, ಮಾಹಿತಿಯುಳ್ಳ ಸ್ತಬ್ಧಚಿತ್ರಗಳಿದ್ದವು. ವಿಂಟೇಜ್ ಕಾರು ದಸರಾದ ಪ್ರಮುಖ ಆಕರ್ಷಣೆಯಾಗಿತ್ತು.

ವಿವಿಧ ಕಾರ್ಯಕ್ರಮ

ವಿವಿಧ ಕಾರ್ಯಕ್ರಮ

ಮೂರು ದಿನಗಳ ಶ್ರೀರಂಗಪಟ್ಟಣ ದಸರಾದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಮೈಸೂರು ಸಿಲ್ಕ್ ಹಾಗೂ ಕೊಡಿಯಾಲ ಕೈಮಗ್ಗದಿಂದ ನೇಯ್ಗೆಯಾಗುವ ಸೀರೆಗಳ ಫ್ಯಾಷನ್ ಶೋ ನಡೆಯಲಿದೆ. ಈ ಬಾರಿ ಕೆಆರ್‌ಎಸ್‌ನಲ್ಲಿಯೂ ದಸರಾ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆದವು. ಮುಖ್ಯಮಂತ್ರಿ ಕುಮಾರಸ್ವಾಮಿ ಕೆಆರ್‌ಎಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಶ್ರೀರಂಗಪಟ್ಟಣ ದಸರಾ ಹಿನ್ನಲೆ

ಶ್ರೀರಂಗಪಟ್ಟಣ ದಸರಾ ಹಿನ್ನಲೆ

1610ರಲ್ಲಿ ಶ್ರೀರಂಗಪಟ್ಟಣ ದಸರಾವನ್ನು ಆರಂಭಿಸಲಾಯಿತು ಎನ್ನುತ್ತದೆ ಇತಿಹಾಸ. ಮೊದಲು ದಸರಾ ಮಹೋತ್ಸವ ಇಲ್ಲಿಯೇ ನಡೆಯುತ್ತಿತ್ತು. ಬಳಿಕ ಮೈಸೂರಿಗೆ ಸ್ಥಳಾಂತರ ವಾಯಿತು. ಕಂಠೀರವ ನರಸರಾಜ ಒಡೆಯರ್ ಆಳ್ವಿಕೆಯಲ್ಲಿ ಶ್ರೀರಂಗಪಟ್ಟಣದಲ್ಲಿ ವೈಭವದಿಂದ ದಸರಾ ನಡೆಯುತ್ತಿತ್ತು.

English summary
The historical annual Srirangapatna Dasara festival 2018 began on October 16, 2018. A three-day cultural dasara will be celebrated from October 16 to 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X