• search
 • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಡ್ಯದಲ್ಲಿ ಆನ್‌ಲೈನ್ ಮೂಲಕವೇ ಪಿತೃತರ್ಪಣ ಕಾರ್ಯ

By ಮಂಡ್ಯ ಪ್ರತಿನಿಧಿ
|

ಮಂಡ್ಯ, ಸೆಪ್ಟೆಂಬರ್ 17: ಅಗಲಿದ ಪಿತೃಗಳಿಗೆ ಶ್ರೀರಂಗಪಟ್ಟಣದ ಕಾವೇರಿ ದಂಡೆಯಲ್ಲಿ ಪ್ರತಿ ವರ್ಷ ತರ್ಪಣ ನೀಡಲು ಪಿಂಡ ಪ್ರದಾನ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಭಯ ಎಲ್ಲಾ ಕಾರ್ಯಗಳಿಗೂ ಅಡ್ಡಿಯಾಗಿದೆ. ಹೀಗಾಗಿ ಈ ಬಾರಿ ತರ್ಪಣವನ್ನೂ ಆನ್ ಲೈನ್ ನಲ್ಲಿ ನೀಡುವ ಕಾರ್ಯ ನಡೆಯುತ್ತಿದೆ.

ಶ್ರೀರಂಗಪಟ್ಟಣದ ಶಾಶ್ವತಿ ಕ್ರಿಯಾ ಸಮಿತಿ ಆನ್‌ಲೈನ್ ನಲ್ಲೇ ಪೂಜೆಯನ್ನು ಆರಂಭಿಸಿದೆ.

ಪಿತೃಪಕ್ಷ ವಿಶೇಷ ಲೇಖನ: ಅಮಾವಾಸ್ಯೆಯ ಮೌನದಲ್ಲಿ ಹಿರಿಯರ ನೆನಪು

ಪ್ರತಿ ವರ್ಷ ಕಾವೇರಿ ದಂಡೆಯಲ್ಲಿ ತರ್ಪಣ ನೀಡಿ ಪಿಂಡಪ್ರದಾನ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಸೋಂಕಿನ ಭಯ ಇದಕ್ಕೆಲ್ಲ ಅಡ್ಡಿಯಾಗಿದೆ. ಹೀಗಾಗಿ ಪ್ರಸಿದ್ಧ ಪುರೋಹಿತರಾದ ಡಾ. ಭಾನುಪ್ರಕಾಶ್ ಶರ್ಮಾ ತಮ್ಮ 30 ಜನ ಶಿಷ್ಯರ ಜೊತೆಗೂಡಿ ಆನ್​ಲೈನ್​ ಮೂಲಕ ಶ್ರಾದ್ಧ ಕಾರ್ಯ ಮಾಡಿಸುತ್ತಿದ್ದಾರೆ.

   Modi ಹುಟ್ಟಿದ ಹಬ್ಬಕ್ಕೆ ಯಾರೆಲ್ಲಾ ಶುಭಾಶಯ ಕೋರಿದ್ದಾರೆ ನೋಡಿ | Oneindia Kannada

   ಈ ಆನ್ ಲೈನ್ ಪೂಜೆಗೆ ಒಳ್ಳೆ ಪ್ರತಿಕ್ರಿಯೆಯೂ ಸಿಕ್ಕಿದೆಯಂತೆ. ಆನ್‌ಲೈನ್‌ ಮೂಲಕ ಪೂಜೆ ಮಾಡಿಸುವವರ ಮಾಹಿತಿ ಪಡೆದು ಪಿಂಡಪ್ರದಾನ, ತಿಲತರ್ಪಣ, ನಾರಾಯಣ ಬಲಿಯಂತಹ ಪೂಜೆ ನೆರವೇರಿಸಲಾಗುತ್ತಿದೆ. ಕೊರೊನಾ ಕಾರಣದಿಂದ ಬರಲಾಗದವರು ಆನ್​ಲೈನ್ ಮೂಲಕವೇ ಪೂಜೆ ಮಾಡಿಸಿ ಅಗಲಿದ ತಮ್ಮ ಪಿತೃಗಳಿಗೆ ಸದ್ಗತಿ ಕೋರುತ್ತಿದ್ದಾರೆ. ಇದ್ದಲ್ಲಿಂದಲೇ ಪೂಜೆಯನ್ನು ನೆರವೇರಿಸುತ್ತಿದ್ದಾರೆ.

   English summary
   Shashwathi Kriya Samithi conducting online pitru paksha puja in srirangapatna of mandya,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X