ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯದಲ್ಲಿ ದಳಪತಿಗಳಿಂದ ಸುಮಲತಾರನ್ನು ಮಣಿಸಲು ತಂತ್ರ..!

|
Google Oneindia Kannada News

Recommended Video

Lok Sabha Elections 2019 : ಸುಮಲತಾರನ್ನು ಸೋಲಿಸಲು ಜೆಡಿಎಸ್ ಮಾಡಿದ ಮಹಾಪ್ಲ್ಯಾನ್ ಇದು

ಮಂಡ್ಯ, ಮಾರ್ಚ್ 31: ಮಂಡ್ಯ ಲೋಕಸಮರ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಒಂದು ಕಾಲದಲ್ಲಿ ಅಂಬರೀಶ್ ಅವರ ಗೆಳೆಯರು, ಬೆಂಬಲಿಗರಾಗಿದ್ದವರೆಲ್ಲರೂ ಇದೀಗ ಅವರ ಪತ್ನಿ ಸುಮಲತಾ ರಾಜಕೀಯ ಅಖಾಡಕ್ಕಿಳಿಯುತ್ತಿದ್ದಂತೆಯೇ ರಾಜಕೀಯ ಶತ್ರುಗಳಾಗಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಹೋದಲ್ಲಿ ಬಂದಲ್ಲಿ ಸುಮಲತಾ ಅವರನ್ನು ಟಾರ್ಗೆಟ್ ಮಾಡಿಕೊಂಡು ಹೇಳಿಕೆ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ ಹೇಗೆಲ್ಲ ಬಗ್ಗು ಬಡಿಯಬಹುದು ಎಂಬ ಬಗ್ಗೆ ಆಲೋಚಿಸುತ್ತಾ ತಮ್ಮ ರಾಜಕೀಯ ಪ್ರಭಾವ ಮತ್ತು ಅಧಿಕಾರ ಬಳಸಿಕೊಂಡು ತುಳಿಯುವ ಎಲ್ಲ ತಂತ್ರಗಳನ್ನು ಮಾಡುತ್ತಿದ್ದಾರೆ.

ಅಂಬಿ ಹುಟ್ಟೂರಿನ ಮಂದಿ ಸುಮಲತಾ ಬಗ್ಗೆ ಹೇಳುವುದೇನು?ಅಂಬಿ ಹುಟ್ಟೂರಿನ ಮಂದಿ ಸುಮಲತಾ ಬಗ್ಗೆ ಹೇಳುವುದೇನು?

ಆದರೆ ತನ್ನ ಪ್ರಬುದ್ಧತೆಯನ್ನು ಎಲ್ಲೂ ಬಿಟ್ಟುಕೊಡದ ಸುಮಲತಾ ಅವರು ಎಲ್ಲಿಯೂ ಯಾರ ಬಗ್ಗೆಯೂ ವೈಯಕ್ತಿವಾಗಿ ಟೀಕೆ ಮಾಡದೆ ತಮ್ಮ ಬಗ್ಗೆ ಟೀಕೆ ಮಾಡುತ್ತಿರುವ ನಾಯಕರಿಗೆ ಗೌರವಯುತವಾಗಿಯೇ ಟಾಂಗ್ ನೀಡುತ್ತಿರುವುದು ನಿಜಕ್ಕೂ ಮೆಚ್ಚಬೇಕಾದ ಸಂಗತಿಯಾಗಿದೆ.

ಲೋಕಸಭೆ ಚುನಾವಣೆ 2019: ಸಕ್ಕರೆ ನಾಡು ಮಂಡ್ಯ ಕ್ಷೇತ್ರದ ಪರಿಚಯಲೋಕಸಭೆ ಚುನಾವಣೆ 2019: ಸಕ್ಕರೆ ನಾಡು ಮಂಡ್ಯ ಕ್ಷೇತ್ರದ ಪರಿಚಯ

ಇವತ್ತು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಎಲ್ಲವೂ ಜೆಡಿಎಸ್ ಮಯವೇ.. ಹೀಗಿರುವಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಗೆಲುವು ಕಷ್ಟವೇನಲ್ಲ. ಆದರೂ ಸುಮಲತಾ ಅವರಿಗೆ ಬಿಜೆಪಿ ಬೆಂಬಲ ನೀಡಿದೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮುಗಿಬಿದ್ದು ಟೀಕೆ ಮಾಡತೊಡಗಿದ್ದಾರೆ. ಆದರೆ ಇಲ್ಲಿ ಅಚ್ಚರಿಯ ವಿಚಾರವೇನೆಂದರೆ ಒಂದಷ್ಟು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಂಬರೀಶ್ ಅಭಿಮಾನಿಗಳು ಪಕ್ಷಬೇಧ ಮರೆತು ಸುಮಲತಾ ಅವರ ಬೆನ್ನಿಗೆ ನಿಂತಿರುವುದಾಗಿದೆ. ಮುಂದೆ ಓದಿ...

ಸುಮಲತಾ ಬಗ್ಗೆ ಕೀಳುಮಟ್ಟದ ಹೇಳಿಕೆ

ಸುಮಲತಾ ಬಗ್ಗೆ ಕೀಳುಮಟ್ಟದ ಹೇಳಿಕೆ

ಕೆಲವು ನಾಯಕರು ಒಬ್ಬ ಮಹಿಳೆ ಎಂಬುದನ್ನು ಮರೆತು ಕೀಳುಮಟ್ಟದಲ್ಲಿ ಮಾತನಾಡಲು ಮುಂದಾಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಏನೇ ಆದರೂ ತನ್ನ ಪುತ್ರನನ್ನು ಗೆಲ್ಲಿಸಲೇ ಬೇಕೆಂಬ ಹಠಕ್ಕೆ ಬಿದ್ದಿರುವ ಸಿಎಂ ಕುಮಾರಸ್ವಾಮಿ ಅವರು ಚುನಾವಣೆಯನ್ನು ಒಂದೊಳ್ಳೆಯ ಸೌಹಾರ್ದಯುತ ಸ್ಪರ್ಧೆಯಾಗಿ ಪರಿಗಣಿಸದೆ ರೊಚ್ಚಿಗೆದ್ದವರಂತೆ ವರ್ತಿಸುತ್ತಿರುವುದು ರಾಜ್ಯಕ್ಕೆ ಯಾವ ರೀತಿಯ ಸಂದೇಶವನ್ನು ರವಾನಿಸುತ್ತಿದೆ ಎಂಬುದನ್ನು ಮನಗಾಣಬೇಕಿದೆ. ಈಗಾಗಲೇ ಸುಮಲತಾ ಅವರನ್ನು ಚುನಾವಣೆಗೆ ಮುನ್ನವೇ ಯಾವ ರೀತಿಯಲ್ಲೆಲ್ಲ ಮಣಿಸಬಹುದೋ ಅದೆಲ್ಲ ತಂತ್ರವನ್ನು ಮಾಡುತ್ತಲೇ ಬರುತ್ತಿದ್ದು, ಇಲ್ಲಸಲ್ಲದ ಆರೋಪವನ್ನು ಮಾಡುತ್ತಾ ಜನರಲ್ಲಿ ಸುಮಲತಾ ಅವರ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡುವ ಪ್ರಯತ್ನವೂ ಕೆಲವು ನಾಯಕರಿಂದ ನಡೆಯುತ್ತಿದೆ.

ಕಹಳೆ ಊದುತ್ತಿರುವ ರೈತನ ಗುರುತು

ಕಹಳೆ ಊದುತ್ತಿರುವ ರೈತನ ಗುರುತು

ಈ ನಡುವೆ ಚುನಾವಣೆಗೆ ಅಗತ್ಯವಾಗಿರುವ ಮತ್ತು ಸುಮಲತಾ ಅವರು ಬಯಸಿರುವ ಕಹಳೆ ಊದುತ್ತಿರುವ ರೈತ ಚಿಹ್ನೆ ಸಿಕ್ಕಿದೆಯಾದರೂ ಅವರ ಕ್ರಮ ಸಂಖ್ಯೆ ಕೊನೆಯಲ್ಲಿ ನೀಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಇಲ್ಲಿಯೂ ಪ್ರಭಾವ ಬಳಸಲಾಗಿದೆಯಾ? ಎಂಬ ಪ್ರಶ್ನಾರೋಪವೂ ಕೇಳಿ ಬರತೊಡಗಿದೆ.

ಚಿಹ್ನೆ ಸಿಗುವಾಗಲೂ ಅವರು ಹೋರಾಡಿ ಪಡೆಯುವಂತಾಗಿತ್ತು. ಪಕ್ಷೇತರರಾಗಿ ಸ್ಪರ್ಧಿಸಿದ್ದ ಸುಮಲತಾ ಅವರು ತೆಂಗಿನ ತೋಟ, ಕಹಳೆ ಊದುತ್ತಿರುವ ರೈತ, ಕಬ್ಬಿನ ಗದ್ದೆ ಮುಂದೆ ನಿಂತಿರುವ ರೈತ ಚಿಹ್ನೆಗಳನ್ನು ಬಯಸಿದ್ದರು. ಆದರೆ, ತೆಂಗಿನ ತೋಟ ಹಾಗೂ ಕಬ್ಬಿನ ಗದ್ದೆ ಮುಂದೆ ನಿಂತಿರುವ ರೈತನ ಚಿಹ್ನೆಗಳು ಇತರೆ ಪಕ್ಷೇತರರ ಪಾಲಾಗಿ, ಸುಮಲತಾ ಅವರಿಗೆ ತಳ್ಳೋ ಗಾಡಿ ಚಿಹ್ನೆ ಬಂದಿತ್ತು. ಇದರಿಂದಾಗಿ ಸುಮಲತಾ ಅವರ ಚುನಾವಣಾ ಏಜೆಂಟ್ ಮದನ್ ಅವರು, ಕಹಳೆ ಊದುತ್ತಿರುವ ರೈತನ ಗುರುತನ್ನು ನೀಡುವಂತೆ ಜಿಲ್ಲಾ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಕೊನೆಗೂ ಅವರ ಮನವಿ ಸ್ಪಂದಿಸಿದ ಜಿಲ್ಲಾ ಚುನಾವಣಾಧಿಕಾರಿ ಎನ್. ಮಂಜುಶ್ರೀ ಅವರು ಕಹಳೆ ಊದುತ್ತಿರುವ ರೈತನ ಗುರುತನ್ನು ನೀಡಿದ್ದರು.

ಚುನಾವಣಾ ಚಿಹ್ನೆ: ಸುಮಲತಾ ಕೇಳಿದ್ದಾವುದು, ಆಯೋಗ ಕೊಟ್ಟಿದ್ದು ಯಾವುದು?ಚುನಾವಣಾ ಚಿಹ್ನೆ: ಸುಮಲತಾ ಕೇಳಿದ್ದಾವುದು, ಆಯೋಗ ಕೊಟ್ಟಿದ್ದು ಯಾವುದು?

ಇದು ಅವರಿಗೆ ಹಿನ್ನಡೆಯಾಗುತ್ತಾ?

ಇದು ಅವರಿಗೆ ಹಿನ್ನಡೆಯಾಗುತ್ತಾ?

ಸದ್ಯ ತಾವು ಬಯಸಿದ ಚಿಹ್ನೆ ಸಿಕ್ಕಿತಲ್ಲ ಎಂದು ಸಂತೋಷ ಪಡುವ ವೇಳೆಗೆ ಅವರ ಕ್ರಮಾಂಕ ಕೆಳಕ್ಕೆ ತಳ್ಳಲ್ಪಟ್ಟಿದೆ ಎಂದು ಹೇಳಲಾಗುತ್ತಿದೆ. ಇದು ಅವರಿಗೆ ಹಿನ್ನಡೆಯಾಗುತ್ತಾ ಎಂಬ ಭಯವೂ ಬೆಂಬಲಿಗರನ್ನು ಕಾಡತೊಡಗಿದೆ.ಇದೆಲ್ಲದರ ನಡುವೆ ಅಭ್ಯರ್ಥಿಯೊಬ್ಬರ ನಾಮಪತ್ರದಲ್ಲಿನ ನ್ಯೂನ್ಯತೆಯಲ್ಲಿರುವ ತಪ್ಪನ್ನು ಮುಚ್ಚಿಡಲು ಆಡಳಿತ ಯಂತ್ರ ಸಹಕರಿಸುತ್ತಿದೆ ಎಂದು ಆರೋಪಿಸಿದಕ್ಕೆ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎ. ಸುಮಲತಾ ಅವರಿಗೆ ಜಿಲ್ಲಾ ಚುನಾವಣಾಕಾರಿ ಎನ್. ಮಂಜುಶ್ರೀ ನೋಟಿಸ್ ಜಾರಿಗೊಳಿಸಿದ್ದಾರೆ. ಮುಖ್ಯಮಂತ್ರಿ ಅವರು ಜಿಲ್ಲಾಧಿಕಾರಿ ಅವರನ್ನು ತಾವಿರುವ ಸ್ಥಳಕ್ಕೆ ಕರೆಸಿಕೊಂಡು ಮಾತನಾಡಿದ್ದಾರೆ ಎಂಬ ಮಾಹಿತಿ ನನಗೆ ಸಿಕ್ಕಿದೆ. ಇದು ಸಂಪೂರ್ಣವಾಗಿ ಕಾನೂನುಬಾಹಿರ. ಇಂತಹದ್ದು ಎಲ್ಲೂ ನಡೆಯಲ್ಲ ಎಂದು ಹೇಳಿರುವ ಸುಮಲತಾ ಅವರ ವಿಡಿಯೋ ಪ್ರಸಾರವನ್ನು ಆಧರಿಸಿ ನೋಟಿಸ್ ಜಾರಿ ಮಾಡಿದ್ದಾರೆ.

ಸುಮಲತಾ ಅಂಬರೀಶ್ ಪತ್ರಿಕಾಗೋಷ್ಠಿ highlights ಸುಮಲತಾ ಅಂಬರೀಶ್ ಪತ್ರಿಕಾಗೋಷ್ಠಿ highlights

ನೋಟೀಸ್ ಜಾರಿ ಮಾಡಿದ ಜಿಲ್ಲಾಧಿಕಾರಿ

ನೋಟೀಸ್ ಜಾರಿ ಮಾಡಿದ ಜಿಲ್ಲಾಧಿಕಾರಿ

"ಸುಮಲತಾ ಅವರ ಹೇಳಿಕೆಯಲ್ಲಿನ ಅಂಶಗಳು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಯಾಗಿರುವ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತಂದಿದೆ. ಸಾಮಾಜಿಕವಾಗಿ ನನ್ನ ವ್ಯಕ್ತಿತ್ವವನ್ನು ಘಾಸಿಗೊಳಿಸುವ ಉದ್ದೇಶದಿಂದ ಊಹಾಪೋಹದ ಮಾಹಿತಿಯನ್ನು ಆಧಿಕೃತ ಎಂದು ಹೇಳಿಕೆ ನೀಡಿರುವುದು ಕಂಡುಬಂದಿದೆ. ಈ ಹೇಳಿಕೆ ನನ್ನ ಇಡೀ ವೃತ್ತಿ ಜೀವನದಲ್ಲಿ ಅತ್ಯಂತ ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ನಡೆಸಿರುವ ಆಡಳಿತಕ್ಕೆ ಧಕ್ಕೆ ತಂದಿದೆ" ಎಂದು ತಿಳಿಸಿ ಮಂಡ್ಯ ಜಿಲ್ಲಾಧಿಕಾರಿ ನೋಟೀಸ್ ಜಾರಿ ಮಾಡಿದ್ದಾರೆ.

ರಾಜಕೀಯಕ್ಕೆ ಬರಲು ಪ್ರಮುಖ ಕಾರಣ ಕಾಂಗ್ರೆಸ್ ಕಾರ್ಯಕರ್ತರು:ಸುಮಲತಾ ಸಂದರ್ಶನರಾಜಕೀಯಕ್ಕೆ ಬರಲು ಪ್ರಮುಖ ಕಾರಣ ಕಾಂಗ್ರೆಸ್ ಕಾರ್ಯಕರ್ತರು:ಸುಮಲತಾ ಸಂದರ್ಶನ

English summary
Some JDS leaders giving misleading statement about Sumalatha at campaign time.Meanwhile Mandya Deputy Commissioner issued notice to Sumalata. Here's a brief report on this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X