ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುತಾತ್ಮ ಯೋಧ ಗುರು ಕುಟುಂಬದಲ್ಲಿ ಸ್ಮಶಾನ ಮೌನ

|
Google Oneindia Kannada News

ಮೈಸೂರು, ಫೆಬ್ರವರಿ 17: ಹುತಾತ್ಮ ಯೋಧ ಗುರು ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಅವರ ಮನೆಯಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ. ಮಗನಿಲ್ಲದ ಪೋಷಕರು, ಗಂಡನಿಲ್ಲದ ಪತ್ನಿ ಕಲಾವತಿ ರೋಧನ ಒಮ್ಮೆ ಆಗಸವನ್ನೇ ಬಗೆದು ಬಿಡಬೇಕೆಂಬ ರೋಷಾವೇಶ ಹೆಚ್ಚಿಸುತ್ತದೆ.

ಅಂತ್ಯಕ್ರಿಯೆ ಬಳಿಕ ಕಲಾವತಿ, ಗುರುವಿನ ತಂದೆ - ತಾಯಿ ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥ ಅತ್ತೆ ಜಯಮ್ಮ, ಮಾವ ಶಿವಣ್ಣಗೆ ಮದ್ದೂರಿನ ಕೆಎಂ ದೊಡ್ಡಿಯಲ್ಲಿರುವ ಮಾದೇಗೌಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಮೂರು ದಿನಗಳಿಂದ ರೋಧಿಸಿ ಕಂಗಾಲಾಗಿದ್ದ ಕಲಾವತಿ, ನಿದ್ದೆಯಲ್ಲೂ ಪತಿಯನ್ನೇ ಕನವರಿಸುತ್ತಿದ್ದಾರೆ.

ಸರಕಾರಿ ಗೌರವದೊಂದಿಗೆ ಕೆ.ಎಂ.ದೊಡ್ಡಿಯಲ್ಲಿ ಹುತಾತ್ಮ ಯೋಧ ಗುರು ಅಂತ್ಯಕ್ರಿಯೆಸರಕಾರಿ ಗೌರವದೊಂದಿಗೆ ಕೆ.ಎಂ.ದೊಡ್ಡಿಯಲ್ಲಿ ಹುತಾತ್ಮ ಯೋಧ ಗುರು ಅಂತ್ಯಕ್ರಿಯೆ

ಇತ್ತ ಹುತಾತ್ಮರಾದ ಯೋಧ ಎಚ್. ಗುರು ನಿವಾಸಕ್ಕೆ ಸೇನಾ ಸಿಬ್ಬಂದಿ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಗುರು ಅವರ ಪೋಷಕರು, ಸಹೋದರರನ್ನು ಭೇಟಿ ಮಾಡಿದ ಅಧಿಕಾರಿಗಳು ಸಾಂತ್ವನ ಹೇಳಿದ್ದು, ಗುರು ಅವರ ಬಟ್ಟೆಗಳನ್ನು ವಾಪಸ್ ನೀಡುವ ಬಗ್ಗೆ ಚರ್ಚೆ ನಡೆಸಿದ್ದಾರೆ.

Soldier Guru family members are hospitalized in Mandya

ಭಾರತದ ಜತೆಗೆ ನೇರ ಯುದ್ಧ ಮಾಡಲು ಪಾಕಿಸ್ತಾನಕ್ಕೆ ಆಗಲ್ಲ: ಕರಂದ್ಲಾಜೆ ಭಾರತದ ಜತೆಗೆ ನೇರ ಯುದ್ಧ ಮಾಡಲು ಪಾಕಿಸ್ತಾನಕ್ಕೆ ಆಗಲ್ಲ: ಕರಂದ್ಲಾಜೆ

ಗುರು ಸೇನೆಗೆ ಸೇರಿ ಎಷ್ಟು ವರ್ಷವಾಯಿತು? ಯಾವ ಅಕೌಂಟ್ ಹೊಂದಿದ್ದಾರೆ? ನಾಮಿನಿ ಯಾರು? ಮೊದಲಾದ ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಕುಟುಂಬದವರಿಗೆ ಧೈರ್ಯ ಹೇಳುತ್ತಿದ್ದಾರೆ.

English summary
Soldier Guru Aunt and uncle hospitalized because of tiredness. Army people came to guru house for personal details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X