ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಗಿಯದ ನಿಖಿಲ್ ನಾಮಪತ್ರ ಗೊಂದಲ: ಅಸಿಂಧುಗೊಳಿಸುವಂತೆ ಮತ್ತೆ ದೂರು

|
Google Oneindia Kannada News

Recommended Video

Lok Sabha Elections 2019 : ಮುಗಿಯದ ನಿಖಿಲ್ ನಾಮಪತ್ರ ಗೊಂದಲ | Oneindia Kannada

ಮಂಡ್ಯ, ಏಪ್ರಿಲ್ 01: ನಿಖಿಲ್ ಕುಮಾರಸ್ವಾಮಿ ನಾಮಪತ್ರ ಗೊಂದಲ ಪರಿಹಾರವಾಗುತ್ತಲೇ ಇಲ್ಲ, ಮೊದಲಿಗೆ ನಿಖಿಲ್ ಹಳೆಯ ಮಾದರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ ಎನ್ನಲಾಗಿತ್ತು, ಆ ನಂತರ ಅವಧಿ ಮುಗಿದಮೇಲೆ ನಾಮಪತ್ರ ಸಲ್ಲಿಸಿದ್ದಾರೆ ಎನ್ನಲಾಗಿತ್ತು, ಈಗ ಮತ್ತಪೊಂದು ಆರೋಪವು ನಿಖಿಲ್ ನಾಮಪತ್ರದ ಬಗ್ಗೆಯೇ ಮಾಡಲಾಗುತ್ತಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ನಾಮಪತ್ರ ಸಲ್ಲಿಸುವಾಗ ನಿಖಿಲ್ ಕುಮಾರಸ್ವಾಮಿ ನೀಡಿರುವ ಮಾಹಿತಿ ಸುಳ್ಳು ಎಂದು ಸಾಮಾಜಿಕ ಹೋರಾಟಗಾರರೊಬ್ಬರು ಆಕ್ಷೇಪಣೆ ತೆಗೆದಿದ್ದು, ರಾಜ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದು, ನಿಖಿಲ್ ಅವರ ನಾಮಪತ್ರ ಅಸಿಂಧುಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

ರಾಜ್ಯದ ಸಂಸದರಲ್ಲಿ ಯಾರ ವಿರುದ್ಧ ಎಷ್ಟು ಕ್ರಿಮಿನಲ್ ಪ್ರಕರಣಗಳಿವೆ?

ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಮತದಾರರ ಗುರುತಿನ ಚೀಟಿಯ ಸಂಖ್ಯೆಯನ್ನು ತಪ್ಪು ನೀಡಿದ್ದಾರೆ ಎಂಬುದು ಸಾಮಾಜಿಕ ಹೋರಾಟಗಾರ ಬಿ.ಎಸ್.ಗೌಡ ಅವರ ವಾದವಾಗಿದ್ದು, ಅದಕ್ಕೆ ಪೂರಕವಾಗಿ ಸಾಕ್ಷ್ಯಗಳನ್ನೂ ರವಾನಿಸುವುದಾಗಿ ಹೇಳಿದ್ದಾರೆ.

ನಿಖಿಲ್ ನಾಮಪತ್ರ ಸರಿಯಾಗಿದೆ: ಚುನಾವಣಾ ಆಯೋಗಕ್ಕೆ ವರದಿ ನಿಖಿಲ್ ನಾಮಪತ್ರ ಸರಿಯಾಗಿದೆ: ಚುನಾವಣಾ ಆಯೋಗಕ್ಕೆ ವರದಿ

ಮತದಾರರ ಪಟ್ಟಿಯಲ್ಲಿ ನಿಕಿಲ್ ಕುಮಾರಸ್ವಾಮಿ ಎಂದಿದೆ, ಆದರೆ ಅವರು ಸಲ್ಲಿಸಿರುವ ನಾಮಪತ್ರದಲ್ಲಿ ನಿಖಿಲ್ ಕೆ ಎಂದು ಮಾತ್ರವೇ ಇದೆ. ಹೀಗಾಗಿ ನಿಖಿಲ್ ನಾಮಪತ್ರ ಅಸಿಂಧುಗೊಳಿಸಬೇಕು ಎಂದು ಅವರು ದೂರಿದ್ದಾರೆ.

ನಿಖಿಲ್ ನಾಮಪತ್ರದ ಬಗ್ಗೆ ಟಿ.ಜೆ.ಅಬ್ರಹಂ ಆರೋಪ

ನಿಖಿಲ್ ನಾಮಪತ್ರದ ಬಗ್ಗೆ ಟಿ.ಜೆ.ಅಬ್ರಹಂ ಆರೋಪ

ಮತ್ತೊಬ್ಬ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ನಿಖಿಲ್ ನಾಮಪತ್ರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ನಾಮಪತ್ರದೊಂದಿಗೆ ಸಲ್ಲಿಸಿರುವ ಆಸ್ತಿ ವಿವರದಲ್ಲಿ ನಿಖಿಲ್ ಅವರು ಮೈ ರೀಡ್ ಮಾರ್ಕೆಟ್ ಸಂಸ್ಥೆಯಿಂದ 50 ಲಕ್ಷ ರೂಪಾಯಿ ಸಾಲ ಪಡೆದಿದ್ದಾಗಿ ನಮೂದಿಸಿದ್ದಾರೆ, ಆದರೆ ಹಾಗೊಂದು ಸಂಸ್ಥೆಯೇ ಇಲ್ಲ ಎಂದು ಆರೋಪಿಸಿದ್ದಾರೆ.

ನಿಖಿಲ್ ಕುಮಾರಸ್ವಾಮಿ ನಾಮಪತ್ರ ಅಸಿಂಧು ಪ್ರಶ್ನೆಯೇ ಇಲ್ಲ: ಚುನಾವಣಾ ಆಯುಕ್ತ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಅಸಿಂಧು ಪ್ರಶ್ನೆಯೇ ಇಲ್ಲ: ಚುನಾವಣಾ ಆಯುಕ್ತ

ಫಿಜ್ಹಾ ಡೆವೆಲಪರ್ಸ್‌ನಿಂದ 11 ಕೋಟಿ ಮುಂಗಡ

ಫಿಜ್ಹಾ ಡೆವೆಲಪರ್ಸ್‌ನಿಂದ 11 ಕೋಟಿ ಮುಂಗಡ

ಫಿಜ್ಹಾ ಡೆವೆಲಪರ್ಸ್‌ನಿಂದ 11 ಕೋಟಿ ಮುಂಗಡಪಡೆದಿರುವುದಾಗಿ ನಿಖಿಲ್ ನಮೂದಿಸಿದ್ದಾರೆ, ಆದರೆ ಯಾವ ಕಾರಣಕ್ಕೆ, ಯಾವ ಜಮೀನಿಗಾಗಿ ಪಡೆದಿದ್ದಾರೆ ಎಂದು ನಮೂದಿಸಿಲ್ಲ, ಅಲ್ಲದೆ ಫಿಜ್ಹಾ ಸಂಸ್ಥೆಯು ಕೊನೆಯದಾಗಿ ಆದಾಯ ತೆರಿಗೆ ಮಾಹಿತಿ ಸಲ್ಲಿಸಿರುವುದು 2017 ರಲ್ಲಿ ಹಾಗಾಗಿ ಈ ಬಗ್ಗೆಯೂ ಸೂಕ್ತ ತನಿಖೆ ಆಗಬೇಕು ಎಂದು ಅವರು ಆರೋಪಿಸಿದರು.

ನಿಖಿಲ್ ಕುಮಾರಸ್ವಾಮಿ ನಾಮಪತ್ರ ಕಾನೂನು ಬದ್ಧ: ಚುನಾವಣಾಧಿಕಾರಿನಿಖಿಲ್ ಕುಮಾರಸ್ವಾಮಿ ನಾಮಪತ್ರ ಕಾನೂನು ಬದ್ಧ: ಚುನಾವಣಾಧಿಕಾರಿ

ಸುಮಲತಾ ಸಹ ದೂರು ನೀಡಿದ್ದರು

ಸುಮಲತಾ ಸಹ ದೂರು ನೀಡಿದ್ದರು

ಸುಮಲತಾ ಪರ ಚುನಾವಣಾ ಏಜೆಂಟ್‌ ಅವರು ಸಹ ನಿಖಿಲ್ ಕುಮಾರಸ್ವಾಮಿ ನಾಮಪತ್ರಕ್ಕೆ ಸಂಬಂಧಿಸಿದಂತೆ ಆಯೋಗಕ್ಕೆ ದೂರು ನೀಡಿದ್ದರು, ಅವಧಿ ಮುಗಿದ ನಂತರ ನಾಮಪತ್ರ ಪುನಃ ಸಲ್ಲಿಸಲಾಗಿದೆ ಎಂಬುದು ಅವರ ಆರೋಪವಾಗಿತ್ತು, ಆದರೆ ಜಿಲ್ಲಾ ಚುನಾವಣಾಧಿಕಾರಿಗಳು ಅದನ್ನು ತಳ್ಳಿ ಹಾಕಿ ಸ್ಪಷ್ಟನೆ ನೀಡಿದ್ದರು. ಆದರೂ ಸಹ ಸುಮಲತಾ ಅವರ ಏಜೆಂಟ್‌ಗಳ ಅಸಹನೆ ಕಡಿಮೆ ಆಗಿರಲಿಲ್ಲ.

ನಿಖಿಲ್ ನಾಮಪತ್ರ ಅಸಿಂಧುಗೊಳಿಸಲು ಚುನಾವಣಾ ಆಯೋಗಕ್ಕೆ ಮನವಿ ನಿಖಿಲ್ ನಾಮಪತ್ರ ಅಸಿಂಧುಗೊಳಿಸಲು ಚುನಾವಣಾ ಆಯೋಗಕ್ಕೆ ಮನವಿ

ಮಂಡ್ಯಕ್ಕೆ ಆಗಮಿಸಿದ್ದ ರಾಜ್ಯ ಚುನಾವಣಾ ಆಯುಕ್ತ

ಮಂಡ್ಯಕ್ಕೆ ಆಗಮಿಸಿದ್ದ ರಾಜ್ಯ ಚುನಾವಣಾ ಆಯುಕ್ತ

ಶನಿವಾರ ಮಂಡ್ಯಕ್ಕೆ ಆಗಮಿಸಿದ್ದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು, ಪರಿಶೀಲನೆ ನಡೆಸಿ ನಿಖಿಲ್ ಅವರ ನಾಮಪತ್ರ ಅಸಿಂಧು ಪ್ರಶ್ನೆಯೇ ಇಲ್ಲ, ಬೇಕಿದ್ದರೆ ನ್ಯಾಯಾಲಯಕ್ಕೆ ಹೋಗಿ ಮತದಾನಕ್ಕೆ ತಡೆ ತರಬಹುದು ಎಂದು ಹೇಳಿದ್ದಾರೆ. ಜೊತೆಗೆ ಜಿಲ್ಲಾ ಚುನಾವಣಾಧಿಕಾರಿಗಳು ಕರ್ತವ್ಯ ಲೋಪದ ಬಗ್ಗೆಯೂ ತನಿಖೆ ಆಗಲಿದೆ ಎಂದೂ ಸಹ ಹೇಳಿದ್ದಾರೆ.

English summary
Social worker BS Gowda wrote letter to sate EC to invalid Nikhil Kumaraswamy's nomination. He wrotes Nikhil given wrong details. Other Social worker TJ Abreham also requested EC to invalid his nomination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X