ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕ ಮಂಡ್ಯ ಕೆರೆ ಸುತ್ತಮುತ್ತಲಿನ ನಿವಾಸಿಗಳಿಗೆ ಹಾವು, ಚೇಳು ಕಾಟ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಸೆಪ್ಟೆಂಬರ್‌, 13: ನಗರಕ್ಕೆ ಹೊಂದಿಕೊಂಡಿರುವ ಚಿಕ್ಕ ಮಂಡ್ಯ ಕೆರೆ ಅಂಗಳದ ಖಾಲಿ ನಿವೇಶನಗಳ ಬಳಿ ಹಾಗೂ ರಸ್ತೆಯ ಬದಿಗಳಲ್ಲಿ ಮುಳ್ಳಿನ ಗಿಡಗಂಟಿಗಳು ಬೆಳೆದು ನಿಂತಿವೆ. ಹಗಲು ಹೊತ್ತಿನಲ್ಲಿಯೇ ಮಹಿಳೆಯರು ಮತ್ತು ಮಕ್ಕಳು ಕೈಯಲ್ಲಿ ಜೀವವನ್ನು ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ಬರಿ ಮುಳ್ಳಿನ ಗಿಡಗಳೇ ಕಾಣುತ್ತವೆ. ಈ ಭಾಗದಲ್ಲಿ ಕಟ್ಟಿರುವ ಮನೆಗಳ ಸುತ್ತಮುತ್ತ ಮುಳ್ಳಿನ ಗಿಡಗಳು ಆವರಿಸಿಬಿಟ್ಟಿವೆ. ವಿದ್ಯುತ್ ಕಂಬಳಿಗಂತೂ ಸಹ ಸುರಳಿ ಆಕಾರದಲ್ಲಿ ಮುಳ್ಳಿನ ಗಿಡಗಳು ಸುತ್ತಿಕೊಂಡಿದ್ದು, ಲೈನ್‌ಗಳಿಗೆ ತಾಗುವ ಹಂತದಲ್ಲಿವೆ. ಪದೇ ಪದೇ ಮುಳ್ಳಿನ ಗಿಡಗಂಟಿಗಳು ಬೆಳೆದಂತೆಲ್ಲ ಅದನ್ನು ಕತ್ತರಿಸಲಾಗುತ್ತದೆ. ಮಾಲೀಕರು ಗಿಡಗಂಟಿಗಳನ್ನು ಜೆಸಿಬಿ ಮೂಲಕ ಸ್ವಚ್ಚಗೊಳಿಸಿದರೂ, ಮತ್ತೆ ಬೆಳೆದು ನಿಲ್ಲುತ್ತಿದೆ.

Snakes and scorpions are a threat to the residents around Chikka Mandya lake

ಗಿಡಗಂಟಿಗಳಿಂದ ಬೇಸತ್ತ ಜನರು
ಗಿಡಗಳು ಬೆಳೆದ ನಂತರ ಅದನ್ನು ಮತ್ತೆ ಕಟಾವು ಮಾಡದಿರುವುದಷ್ಟೇ ಅಲ್ಲ. ಇದರಿಂದ ಇನ್ನು ಅವಾಂತರ ಹೆಚ್ಚಾಗುತ್ತದೆ ಎಂದು ಅಲ್ಲಿನ ನಿವಾಸಿಗಳ ಆರೋಪವಾಗಿದೆ. ನಾವು ಆಡು, ಕುರಿಗಳನ್ನು ಮೇಯಿಸಲು ಈ ಭಾಗಕ್ಕೆ ಬರುತ್ತೇವೆ. ಇಲ್ಲಿ ಹಗಲಿನಲ್ಲಿಯೇ ನಮಗೆ ಭಯ ಆಗುತ್ತದೆ. ಬೇರೆ ದಾರಿಯಿಲ್ಲದೇ ನಮ್ಮ ಜೀವನ ಸಾಗಿಸುವುದಕ್ಕಾಗಿ ಹಾಗೂ ಆಡು, ಕುರಿಗಳಿಗೆ ಮೇವು ಸಿಗಬೇಕು ಎನ್ನುವ ದೃಷ್ಟಿಯಿಂದ ಇಲ್ಲಿಗೆ ಬರುತ್ತೇವೆ. ಸಂಜೆ ಆಗುತ್ತಿದ್ದಂತೆ ಈ ದಾರಿಯಲ್ಲಿ ಮಹಿಳೆಯರು ಬರುವುದಕ್ಕೆ ಕಷ್ಟ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Snakes and scorpions are a threat to the residents around Chikka Mandya lake

ಪೊದೆಗಳ ನಿರ್ಮಾಣ, ಜನರಿಗೆ ಆತಂಕ
ಗಾಡಿ ಕಾರ್ಖಾನೆ, ಶ್ರಮಿಕ ನಗರ, ಬೀಡಿ ಕಾಲೊನಿ, ಶಂಕರಪುರ ಬಡಾವಣೆಗಳನ್ನು ಒಳಗೊಂಡಂತೆ ಈ ವ್ಯಾಪ್ತಿಯಲ್ಲಿ ಗೃಹರಕ್ಷಕ ದಳ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಡಿ.ದೇವರಾಜ ಅರಸು ಬಾಲಕರ ವಿದ್ಯಾರ್ಥಿ ನಿಲಯ ಸೇರಿದಂತೆ ಕೆಲವು ಸರ್ಕಾರಿ ಕಚೇರಿಗಳು ಇಲ್ಲಿ ಇವೆ. ಕೆಲವು ಖಾಲಿ ನಿವೇಶನಗಳು ಸೇರಿದಂತೆ ಅಲ್ಲಲ್ಲಿ ಮನೆಕಟ್ಟಿಕೊಂಡಿರುವುದು ಮತ್ತು ನಿರ್ಮಾಣ ಹಂತದ ಮನೆಗಳು ಕಂಡು ಬರುತ್ತಿವೆ. ಈ ಭಾಗದಲ್ಲಿ ಸ್ವಲ್ಪ ಸ್ವಚ್ಚತೆಗೆ ಆದ್ಯತೆ ನೀಡಿದ್ದರೂ ಸಹ ಉಳಿದ ಭಾಗದಲ್ಲಿ ಮಾತ್ರ ಕಾಡಿನೊಳಗೆ ಹೋದಂತೆ ಭಾಸವಾಗುತ್ತದೆ. ಹಗಲು ಹೊತ್ತಿನಲ್ಲಿ ನಮ್ಮ ಕಾಲೋನಿಗೆ ಹೋಗಲು ಭಯ ಆಗುತ್ತದೆ. ಮಕ್ಕಳು ಸಹ ಈ ರಸ್ತೆಯಲ್ಲಿ ಬರಲು ಭಯ ಪಡುತ್ತಾರೆ. ಮುಳ್ಳಿನ ಗಿಡಗಂಟಿಗಳು ತೋಪಿನ ರೀತಿಯಲ್ಲಿ ಕಾಣುತ್ತವೆ. ಆದರೂ ಇದರ ಬಗ್ಗೆ ನಿವೇಶನ ಮಾಲೀಕರು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ. ಆದಷ್ಟು ಬೇಗ ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ನಿವಾಸಿಗಳಾದ ಮುಜಾರ್ವೀ, ಸೀಮಾ, ಸಲ್ಮಾ ಒತ್ತಾಯಿಸಿದ್ದಾರೆ.

English summary
Near empty plots of lake adjacent to Mandya Nagar and road sides thorn bushes growing. residents worried, know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X