ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಭಿಮಾನಿ ಆತ್ಮಹತ್ಯೆ: ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಸಿದ್ದರಾಮಯ್ಯ!

|
Google Oneindia Kannada News

ಬೆಂಗಳೂರು, ಫೆ. 18: ತನ್ನ ಅಂತ್ಯಯಾತ್ರೆಯಲ್ಲಿ ನಟ ಯಶ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಆಗಮಿಸಬೇಕು ಎಂದು ಡೆತ್‌ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಅಭಿಮಾನಿಯ ಅಂತಿಮ ದರ್ಶನವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪಡೆದಿದ್ದಾರೆ. ಪ್ರೇಮ ವೈಫಲ್ಯದಿಂದ ಮಂಡ್ಯ ತಾಲೂಕಿನ ಕೋಡಿದೊಡ್ಡಿ ಗ್ರಾಮದ ಯುವಕ ಕೃಷ್ಣ(24) ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

Recommended Video

ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ವಿಚಾರ-ಹೆಚ್ಡಿಕೆ,ಸಿದ್ದು ಆರೋಪಕ್ಕೆ ರೇಣುಕಾಚಾರ್ಯ ಟಾಂಗ್ | Oneindia Kannada

ವಿಷಯ ತಿಳಿಯುತ್ತಿದ್ದಂತೆ ಕೋಡಿದೊಡ್ಡಿ ಗ್ರಾಮಕ್ಕೆ ತೆರಳಿ ಅಭಿಮಾನಿಗೆ ಅಂತಿಮ ನಮನ ಸಲ್ಲಿಸಿ ಅಂತ್ಯಕ್ರಿಯೆಯಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದಾರೆ. ಬಳಿಕ ಮಾತನಾಡಿದ ಅವರು, ಡೆತ್ ನೋಟಲ್ಲಿ ಅಂತ್ಯಕ್ರಿಯೆಗೆ ಸಿದ್ದರಾಮಯ್ಯ ಬರಬೇಕು ಅಂತಾ ಬರೆದಿದ್ದಾನೆ. ನನಗೆ ಅವನ ಪರಿಚಯ ಅಷ್ಟೊಂದಿಲ್ಲ. ಅದರೂ ನನ್ನ ಅಭಿಮಾನಿಯಾಗಿದ್ದಾನೆ. ಎಲ್ಲಕ್ಕಿಂತ ಮುಖ್ಯವಾಗಿ ಮನುಷ್ಯತ್ವ ಮುಖ್ಯ. ನನಗೆ ಗೊತ್ತಿಲ್ಲದೆ ದೊಡ್ಡ ಅಭಿಮಾನಿಯಾಗಿ ಡೆತ್ ನೋಟ್‌ನಲ್ಲಿ ಬರೆದುಕೊಂಡಿದ್ದಾನೆ.

Siddaramaiah attended funeral of his fan Krishna to fulfill his last wish in Kodi Doddi in Mandya taluk

ಅಭಿಮಾನಿ ಆಗಲಿ, ಯಾರೇ ಆಗಲಿ ಅಂತ್ಯಕ್ರಿಯೆಗೆ ಬರಬೇಕು ಅಂತಾ ಬರೆದುಕೊಂಡಿದ್ದಾನೆ. ಹೀಗಾಗಿ ಅಂತ್ಯಕ್ರಿಯೆಗೆ ಬಂದಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Siddaramaiah attended funeral of his fan Krishna to fulfill his last wish in Kodi Doddi in Mandya taluk

ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದೇನೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕೊಡಲಿ. ಚಿಕ್ಕವಯಸ್ಸಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವುದು ಸರಿಯಲ್ಲ. ಬಹಳ ದೀರ್ಘಕಾಲ ಬಾಳಿ ಬದುಕಬೇಕಾದ ವ್ಯಕ್ತಿ. ಆತ್ಮಹತ್ಯೆ ಯಾವುದೇ ಸಮಸ್ಯೆಗಳಿಗೆ ಪರಿಹಾರವಲ್ಲ. ಎಷ್ಟೇ ಸಮಸ್ಯೆ ಇದ್ದರೂ ಎದುರಿಸಬೇಕು. ಯಾರು ಕೂಡ ಆತ್ಮಹತ್ಯೆ ಮಾಡಿಕೊಳ್ಳವಂತ ಕೆಟ್ಟ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಸಿದ್ದರಾಮಯ್ಯ ಅವರು ಮನವಿ ಮಾಡಿಕೊಂಡಿದ್ದಾರೆ.

* ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ಬೆಂಗಳೂರಿನಲ್ಲಿ SAHAI ಸಹಾಯವಾಣಿ ಇಂತಿದೆ: 080-25497777

English summary
Siddaramaiah attended funeral of his fan Krishna (24) to fulfill his last wish from Kodikoddi village in Mandya taluk. Know more. .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X