ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಲಯೋಗದ ವಿವಿಧ ಭಂಗಿ ಪ್ರದರ್ಶಿಸಿದ ಸ್ವಾಮೀಜಿ

|
Google Oneindia Kannada News

ಮಂಡ್ಯ, ಜೂನ್ 21: ಯೋಗದಲ್ಲಿ ಸಾಧನೆಗೈಯಲು ನಿರಂತರ ಪರಿಶ್ರಮ ಮುಖ್ಯ. ಅಂತಹ ಪರಿಶ್ರಮದಿಂದಲೇ ಸಾಧನೆಗೈಯಲು ಮುಂದಾಗಿದ್ದಾರೆ ಬೇಬಿಮಠ, ಚಂದ್ರವನ ಆಶ್ರಮದ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ. ಹೌದು, ಜಲಯೋಗದ ಮೂಲಕ ಹೊಸ ಭಂಗಿಗಳನ್ನು ಅಭ್ಯಸಿಸಿ ಅದನ್ನು ವಿಶ್ವ ಯೋಗ ದಿನವಾದ ಇಂದು ಪ್ರದರ್ಶಿಸಿದ್ದಾರೆ ಅವರು.

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನೆಲೆ ಮಂಡ್ಯದ ಪಿಇಎಸ್ ಕಾಲೇಜಿನ ಈಜುಕೊಳದಲ್ಲಿ ಜಲಸ್ತಂಭನ ಸೇರಿದಂತೆ ವಿವಿಧ ಭಂಗಿಗಳನ್ನು ಪ್ರದರ್ಶಿಸಿದ್ದಾರೆ. ಶ್ರೀಗಳು 16ನೇ ವಯಸ್ಸಿನಿಂದಲೂ ಈ ಜಲಯೋಗವನ್ನು ಅಭ್ಯಸಿಸುತ್ತಿದ್ದಾರೆ.
ಹಿಮಾಲಯದ ಶಿವಯೋಗಿ ಬಾಬಾ ಅವರು ನೀರಿನ ಮೇಲೆ ಧ್ಯಾನ ಮಾಡುವ ಮೂಲಕ ಸಿದ್ಧಿ ಪಡೆಯಬೇಕೆಂಬುದನ್ನು ಶ್ರೀಗಳಿಗೆ ತಿಳಿಸಿದ ಹಿನ್ನೆಲೆ ಅವರು ಇದನ್ನು ಕರಗತ ಮಾಡಿಕೊಳ್ಳಲೇ ಬೇಕೆಂದು ಹಠ ತೊಟ್ಟರು. ಹದಿನೈದು ವರ್ಷಗಳಿಂದ ಜಲಯೋಗಕ್ಕೆ ಆಕರ್ಷಿತರಾಗಿ ಅದನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.

 ಮೈಸೂರಿನಲ್ಲಿ ಯೋಗದ್ದೇ ಧ್ಯಾನ, ಯೋಗದ್ದೇ ಕನವರಿಕೆ ಮೈಸೂರಿನಲ್ಲಿ ಯೋಗದ್ದೇ ಧ್ಯಾನ, ಯೋಗದ್ದೇ ಕನವರಿಕೆ

ಸಾಮಾನ್ಯರೂ ಜಲಯೋಗ ಮಾಡಬಹುದು ಎಂಬುದನ್ನು ಪ್ರಚುರಪಡಿಸಲು ಅಂತಾರಾಷ್ಟ್ರೀಯ ಯೋಗ ದಿನದಂದು ಈ ಬಾರಿ 25 ಜಲಯೋಗ ಸಾಧಕರೊಂದಿಗೆ ಶ್ರೀಗಳು ಪ್ರದರ್ಶನ ನೀಡಿದರು. ಪದ್ಮಾಸನ, ವೀರಭದ್ರಾಸನ, ವೃಕ್ಷಾಸನ, ಮಕರಾಸನ, ಮಾದಪ್ಪನ ನಿದ್ರಾಸನ, ನಟರಾಜಾಸನ, ಶಿಲುಬಾಸನ, ಅಯ್ಯಪ್ಪಾಸನ, ಹನುಮಾನಾಸನ, ಸ್ವಸ್ತಿಕಾಸನ, ಬದ್ಧ ಕೋನಾಸನ, ಶವಾಸನ, ಧನುರಾಸನ ಮುಂತಾದ 30ಕ್ಕೂ ಹೆಚ್ಚು ಆಸನಗಳನ್ನು ಅಭ್ಯಾಸ ಮಾಡಿದ್ದಾರೆ. ಶ್ರೀಮಠವು ಕಾವೇರಿ ನದಿ ತಟದಲ್ಲಿರುವುದರಿಂದ ತಮ್ಮ ಬಿಡುವಿನ ವೇಳೆಯಲ್ಲಿ ಜಲಯೋಗದ ಅಭ್ಯಾಸ ಮಾಡುತ್ತಾರೆ. ಇಂದಿನ ಯೋಗ ದಿನದ ವಿಶೇಷ ಪ್ರದರ್ಶನಕ್ಕಾಗಿ ಒಂದು ತಿಂಗಳಿಂದ ನಿರಂತರವಾಗಿ ದಿನಕ್ಕೆ ಒಂದೂವರೆ ಗಂಟೆ ಈಜುಕೊಳವೊಂದರಲ್ಲಿ ಅಭ್ಯಾಸ ನಡೆಸಿದ್ದಾರೆ.

Shree Trinethra mahantha swamiji did Jalayoga on international yoga day at Mandya

ದೇಹದಲ್ಲಿನ ಕೊಬ್ಬಿನಂಶ ಕರಗಿಸಲು, ತೂಕ ಕಡಿಮೆ ಮಾಡಿಕೊಳ್ಳಲು, ಏಕಾಗ್ರತೆ ಹೆಚ್ಚಿಸಿಕೊಳ್ಳಲು, ದೈಹಿಕ ಸಮತೋಲನ ಕಾಪಾಡಲು, ನಿದ್ರೆಯಲ್ಲಿ ಬೆಚ್ಚುವವರಿಗೆ ಜಲಯೋಗ ಸಹಕಾರಿ ಎನ್ನುತ್ತಾರೆ ತ್ರಿನೇತ್ರ ಶ್ರೀ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿರುವ ಚಂದ್ರವನ ಆಶ್ರಮದಲ್ಲಿ ಅಂತಾರಾಷ್ಟ್ರೀಯ ಯೋಗ ಕೇಂದ್ರವನ್ನು ಆರಂಭಿಸಲು ಸಿದ್ಧತೆಯನ್ನು ಸಹ ನಡೆಸಿದ್ದಾರೆ.

English summary
Shree Trinethra mahantha swamiji did Jalayoga on international yoga day at Mandya. He performed arround 20 different types of yoga in water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X