ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಕತ್ ಮಜಾ ಕೊಟ್ಟ ಕೆಸರುಗದ್ದೆ, ಹಗ್ಗ ಜಗ್ಗಾಟ ಸ್ಪರ್ಧೆ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಅಕ್ಟೋಬರ್ 18: ತಾಲೂಕಿನ ಲೋಕಸರ ಗ್ರಾಮದ ಕೆರೆ ಅಂಗಳದಲ್ಲಿ ಮಂಗಳವಾರ ಕೆಸರುಗದ್ದೆ ಓಟ, ಹಗ್ಗ-ಜಗ್ಗಾಟ ಸ್ಪರ್ಧೆಯಲ್ಲಿ ಯುವ ಸಮುದಾಯ, ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡು, ಪ್ರೇಕ್ಷಕರಿಗೆ ಮನರಂಜನೆ ನೀಡಿದರು.

ಸಾರ್ವಜನಿಕರಿಗೆ ಮನರಂಜನೆ ನೀಡುತ್ತಿದ್ದ ಗ್ರಾಮೀಣ ಕ್ರೀಡೆಗಳು ನಶಿಸುತ್ತಿರುವ ಇಂದಿನ ದಿನದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಮಂಗಲ ಗ್ರಾಮ ಪಂಚಾಯಿತಿ, ಕಲ್ಪವೃಕ್ಷ ಯುವಕರ ಸಂಘ ಲೋಕಸರ, ನೆಲದನಿ ಬಳಗ, ಆಯೋಜಿಸಿದ್ದ ತಾಲೂಕು ಮಟ್ಟದ ಕೆಸರುಗದ್ದೆ ಓಟ ಮತ್ತು ಹಗ್ಗ-ಜಗ್ಗಾಟ ಎಲ್ಲರನ್ನೂ ಆಕರ್ಷಿಸಿತು.[ಮಂಡ್ಯ ಜಿಲ್ಲಾ ಉಸ್ತುವಾರಿ ಹೊಣೆ ಎಂ.ಕೃಷ್ಣಪ್ಪ ಹೆಗಲಿಗೆ]

Rural sports event in Mandya

ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಪೊಲೀಸ್ ಅಧಿಕಾರಿ ಎನ್.ಎಸ್. ಚಂದ್ರಶೇಖರ್, ಗ್ರಾಮೀಣ ಕ್ರೀಡೆಗಳಿಗೆ ವಿಶ್ವಮಟ್ಟದ ಒಲಿಂಪಿಕ್ ಮಾನ್ಯತೆ ದೊರಕಿರುವುದು ದೊಡ್ಡ ಬೆಳವಣಿಗೆ ಎಂದು ಹೇಳಿದರು.

Rural sports event in Mandya

ಗೆದ್ದವರ ವಿವರ: ಕೆಸರುಗದ್ದೆ ಓಟದ ಸ್ಪರ್ಧೆಯಲ್ಲಿ ಮಹೇಂದ್ರ ಮತ್ತು ಸಂಜನಾಗೆ ಪ್ರಥಮ ಬಹುಮಾನ, ಪ್ರೇಮಕುಮಾರ್ ಮತ್ತು ಪ್ರಮೋದಿನಿಗೆ ದ್ವಿತೀಯ ಬಹುಮಾನ, ಮಹದೇವಸ್ವಾಮಿ ಮತ್ತು ಸೌಜನ್ಯ ತೃತೀಯ. ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಕಲ್ಪವೃಕ್ಷ ಪುರುಷರ ತಂಡ ಮತ್ತು ಪುಟ್ಟೀರಮ್ಮ ಮಹಿಳಾ ತಂಡ ಪ್ರಥಮ ಬಹುಮಾನ, ಡಾ.ಬಿ.ಆರ್. ಅಂಬೇಡ್ಕರ್ ತಂಡ ಮತ್ತು ನಾಗರತ್ನ ತಂಡದ ಸದಸ್ಯರು ದ್ವಿತೀಯ ಬಹುಮಾನ

English summary
Rural sports event conducted in Mandya on Tuesday. Mandya taluk Lokasara village lake yard is venue of the event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X