ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಮ್ಯಾಗೆ ಮಂಡ್ಯ ಕಾಂಗ್ರೆಸ್‌ನಲ್ಲಿ ಸ್ನೇಹಿತರಿಲ್ಲ, ದುಷ್ಮನ್‌ಗಳೇ ಎಲ್ಲಾ!

By Manjunatha
|
Google Oneindia Kannada News

Recommended Video

ರಮ್ಯಾಗೆ ಮಂಡ್ಯ ಕಾಂಗ್ರೆಸ್ ನಲ್ಲೇ ದುಷ್ಮನ್ ಗಳಿದ್ದಾರೆ | Oneindia kannada

ಮಂಡ್ಯ, ಆಗಸ್ಟ್‌ 03: ಮಂಡ್ಯದಿಂದ ಲೋಕಸಭೆ ಚುನಾವಣೆಗೆ ನಿಂತು ಸೋತಿದ್ದ ರಮ್ಯಾ, ಸ್ವಪಕ್ಷದವರ ಕುತಂತ್ರವೇ ನನ್ನ ಸೋಲಿಗೆ ಕಾರಣ ಎಂದು ಕಣ್ಣೀರು ಸುರಿಸಿದ್ದರು.

ಆದರೆ ಅದು ಅರ್ಧ ಸತ್ಯವಷ್ಟೆ. ರಮ್ಯಾ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದನ್ನು ಒಪ್ಪಿಕೊಂಡಿರುವ ಕಾಂಗ್ರೆಸ್ ಮಾಜಿ ಶಾಸಕ ಎಲ್.ಆರ್.ಶಿವರಾಮೆಗೌಡ ಅದಕ್ಕೆ ಕಾರಣವನ್ನೂ ಬಹಿರಂಗಪಡಿಸಿದ್ದಾರೆ.

ಮಂಡ್ಯ ಬಿಟ್ಟು ಬೆಂಗಳೂರಿಗೆ ಬರಲಿದ್ದಾರೆ ಮಾಜಿ ಸಂಸದೆ ರಮ್ಯಾಮಂಡ್ಯ ಬಿಟ್ಟು ಬೆಂಗಳೂರಿಗೆ ಬರಲಿದ್ದಾರೆ ಮಾಜಿ ಸಂಸದೆ ರಮ್ಯಾ

ಮಂಡ್ಯದಲ್ಲಿ ಆಯೋಜಿತವಾಗಿದ್ದ ಶಾಸಕ ಸಿ.ಎಸ್.ಪುಟ್ಟರಾಜು ಅವರ ಅಭಿನಂಧನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದವರಾಗಿದ್ದರೂ ಅವರು ಸೋಲುವಂತೆ ಮಾಡಲು ನನ್ನ ಪಾತ್ರ ಮಹತ್ವದ್ದು ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಫ್ಲೈಯಿಂಗ್ ಸ್ಟಾರ್ ರಮ್ಯಾ!

ಫ್ಲೈಯಿಂಗ್ ಸ್ಟಾರ್ ರಮ್ಯಾ!

ಭಾಷಣದುದ್ದಕ್ಕೂ ರಮ್ಯಾರನ್ನು ಫ್ಲೈಯಿಂಗ್ ಸ್ಟಾರ್ ಎಂದು ಕರೆದ ಅವರು, 'ಅವರು ಸ್ಥಳೀಯ ಮುಖಂಡರಿಗೆ ಗೌರವ ನೀಡುತ್ತಿರಲಿಲ್ಲ, ಮಂಡ್ಯದ ಕಾರ್ಯಕರ್ತರ ಕೈಗೆ ದೊರಕುತ್ತಿರಲಿಲ್ಲ, ನಮ್ಮ ಮನವಿಗಳಿಗೂ ಸ್ಪಂದಿಸುತ್ತಿರಲಿಲ್ಲ' ಎಂದು ಹೇಳಿದ್ದಾರೆ.

'ಪತ್ರಕ್ಕಾಗಿ ಅವರ ಮನೆ ಬಾಗಿಲು ಕಾದಿದ್ದೆ'

'ಪತ್ರಕ್ಕಾಗಿ ಅವರ ಮನೆ ಬಾಗಿಲು ಕಾದಿದ್ದೆ'

ತಾವೂ ಕೂಡ ಒಂದು ಸಾಮಾನ್ಯ ಪತ್ರಕ್ಕಾಗಿ ಜನರನ್ನು ಕರೆದುಕೊಂಡು ರಮ್ಯಾ ಅವರನ್ನು ಭೇಟಿ ಮಾಡಲು ಬೆಂಗಳೂರಿನ ಅವರ ಮನೆ ಬಾಗಿಲಿಗೆ ಹೋಗಿ ಕಾಯಬೇಕಾಯಿತು ಎಂದ ಅವರು, ಅದಕ್ಕಾಗಿಯೇ ಅವರ ಕೈಗೆ ಮಂಡ್ಯ ಸಿಗಬಾರದೆಂದು ಅವರನ್ನು ಸೋಲಿಸಿದೆ ಎಂದರು.

ರಮ್ಯಾ ವಿರುದ್ಧ ಸಭೆ ಕರೆದಿದ್ದ ಶಿವರಾಮೆಗೌಡ

ರಮ್ಯಾ ವಿರುದ್ಧ ಸಭೆ ಕರೆದಿದ್ದ ಶಿವರಾಮೆಗೌಡ

ರಮ್ಯಾರನ್ನು ಸೋಲಿಸಲೆಂದು ಕೆ.ಆರ್‌.ಎಸ್‌ನಲ್ಲಿ ಸಭೆ ಕರೆದು ಪಕ್ಷಕ್ಕೆ ವಿರುದ್ಧವಾಗಿ ಕೆಲಸ ಮಾಡುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದೆ, ಅದರಂತೆ ಅವರು ರಮ್ಯಾ ವಿರುದ್ಧ ಕೆಲಸ ಮಾಡಿದರು, ಹಾಗಾಗಿ ಅವರು ಚುನಾವಣೆಯಲ್ಲಿ ಸೋತರು ಎಂದು ಅವರು ಕಾರಣ ಬಹಿರಂಗಪಡಿಸಿದರು.

ಅಂಬರೀಶ್‌ ಕಡೆಗಣಿಸಿ ಸೋತ ರಮ್ಯಾ

ಅಂಬರೀಶ್‌ ಕಡೆಗಣಿಸಿ ಸೋತ ರಮ್ಯಾ

ಅಂಬರೀಶ್‌ ಅವರ ಬೆಂಬಲದಿಂದಾಗಿ ಉಪಚುನಾವಣೆಯಲ್ಲಿ ಗೆದ್ದಿದ್ದ ಅವರು, ಆ ನಂತರ ಅಂಬರೀಶ್‌ ಅವರನ್ನು ಕಡೆಗಣಿಸಿದ ಕಾರಣ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡರು. ಈ ಬಾರಿ ಅವರು ಬೆಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ.

English summary
Congress Social media wing head Ramya does not have friends in Mandya congress. congress Ex MLA Shivarame Gowda told today that he work opposite of Ramya in last MP elections and make her defeat in elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X