ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ : ಜುಲೈ 23ರಂದು ಮೇಲುಕೋಟೆಯಲ್ಲಿ ರಾಜಮುಡಿ ಉತ್ಸವ

|
Google Oneindia Kannada News

ಮಂಡ್ಯ, ಜುಲೈ 18 : ಇತಿಹಾಸ ಪ್ರಸಿದ್ಧ ಮೇಲುಕೋಟೆ ಚೆಲುವನಾರಾಯಣಸ್ವಾಮಿ ರಾಜಮುಡಿ ಉತ್ಸವ ಜುಲೈ 23ರಂದು ನಡೆಯಲಿದೆ. ಜುಲೈ 20 ರಿಂದ 29ರ ತನಕ ರಾಜಮುಡಿ ಉತ್ಸವದ ಅಂಗವಾಗಿ ವಿವಿಧ ಪೂಜೆಗಳು ನಡೆಯಲಿವೆ.

ಜುಲೈ 23ರಂದು ರಾತ್ರಿ 8 ಗಂಟೆಗೆ ರಾಜಮುಡಿ ಉತ್ಸವ ನಡೆಯಲಿದ್ದು, ಚೆಲುವನಾರಾಯಣಸ್ವಾಮಿಯ ಉತ್ಸವ ನಡೆಯಲಿದೆ. ಗುರುವಾರ ಸಂಜೆ 5 ಗಂಟೆಗೆ ಕಲ್ಯಾಣೋತ್ಸವ ನಡೆಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗಿದೆ.

ಮೇಲುಕೋಟೆಯಲ್ಲಿ ಜರುಗಿದ ವೈಭವೋಪೇತ ವೈರಮುಡಿ ಉತ್ಸವಮೇಲುಕೋಟೆಯಲ್ಲಿ ಜರುಗಿದ ವೈಭವೋಪೇತ ವೈರಮುಡಿ ಉತ್ಸವ

ಗುರುವಾರ ಚೆಲಯವರಾನಾಯಣಸ್ವಾಮಿ ಮತ್ತು ಬೆಟ್ಟದ ಮೇಲಿರುವ ಯೋಗ ನರಸಿಂಹಸ್ವಾಮಿಗೆ ವಿಶೇಷ ಅಭಿಷೇಕಗಳನ್ನು ಮಾಡಲಾಗಿದೆ. ಜುಲೈ 23ರಂದು ರಾತ್ರಿ 8 ಗಂಟೆಗೆ ವಜ್ರಖಚಿತ ಆಭರಣಗಳನ್ನು ಚೆಲುವನಾರಾಯಣಸ್ವಾಮಿಗೆ ತೊಡಿಸಿ ಉತ್ಸವ ಮಾಡಲಾಗುತ್ತದೆ.

ತಿರುಪತಿ ಮಾದರಿಯಲ್ಲಿ ಮೇಲುಕೋಟೆ ಅಭಿವೃದ್ಧಿತಿರುಪತಿ ಮಾದರಿಯಲ್ಲಿ ಮೇಲುಕೋಟೆ ಅಭಿವೃದ್ಧಿ

Rajamudi utsava at Melukote on July 23

ಮೈಸೂರು ಮಹಾರಾಜರು ಸಮರ್ಪಿಸಿರುವ ವಜ್ರಖಚಿತ ರಾಜಮುಡಿ ಕಿರೀಟ, ಶಂಖ, ಚಕ್ರ, ಗದಾ, ಪದ್ಮಪೀಠ ಸೇರಿದಂತೆ 16 ಆಭರಣಗಳನ್ನು ಚೆಲುವನಾರಾಯಣಸ್ವಾಮಿಗೆ ತೊಡಿಸಿ ಉತ್ಸವ ಮಾಡಲಾಗುತ್ತದೆ. ಇದನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

7.30ಕ್ಕೆ ಬಾಗಿಲು ತೆರೆಯಲಿದೆ ಮೇಲುಕೋಟೆ ದೇವಾಲಯ7.30ಕ್ಕೆ ಬಾಗಿಲು ತೆರೆಯಲಿದೆ ಮೇಲುಕೋಟೆ ದೇವಾಲಯ

ಮಂಡ್ಯ ಜಿಲ್ಲಾಡಳಿತ ಖಜಾನೆಯಲ್ಲಿ ಆಭರಣಗಳನ್ನು ಇಟ್ಟಿರುತ್ತಾರೆ. ರಾಜಮುಡಿ ಉತ್ಸವ ನಡೆಯುವ ದಿನ ಅದನ್ನು ಮೇಲುಕೋಟೆಗೆ ತಂದು ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಪೂಜೆ ಮಾಡಿ, ಪಲ್ಲಕ್ಕಿಯಲ್ಲಿಟ್ಟು ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ತರಲಾಗುತ್ತದೆ.

ರಾಜಮುಡಿ ಉತ್ಸವ ಆಷಾಢ ಮಾಸದಲ್ಲಿ ನಡೆಯುವ ಚಿಕ್ಕ ಜಾತ್ರೆಯಾಗಿದೆ. ಮೈಸೂರಿನ ಕೃಷ್ಣರಾಜ ಒಡೆಯರ್ ಅವರು ಈ ಜಾತ್ರೆಯನ್ನು ಆರಂಭಿಸಿದರು. ಮುಮ್ಮುಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನದಂದು ಈ ಉತ್ಸವಕ್ಕೆ ಚಾಲನೆ ಸಿಗಲಿದೆ.

ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ನಡೆಯುವ ವೈರಮುಡಿ ಬ್ರಹೋತ್ಸವ ಮತ್ತು ರಾಜಮುಡಿ ಉತ್ಸವಗಳೆರಕ್ಕೂ ಸಾವಿರಾರು ಭಕ್ತರು ಸಾಕ್ಷಿಯಾಗುತ್ತಾರೆ. ವಜ್ರಖಚಿತ ಆಭರಣದಲ್ಲಿ ಕಂಗೊಳಿಸುವ ದೇವರನ್ನು ಕಂಡು ಪುನೀತರಾಗುತ್ತಾರೆ.

English summary
Rajamudi utsava will be held at 8 pm on July 23, 2019 at Melukote Chaluvaranayanaswamy temple. Thousands of devotes will take part in historical rajamudi utsava.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X