ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಪಚುನಾವಣೆ: ಮಂಡ್ಯದಿಂದ ಸ್ಪರ್ಧಿಸಲು ಆರ್.ಅಶೋಕ್ ಸ್ಪಷ್ಟ ನಕಾರ, ಕಾರಣ ಏನು?

|
Google Oneindia Kannada News

Recommended Video

ಉಪಚುನಾವಣೆಗೆ ಮಂಡ್ಯದಿಂದ ಆರ್ ಅಶೋಕ್ ಸ್ಪರ್ಧೆ ಮಾಡೋದಿಲ್ವಂತೆ | Oneindia Kannada

ಬೆಂಗಳೂರು, ಅಕ್ಟೋಬರ್ 09: ಮಂಡ್ಯ ಜಿಲ್ಲೆ ಲೋಕಸಭೆ ಉಪಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ ಎಂದು ಆರ್.ಅಶೋಕ್ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಇದು ಬಿಜೆಪಿಗೆ ಹೊಸ ತಲೆನೋವು ತಂದಿದೆ.

ಮಂಡ್ಯ ಜಿಲ್ಲೆಗೆ ಪ್ರಭಾವಿ ಒಕ್ಕಲಿಗ ನಾಯಕನ ಹುಡುಕಾಟದಲ್ಲಿದ್ದ ಬಿಜೆಪಿ ಆರ್.ಅಶೋಕ್ ಅವರನ್ನು ಮಂಡ್ಯದಿಂದ ಸ್ಪರ್ಧಿಸುವಂತೆ ಕೇಳಿತ್ತು. ಆದರೆ ಉಳಿದಿರುವ ಕಡಿಮೆ ಸಮಯದಲ್ಲಿ ಕ್ಷೇತ್ರದಲ್ಲಿ ಸಂಚಾರ ಮಾಡಿ ಸಂಘಟನೆ ಮಾಡುವುದು ಕಷ್ಟ ಎಂಬ ಕಾರಣಕ್ಕೆ ಆರ್.ಅಶೋಕ್ ಅವರು ಮಂಡ್ಯದಿಂದ ಸ್ಪರ್ಧಿಸಲು ಒಲ್ಲೆ ಎಂದಿದ್ದಾರೆ.

ಜೊತೆಗೆ ಬೆಂಗಳೂರು ಹಾಗೂ ರಾಜ್ಯ ರಾಜಕೀಯದಿಂದ ದೂರ ಹೋಗಲು ಆರ್.ಅಶೋಕ್ ಅವರಿಗೆ ಸುತಾರಾಂ ಇಷ್ಟವಿಲ್ಲ ಹಾಗಾಗಿ ಅವರು ಮಂಡ್ಯ ಆಫರ್‌ ಅನ್ನು ಸ್ಪಷ್ಟವಾಗಿ ಪಕ್ಕಕ್ಕೆ ತಳ್ಳಿದ್ದಾರೆ. ಆರ್.ಅಶೋಕ್ ವಾದವನ್ನು ಒಪ್ಪಿರುವ ಬಿಜೆಪಿ ಸಹ ಅಶೋಕ್‌ ಮೇಲೆ ಹೆಚ್ಚಿನ ಒತ್ತಡವನ್ನು ಹೇರುತ್ತಿಲ್ಲ.

ಸಾಮ್ರಾಟ್ ಅಶೋಕ್ ಅವರಿಗಿರುವ ಪವರ್ರಿಗೆ, ಬಿಜೆಪಿ ವಲಸಿಗರ ಟಾರ್ಚರ್! ಸಾಮ್ರಾಟ್ ಅಶೋಕ್ ಅವರಿಗಿರುವ ಪವರ್ರಿಗೆ, ಬಿಜೆಪಿ ವಲಸಿಗರ ಟಾರ್ಚರ್!

ಆರ್‌.ಅಶೋಕ್ ಅವರನ್ನು ಲೋಕಸಭೆ ಉಪಚುನಾವಣೆಗೆ ಸ್ಪರ್ಧಿಸುವಂತೆ ಹೇಳುವಲ್ಲಿ ಬಿಜೆಪಿಯ ಕೆಲವು ಹಿರಿಯ ನಾಯಕರ ರಾಜಕೀಯ ತಂತ್ರವೂ ಇದೆ.

ಮಂಡ್ಯದ ಬಿಜೆಪಿ ಅಭ್ಯರ್ಥಿ ಯಾರು?

ಮಂಡ್ಯದ ಬಿಜೆಪಿ ಅಭ್ಯರ್ಥಿ ಯಾರು?

ಆರ್.ಅಶೋಕ್‌ ನಿರಾಕರಿಸಿದ ನಂತರ ಮಂಡ್ಯ ಜಿಲ್ಲೆಯಲ್ಲಿ ಅಭ್ಯರ್ಥಿ ವಿಷಯ ಬಿಜೆಪಿಗೆ ತಲೆನೋವಾಗಿದೆ. ಒಕ್ಕಲಿಗರ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಪ್ರಭಾವಿ ಒಕ್ಕಲಿಗರನ್ನು ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಿಜೆಪಿ ಲೆಕ್ಕಾಚಾರಕ್ಕೆ ಆರ್‌.ಅಶೋಕ್ ಹಿನ್ನಡೆ ಉಂಟು ಮಾಡಿದ್ದಾರೆ. ಹಾಗಾಗಿ ಮತ್ತೊಬ್ಬ ಪ್ರಭಾವಿಯ ಹುಡುಕಾಟದಲ್ಲಿ ಬಿಜೆಪಿ ಇದೆ.

ಬಿಜೆಪಿಯಲ್ಲಿ ಆರಕ್ಕೇರಿದ್ದ ಸಾಮ್ರಾಟ್ ಅಶೋಕ್ ಮೂರಕ್ಕೆ ಇಳಿಯುತ್ತಿದ್ದಾರಾ?ಬಿಜೆಪಿಯಲ್ಲಿ ಆರಕ್ಕೇರಿದ್ದ ಸಾಮ್ರಾಟ್ ಅಶೋಕ್ ಮೂರಕ್ಕೆ ಇಳಿಯುತ್ತಿದ್ದಾರಾ?

ಯಾರು ಅಂತಿಮ ಆಯ್ಕೆ?

ಯಾರು ಅಂತಿಮ ಆಯ್ಕೆ?

ಆರ್.ಅಶೋಕ್ ನಿರಾಕರಿಸಿದ ನಂತರ ಒಕ್ಕಲಿಗ ಸಂಘದ ಅಧ್ಯಕ್ಷ ಶಿವಲಿಂಗಯ್ಯ ಅವರನ್ನು ಅಭ್ಯರ್ಥಿ ಮಾಡಲು ಬಿಜೆಪಿ ನಿರ್ಧರಿಸಿದೆ. ಎಸ್‌.ಎಂ.ಕೃಷ್ಣ ಪುತ್ರಿ ಶಾಂಭವಿ ಅವರನ್ನು ಕಣಕ್ಕಿಳಿಸುವ ಬಗ್ಗೆ ಚರ್ಚಿಸಲಾಯಿತಾದರೂ. ಅವರನ್ನು ಬೆಂಗಳೂರಿನ ಕ್ಷೇತ್ರದಿಂದ ಮುಂಬರುವ ಲೋಕಸಭೆ ಚುನಾವಣೆಗೆ ಟಿಕೆಟ್‌ ನೀಡಲು ಪಕ್ಷ ನಿರ್ಧರಿಸಿರುವ ಕಾರಣ ಉಪಚುನಾವಣೆ ಟಿಕೆಟ್‌ ಶಿವಲಿಂಗಯ್ಯಗೆ ಸಿಗುವ ಸಾಧ್ಯತೆ ಹೆಚ್ಚಿದೆ.

ಮೇಯರ್ ಚುನಾವಣೆ : ಅಶೋಕ ಸಮರ್ಥಿಸಿಕೊಂಡ ಯಡಿಯೂರಪ್ಪ ಮೇಯರ್ ಚುನಾವಣೆ : ಅಶೋಕ ಸಮರ್ಥಿಸಿಕೊಂಡ ಯಡಿಯೂರಪ್ಪ

ಬೇರೆ ಪಕ್ಷದ ಅಭ್ಯರ್ಥಿಗೆ ಗಾಳ ಹಾಕಿದ್ದ ಬಿಜೆಪಿ

ಬೇರೆ ಪಕ್ಷದ ಅಭ್ಯರ್ಥಿಗೆ ಗಾಳ ಹಾಕಿದ್ದ ಬಿಜೆಪಿ

ಮಾಜಿ ಸಚಿವ ಚೆಲುವರಾಯಸ್ವಾಮಿ ಅವರನ್ನು ಪಕ್ಷಕ್ಕೆ ಸೆಳೆದುಕೊಳ್ಳಲು ಬಿಜೆಪಿ ಯತ್ನ ನಡೆಸಿತ್ತು. ಕಳೆದ ವಿಧಾನಸಭೆ ಚುನಾವಣೆ ಸೋತಿರುವ ಕಾಂಗ್ರೆಸ್‌ನ ಚೆಲುವರಾಯಸ್ವಾಮಿಗೆ ಬಿಜೆಪಿ ಪರವಾಗಿ ಟಿಕೆಟ್ ಕೊಡುವುದಾಗಿಯೂ ಆಫರ್ ನೀಡಿತ್ತು. ಆದರೆ ಅವರು ನಿರ್ಧಾರ ಪ್ರಕಟಿಸಲು ತಡ ಮಾಡಿದರು ಎಂಬ ಕಾರಣದಿಂದ ಶಿವಲಿಂಗಯ್ಯ ಅವರಿಗೆ ಟಿಕೆಟ್ ನೀಡುವ ನಿರ್ಧಾರ ಹೊರಬಿತ್ತು.

ಆರ್‌.ಅಶೋಕ್‌ ಮೇಲೆ ಒತ್ತಡಕ್ಕೇನು ಕಾರಣ?

ಆರ್‌.ಅಶೋಕ್‌ ಮೇಲೆ ಒತ್ತಡಕ್ಕೇನು ಕಾರಣ?

ಆರ್.ಅಶೋಕ್‌ ಬಗ್ಗೆ ಪಕ್ಷದಲ್ಲಿ ಅಸಮಾಧಾನ ಇರುವ ಕಾರಣ ಅವರನ್ನು ರಾಜ್ಯ ರಾಜಕಾರಣದಿಂದ ದೂರ ಕಳಿಸಬೇಕೆಂದು ಬಿಜೆಪಿ ಕೆಲವು ನಾಯಕರು ಅವರ ಮೇಲೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಆರ್‌.ಅಶೋಕ್‌ ಅವರು ವಿಧಾನಸಭೆ ಚುನಾವಣೆಯಲ್ಲಿ ಹೊಂದಾಣಿಕೆ ರಾಜಕೀಯ ಮಾಡಿದ್ದಾರೆ. ಅಲ್ಲದೆ ಬಿಬಿಎಂಪಿ ಚುನಾವಣೆಯಲ್ಲೂ ಯಶಸ್ಸು ಕಂಡಿಲ್ಲ ಹಾಗಾಗಿ ಅವರನ್ನು ರಾಜ್ಯ ರಾಜಕಾರಣದಿಂದ ದೂರ ಸರಿಸಬೇಕು ಎಂಬುದು ಕೆಲವು ಬಿಜೆಪಿ ನಾಯಕರ ತಂತ್ರವಾಗಿತ್ತು.

English summary
R Ashok refuses to contest from Mandya to MP by election. State BJP now giving ticket to Shivalingayya who is Okkaliga organization president.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X