ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪುಲ್ವಾಮಾ ಹುತಾತ್ಮ ಮಂಡ್ಯದ ಗುರು ಬಗ್ಗೆ ರಮ್ಯಾ ಒಂದೂ ಟ್ವೀಟ್ ಮಾಡಿಲ್ಲವೇಕೆ?

|
Google Oneindia Kannada News

ಮಂಡ್ಯ, ಫೆಬ್ರವರಿ 16 : ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ 2013ರಲ್ಲಿ ಉಪ ಚುನಾವಣೆಯಲ್ಲಿ ಮಂಡ್ಯದ ಜನತೆಯಿಂದಲೇ ಆಯ್ಕೆಯಾಗಿ ಸಂಸತ್ ಮೆಟ್ಟಿಲೇರಿದ್ದ, ಕನ್ನಡ ಖ್ಯಾತ ಚಿತ್ರನಟಿ, ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಹೆಡ್ ಆಗಿರು ರಮ್ಯಾ ಅವರು, ಪುಲ್ವಾಮಾದಲ್ಲಿ ಹತನಾದ ಮಂಡ್ಯದ ಯೋಧ ಗುರುವಿಗೆ ಏನು ಮಾಡಿದ್ದಾರೆ?

ಕೇಂದ್ರ ಸರಕಾರ ಮತ್ತು ಪ್ರತ್ಯೇಕವಾಗಿ ನರೇಂದ್ರ ಮೋದಿಯವರ ವಿರುದ್ಧವಾಗಿ ಬರೆಯುವ ಟ್ವೀಟ್ ಗಳನ್ನು ರಿಟ್ವೀಟ್ ಮಾಡುತ್ತ, ಆಗಾಗ ಮೋದಿಯವರ ಕಾಲೆಳೆಯುವಂಥ, ಕಿಚಾಯಿಸುವಂಥ 'ಜಾಣ' ಟ್ವೀಟುಗಳನ್ನು ಮಾಡುತ್ತ ಕಾಲ ಕಳೆಯುತ್ತಿರುವ ರಮ್ಯಾ ಅಲಿಯಾಸ್ ದಿವ್ಯಾ ಸ್ಪಂದನಾ ಅವರಿಗೆ, ಕನಿಷ್ಠಪಕ್ಷ ಯೋಧನಿಗಾಗಿ ಒಂದು ಟ್ವೀಟ್ ಮಾಡಲು ಸಾಧ್ಯವಿರಲಿಲ್ಲವೆ?

ಪುಲ್ವಾಮಾ ದಾಳಿ ನಡೆಸಿದ ರಣಹೇಡಿ ಉಗ್ರನ ಬಗ್ಗೆ ಪಾಲಕರು ಹೇಳೋದೇನು?ಪುಲ್ವಾಮಾ ದಾಳಿ ನಡೆಸಿದ ರಣಹೇಡಿ ಉಗ್ರನ ಬಗ್ಗೆ ಪಾಲಕರು ಹೇಳೋದೇನು?

ಗಡಿ ಕಾಯುತ್ತ ದೇಶದ ಸೇವೆ ಸಲ್ಲಿಸುತ್ತಿರವಾಗಲೇ ಹುತಾತ್ಮನಾದ ಮಂಡ್ಯದ ಗಂಡು, ಕರ್ನಾಟಕದ ಮಣ್ಣಿನ ಮಗ, ಇಡೀ ದೇಶದ ಹೀರೋ ಯೋಧ ಗುರುವಿಗಾಗಿ ಇಡೀ ಮಂಡ್ಯ ಕಂಬನಿ ಮಿಡಿಯುತ್ತಿದೆ, ಸ್ವಂತ ಮಗನನ್ನೇ ಕಳೆದುಕೊಂಡವರಂತೆ ಅಲ್ಲಿನ ಜನತೆ ಮಮ್ಮಲ ಮರುಗುತ್ತಿದ್ದರೆ, ಆತನ ಹತ್ಯೆಗೆ ಕಾರಣನಾದ ದೇಶದ್ರೋಹಿ ಉಗ್ರ ಆದಿಲ್ ರಕ್ತ ಕುಡಿಯಲು ತಹತಹಿಸುತ್ತಿದ್ದರೆ, ರಮ್ಯಾ ಮೇಡಂ ಅವರಿಗೆ ಏನಾಗಿದೆ?

ಪುಲ್ವಾಮ ದಾಳಿ ಕಂಡ ಸಿಆರ್ ಪಿಎಫ್ ಸಿಬ್ಬಂದಿ ಹಂಚಿಕೊಂಡ ಘಟನೆ ವಿವರ ಪುಲ್ವಾಮ ದಾಳಿ ಕಂಡ ಸಿಆರ್ ಪಿಎಫ್ ಸಿಬ್ಬಂದಿ ಹಂಚಿಕೊಂಡ ಘಟನೆ ವಿವರ

ಹುತಾತ್ಮ ಯೋಧರಿಗೆ ರಾಹುಲ್ ಗಾಂಧಿ ಅವರು ಅಂತಿಮ ನಮನ ಸಲ್ಲಿಸಿದ ಫೋಟೋವನ್ನು ರಮ್ಯಾ ಅವರು ಟ್ವೀಟ್ ಮಾಡಿದ್ದಾರೆ. ಫೈನ್. ಆದರೆ, ನರೇಂದ್ರ ಮೋದಿಯವರು ಕೂಡ ಅದೇ ಸಮಯದಲ್ಲಿ ಅಂತಿಮ ನಮನ ಸಲ್ಲಿಸಿದ್ದಾರೆ. ಅವರ ಚಿತ್ರವನ್ನೂ ಹಾಕಬಹುದಿತ್ತಲ್ಲ? ನೀವೇನೇ ನಿರ್ಧಾರ ತೆಗೆದುಕೊಂಡರೂ ನಿಮಗೆ ಬೆಂಬಲವಾಗಿ ಇರುತ್ತೇನೆ ಎಂದು ರಾಹುಲ್ ಗಾಂಧಿ ಅವರು ಕೇಂದ್ರ ಸರಕಾರಕ್ಕೆ ಹೇಳಿದ್ದಾರೆ. ಅದನ್ನಾದರೂ ರಮ್ಯಾ ಟ್ವೀಟ್ ಮಾಡಬಹುದಿತ್ತಲ್ಲ?

ಮಾನವೀಯತೆ ಮರೆತ ರಮ್ಯಾ: ಈ ದುರಂತದಲ್ಲಿಯೂ ರಾಜಕೀಯವೇ? ಮಾನವೀಯತೆ ಮರೆತ ರಮ್ಯಾ: ಈ ದುರಂತದಲ್ಲಿಯೂ ರಾಜಕೀಯವೇ?

ಮಂಡ್ಯದ ಜನರು ಇನ್ನೂ ಮರೆತಿಲ್ಲ

ಮಂಡ್ಯದ ಜನರು ಇನ್ನೂ ಮರೆತಿಲ್ಲ

ಒಂದು ಮಾತು ಮಾತ್ರ ನಿಜ. ರಮ್ಯಾ ಅವರು ಮಂಡ್ಯವನ್ನು, ಮಂಡ್ಯದ ಜನರನ್ನು, ಅವರು ನೀಡಿದ ಮತಗಳನ್ನು, ಅವರು ತೋರಿದ ಪ್ರೀತಿಯನ್ನು, ಆತ್ಮೀಯತೆಯನ್ನು ಮರೆತಿದ್ದರೂ ಮಂಡ್ಯದ ಜನರು ಮಾತ್ರ ಮರೆತಿಲ್ಲ. ಈ ಕಾರಣಕ್ಕಾಗಿಯೇ 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಅವರನ್ನು ಸೋಲಿಸಿ ಮನೆಗೆ ಕಳಿಸಿದರು. ಅತ್ತ ಸೋಶಿಯಲ್ ಮೀಡಿಯಾದಲ್ಲಿ ತಲ್ಲೀನರಾದ ರಮ್ಯಾ ಅವರು, ಮಧ್ಯ ಸ್ವಲ್ಪ ದಿನ ಮಂಡ್ಯಕ್ಕೆ ಬಂದಿದ್ದರಾದರೂ ಮಂಡ್ಯಕ್ಕಾಗಿ ಏನೂ ಮಾಡಲಿಲ್ಲ. ಕಡೆಗೆ ಬಾಡಿಗೆ ಮನೆಯನ್ನೂ ತೊರೆದು ದೆಹಲಿ ಸೇರಿಕೊಂಡಿದ್ದಾರೆ.

ಯೋಧ ಗುರುಗೆ ಎಚ್‌ಡಿಕೆ ಗೌರವ ಸಮರ್ಪಣೆ, ಹುಟ್ಟೂರಿನತ್ತ ಪಾರ್ಥಿವ ಶರೀರ ಯೋಧ ಗುರುಗೆ ಎಚ್‌ಡಿಕೆ ಗೌರವ ಸಮರ್ಪಣೆ, ಹುಟ್ಟೂರಿನತ್ತ ಪಾರ್ಥಿವ ಶರೀರ

Array

ಪ್ರಶಾಂತ್ ಟ್ವೀಟ್ ಗೆ ರಮ್ಯಾ ರಿಟ್ವೀಟ್

"ಸಿಆರ್‌ಪಿಎಫ್ ಯೋಧರನ್ನು ಮಾನವ ಬಾಂಬ್ ಆಗಿಬಂದು ಹತ್ಯೆಗೈದ ಆದಿಲ್ ಅಹ್ಮದ್ ದಾರ್ ಸುಮ್ಮನೆ ಭಯೋತ್ಪಾದಕನಾದವನಲ್ಲ. ಆತ ಉಗ್ರನಾಗಿದ್ದು ಭಾರತೀಯ ಸೈನಿಕರು ಆತನನ್ನು ಹೊಡೆದಿದ್ದರಿಂದಲೇ. ಕಾಶ್ಮೀರದಲ್ಲಿ ಯಾಕೆ ಯುವಕರು ಭಯೋತ್ಪಾದಕರಾಗುತ್ತಿದ್ದಾರೆ, ಯಾಕೆ ಸಾಯಲು ಹಾತೊರೆಯುತ್ತಿದ್ದಾರೆ ಎಂಬುದನ್ನು ತಿಳಿಯುವುದು ಅತಿಮುಖ್ಯವಾಗಿದೆ. ಭಾರೀ ಪ್ರಮಾಣದಲ್ಲಿ ಭಯೋತ್ಪಾದಕ ದಾಳಿಗಳಾದರೂ ಅಫ್ಘಾನಿಸ್ತಾನ ಮತ್ತು ಇರಾಕ್ ನಲ್ಲಿ ಉಗ್ರವಾದವನ್ನು ಹತ್ತಿಕ್ಕಲು ಅಮೆರಿಕಕ್ಕೆ ಆಗಲಿಲ್ಲ" ಎಂದು ಪ್ರಶಾಂತ್ ಭೂಷಣ್ ಅವರು ಮಾಡಿರುವ ಟ್ವೀಟನ್ನು ರಮ್ಯಾ ರಿಟ್ವೀಟ್ ಮಾಡಿದ್ದಾರೆ. ಅಂದರೆ, ಅವರ ಅಭಿಪ್ರಾಯವನ್ನು ಇವರೂ ಒಪ್ಪಿಕೊಂಡಂತೆ ಆಗಲಿಲ್ಲವೆ?

ನಮ್ಮ ದೇಶದೊಳಗಿರುವ 'ಪಾಕಿಸ್ತಾನಿ'ಗಳನ್ನು ಮೊದಲು ಹೊರಗಟ್ಟಬೇಕಿದೆನಮ್ಮ ದೇಶದೊಳಗಿರುವ 'ಪಾಕಿಸ್ತಾನಿ'ಗಳನ್ನು ಮೊದಲು ಹೊರಗಟ್ಟಬೇಕಿದೆ

ಆದರೆ, ದೇಶದ ಬಗ್ಗೆ ಪ್ರೀತಿಯಿದೆಯಲ್ಲವೆ?

ಆದರೆ, ದೇಶದ ಬಗ್ಗೆ ಪ್ರೀತಿಯಿದೆಯಲ್ಲವೆ?

ನರೇಂದ್ರ ಮೋದಿಯವರ ಬಗ್ಗೆ ಅವರಿಗೆ ಸಿಟ್ಟಿರಬಹುದು, ಆದರೆ, ದೇಶದ ಬಗ್ಗೆ ಪ್ರೀತಿಯಿರಬೇಕಲ್ಲವೆ? ರಮ್ಯಾ ಅವರಿಗೆ ದೇಶದ ಬಗ್ಗೆ ಪ್ರೀತಿಯಿದ್ದಿದ್ದರೆ, ಪ್ರಶಾಂತ್ ಭೂಷಣ್ ಅವರ ಅಭಿಮತವನ್ನು ಒಪ್ಪಿಕೊಂಡು ರಿಟ್ವೀಟ್ ಮಾಡುತ್ತಿರಲಿಲ್ಲ. ನಮ್ಮ ಸೇನೆಯ ಮೇಲೆ ಕಲ್ಲು ಎಸೆಯುವವರನ್ನು ಹೊಡೆಯದೆ, ಗುಂಡು ಹಾರಿಸಿ ಕೊಂದಿದ್ದರೆ ಇಂದು 49 ಯೋಧರು ಹುತಾತ್ಮರಾಗುವಂಥ ಸಂದರ್ಭ ಬರುತ್ತಿರಲಿಲ್ಲ ಎಂದು ಟ್ವಿಟ್ಟಿಗರೊಬ್ಬರು ರಮ್ಯಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಆಡುವ ಮಾತನ್ನೇ ಒಪ್ಪುವುದಾದರೆ, ಪ್ರತಿಯೊಬ್ಬ ಕಾಶ್ಮೀರಿ ಪಂಡಿತ ಇಂದು ಭಯೋತ್ಪಾದಕನಾಗಬೇಕಿತ್ತಲ್ಲ? ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಇದಕ್ಕೇನು ಉತ್ತರವಿದೆ ರಮ್ಯಾ ಬಳಿ?

ಇಂಥ ಟ್ವೀಟುಗಳನ್ನು ಶೇರ್ ಮಾಡಲಿಲ್ಲವೇಕೆ?

ನಿಜವಾದ ಭಾರತೀಯಳಾಗಿದ್ದರೆ, ಹುತಾತ್ಮನಾದ ಯೋಧನ ಕುಟುಂಬದ ಕಣ್ಣೀರ ಕಥೆಗಳನ್ನು ಟ್ವಿಟ್ಟರಿನಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಿರಿ. ಆದರೆ ನೀವು ಮತ್ತು ಆ ಪ್ರಶಾಂತ್ ಭೂಷಣ್ ಪಾಕಿಸ್ತಾನದಿಂದ ಹಣಪಡೆದ ಕೂಲಿಗಳು. ಒಬ್ಬ ಉಗ್ರನನ್ನು ಹೀರೋನಂತೆ ಬಿಂಬಿಸುತ್ತಿರುವ ನಿಮಗೂ ಮತ್ತು ನಿಮ್ಮಂಥವರಿಗೂ ನಾಚಿಕೆಯಾಗಬೇಕು ಎಂದು ಮಗದೊಬ್ಬರು ಬಾರಿಸಿದ್ದಾರೆ. ಯೋಧರ ಬಗ್ಗೆ, 'ನಾನೊಂದು ವೇಳೆ ಯುದ್ಧಭೂಮಿಯಲ್ಲಿ ಹತನಾದರೆ, ಬಾಕ್ಸ್ ನಲ್ಲಿ ಹಾಕಿ ನನ್ನನ್ನು ಮನೆಗೆ ಕಳಿಸಿ; ನನ್ನ ಎದೆಯ ಮೇಲೆ ಮೆಡಲುಗಳನ್ನು ಇಟ್ಟು, ನಾನು ನನ್ನ (ಉಗ್ರರ ಹಣಿಯಲು) ಶಕ್ತಿಮೀರಿ ಪ್ರಯತ್ನಿಸಿದೆ ನನ್ನ ತಾಯಿಗೆ ಹೇಳಿ...' ಎಂದು ಆರಂಭವಾಗುವ ಹೃದಯ ಹಿಂಡುವಂಥ ಬರೆದ ಕವನವನ್ನು ಹಂಚಿಕೊಂಡಿದ್ದಾರೆ. ಈ ಕವನವನ್ನು ಟ್ವಿಟ್ಟರಿನಲ್ಲಿ ಹಂಚಿಕೊಳ್ಳಲು ರಮ್ಯಾ ಅವರಿಗೆ ಮನಸ್ಸಾಗಲಿಲ್ಲವೆ?

ನಾನು ಸೈನಿಕ.. ಹುಟ್ಟಿದ್ದೇ ಸಾಯುವುದಕ್ಕಾಗಿ! ಯೋಧನ ಭಾವುಕ ನುಡಿನಾನು ಸೈನಿಕ.. ಹುಟ್ಟಿದ್ದೇ ಸಾಯುವುದಕ್ಕಾಗಿ! ಯೋಧನ ಭಾವುಕ ನುಡಿ

ಲಾಠಿ ಏಟು ತಿಂದವರೆಲ್ಲ ಉಗ್ರರಾಗಬೇಕೆ?

ಲಾಠಿ ಏಟು ತಿಂದವರೆಲ್ಲ ಉಗ್ರರಾಗಬೇಕೆ?

ಒಂದು ವೇಳೆ ರಾಮ ಮಂದಿರಕ್ಕಾಗಿ ಹೋರಾಟ ಮಾಡುತ್ತಿರುವವನ ಮೇಲೆ ಪೊಲೀಸರು ಲಾಠಿ ಬೀಸಿದರೆ, ಆತ ಭಯೋತ್ಪಾದಕನಾಗಬೇಕೆ ಅಥವಾ ಉಗ್ರನಾಗುತ್ತಾನೆಯೆ? ಏನಿದು ನಿಮ್ಮ ಲಾಜಿಕ್ಕು ಮಣ್ಣಾಂಗಟ್ಟಿ? ನಿಮ್ಮನ್ನು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ನಿಷೇಧಿಸಬೇಕು. ಹೀಗೆ ಹೇಳಲು ನಿಮಗೆ ನಾಚಿಕೆಯಾಗುವುದಿಲ್ಲವೆ ಎಂದು ಸುಪ್ರೀಂ ಕೋರ್ಟ್ ವಕೀಲರಾಗಿರುವ ಪ್ರಶಾಂತ್ ಭೂಷಣ್ ಅವರನ್ನು ಟ್ವಿಟ್ಟಿಗರೊಬ್ಬರು ಮಾತಲ್ಲೇ ಹರಿದುಹಾಕಿದ್ದಾರೆ. ಇದೇ ಮಾತನ್ನು ಅಲ್ಲವೆ ರಮ್ಯಾ ಅವರು ಬೆಂಬಲಿಸಿರುವುದು?

ರಮ್ಯಾ ಅವರು ಏಕೆ ಹೀಗೆ?

ರಮ್ಯಾ ಅವರು ಏಕೆ ಹೀಗೆ?

ರಮ್ಯಾ ಅವರಿಗೆ ಟ್ವಿಟ್ಟರಿನಲ್ಲಿ ಹೀಗೆಲ್ಲ ಅನ್ನಿಸಿಕೊಳ್ಳುವುದು ಹೊಸತೇನಲ್ಲ ಬಿಡಿ. ಭಾರತದಲ್ಲಿ ರಾಜಕೀಯ ಇದ್ದೇ ಇರುತ್ತದೆ. ಲೋಕಸಭೆ ಚುನಾವಣೆಯೂ ಹತ್ತಿರ ಬರುತ್ತಿದೆ. ಅವರನ್ನು ಇವರು ಟೀಕಿಸುವುದು, ಇವರನ್ನು ಅವರು ಟೀಕಿಸುವುದು ಇದ್ದೇ ಇರುತ್ತದೆ. ಇದನ್ನೆಲ್ಲ ಮಾಡಲು ಅವಕಾಶ ಕೊಡುವುದಕ್ಕೆ ಪ್ರಜಾಪ್ರಭುತ್ವ ಭಾರತದಲ್ಲಿ ಇನ್ನೂ ಗಟ್ಟಿಯಾಗಿದೆ. ಆದರೆ, ದೇಶದ ಸಮಗ್ರತೆಯ ಪ್ರಶ್ನೆ ಬಂದಾಗ, ಯೋಧರನ್ನು ಹತ್ಯೆ ಮಾಡಿದವರನ್ನು ಹೊಸಕಿಹಾಕುವಂಥ ಸಂದರ್ಭ ಬಂದಾಗ, ರಾಜಕೀಯ ಬಿಟ್ಟು ಪ್ರಜ್ಞಾವಂತಿಕೆಯಿಂದ ವರ್ತಿಸಬೇಕಲ್ಲವೆ? ರಮ್ಯಾ ಅವರು ಏಕೆ ಹೀಗೆ?

English summary
Pulwama terror attack : What has happened to Ramya? Why has she not even tweeted about the CRPF soldier Guru, the hero of Mandya? Have the Mandya people shown love for the actress? What has she given in return? Why is she retweeting the tweets of Prashant Bhushan?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X