ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ ತ್ರಿವಳಿ ಕೊಲೆ; ಅನುಮಾನ ವ್ಯಕ್ತಪಡಿಸಿದ ಪ್ರಮೋದ್ ಮುತಾಲಿಕ್

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಸೆಪ್ಟೆಂಬರ್ 12: ಮಂಡ್ಯದ ಅರ್ಕೇಶ್ವರ ದೇವಸ್ಥಾನದಲ್ಲಿ ನಿನ್ನೆ ನಡೆದ ಮೂವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಶ್ರೀರಾಮ ಸೇನೆಯ ಮುಖ್ಯಸ್ಥ ಮುಖ್ಯಸ್ಥ ಪ್ರಮೋದ್ ಮುತಾಲಿಕ್, "ಈ ಹತ್ಯೆ ಹಿಂದೆ ಜಿಹಾದ್ ಕೆಲಸ ಮಾಡಿರಬಹುದು' ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

ಮಂಡ್ಯಕ್ಕೆ ಭೇಟಿ ನೀಡಿದ್ದ ಪ್ರಮೋದ್ ಮುತಾಲಿಕ್ ಈ ಕುರಿತು ಮಾತನಾಡಿ, "ದೇವಸ್ಥಾನದಲ್ಲಿ ನಡೆದ ಹತ್ಯೆಯನ್ನು ಖಂಡಿಸುತ್ತೇನೆ. ಮುಜರಾಯಿ ದೇವಸ್ಥಾನಗಳಲ್ಲಿ ಎಲ್ಲಾ ಕಡೆ ಸಿಸಿ ಕ್ಯಾಮೆರಾ ಇವೆ. ಇಲ್ಲಿ ಸಿಸಿ ಕ್ಯಾಮೆರಾ ಕೆಟ್ಟುಹೋಗಿದೆ ಎಂದು ಸಬೂಬು ಹೇಳುತ್ತಿದ್ದಾರೆ. ಸಿಸಿ ಕ್ಯಾಮೆರಾ ಸರಿಪಡಿಸುವಷ್ಟು ಬುದ್ಧಿ ಇಲ್ಲವೇ ಅವರಿಗೆ? ಎಂದು ಪ್ರಶ್ನಿಸಿದ್ದಾರೆ.

"ಪ್ರಕರಣದ ಹಿಂದೆ ಜಿಹಾದ್ ಕೆಲಸವಿರಬಹುದು"

ನಿರ್ಲಕ್ಷ್ಯ ವಹಿಸಿರುವ ಮುಜರಾಯಿ ಇಲಾಖೆಯ ಅಧಿಕಾರಿಗಳನ್ನು ತಕ್ಷಣವೇ ಸಸ್ಪೆಂಡ್ ಮಾಡಬೇಕು. ಇವರ ನಿರ್ಲಕ್ಷ್ಯದಿಂದ ಅಮಾಯಕ ಅರ್ಚಕರ ಹತ್ಯೆ ನಡೆದಿದೆ.

ಹುಂಡಿ ಹಣಕ್ಕಾಗಿ ಹತ್ಯೆ ನಡೆದಿದೆ ಎನ್ನುವುದು ನನಗೆ ಅನುಮಾನವಿದೆ. ಇದರ ಹಿಂದೆ ಇಸ್ಲಾಮಿಕ್, ಜಿಹಾದ್ ಕೆಲಸ ಮಾಡಿದ್ದರೂ ಮಾಡಿರಬಹುದು. ಈ ಕುರಿತು ಸಮಗ್ರ ತನಿಖೆಯಾಗಬೇಕು" ಎಂದಿದ್ದಾರೆ.

ಮುಜರಾಯಿ ಇಲಾಖೆ ಮೇಲೆ ಆಕ್ರೋಶ

ಮುಜರಾಯಿ ಇಲಾಖೆ ಮೇಲೆ ಆಕ್ರೋಶ

"ಈ ರೀತಿಯೆಲ್ಲಾ ಭಯೋತ್ಪಾದನೆ ಸೃಷ್ಟಿಯಾಗುತ್ತಿದೆ. ಈ ಕೃತ್ಯಗಳಿಂದ ಭಯ ಸೃಷ್ಟಿ ಮಾಡಲಾಗುತ್ತಿದೆ. ಹಣಕ್ಕೆ ಡೈವರ್ಟ್ ಮಾಡುವ ಪ್ರಕ್ರಿಯೆ ಕೂಡ ಆಗಿರಬಹುದು. ಆದರೆ ಸಿಸಿ ಕ್ಯಾಮೆರಾವನ್ನು ಏಕೆ ಸರಿಪಡಿಸಿಲ್ಲ? ಮುಜರಾಯಿ ಇಲಾಖೆಗೆ ಏನು ರೋಗ" ಎಂದು ಕಿಡಿಕಾರಿದ್ದಾರೆ.

'ಡ್ರಗ್ಸ್ ದಂಧೆಯಲ್ಲಿ ಜಮೀರ್ 100 ಪರ್ಸಂಟ್ ಇದ್ದಾರೆ'

'ಡ್ರಗ್ಸ್ ದಂಧೆಯಲ್ಲಿ ಜಮೀರ್ 100 ಪರ್ಸಂಟ್ ಇದ್ದಾರೆ'

"ಡ್ರಗ್ಸ್ ದಂಧೆಯಲ್ಲಿ ಜಮೀರ್ 100 ಪರ್ಸಂಟ್ ಇದ್ದಾರೆ, ಅದರಲ್ಲಿ ಸಂಶಯವಿಲ್ಲ. ರಾಜಕಾರಣದಲ್ಲಿ ವ್ಯವಹಾರ ಇಟ್ಟುಕೊಂಡಿರುವುದರಿಂದ ಜಮೀರ್ ಅರೆಸ್ಟ್ ಆಗುತ್ತಿಲ್ಲ. ಡ್ರಗ್ ಮಾಫಿಯಾದಲ್ಲಿ ರಾಜಕೀಯ ಮುಖಂಡರು ಇದ್ದಾರೆ. ಜಮೀರ್ ಚುನಾವಣಾ ಪ್ರಚಾರಕ್ಕೆ ಮುಂಬೈನಿಂದ ಚಿತ್ರ ನಟರನ್ನು ಕರೆಸುತ್ತಾರೆ.

ವ್ಯವಸ್ಥಿತ ಜಾಲದಲ್ಲಿ ಜಮೀರ್ ಇದ್ದಾರೆ. ಬಿಜೆಪಿ ಅವರು ಧಮ್ ತೋರಿಸಬೇಕು. ಸಿಸಿಬಿ ತನಿಖೆ ಬಗ್ಗೆ ನನಗೆ ವಿಶ್ವಾಸ ಇಲ್ಲ. ಈ ಪ್ರಕರಣವನ್ನು ಸರ್ಕಾರ ಮುಚ್ಚಿ ಹಾಕುತ್ತದೆ" ಎಂದಿದ್ದಾರೆ.

Recommended Video

ಇದೆ ಕಾರಣಕ್ಕೆ Randeep Surjewalaಗೆ ಕರ್ನಾಟಕ ಉಸ್ತುವಾರಿ | Oneindia Kannada

"ಸಂಜನಾ ಗಂಡ ಅಜೀದ್ ಕೂಡ ದಂಧೆಯಲ್ಲಿದ್ದಾರೆ"

ನಟಿ ಸಂಜನ ಗಂಡ ಅಜೀದ್ ಕೂಡ ಡ್ರಗ್ ದಂಧೆಯಲ್ಲಿ ಇದ್ದಾನೆ. ಲವ್ ಜಿಹಾದ್, ಡ್ರಗ್ಸ್ ಎರಡಕ್ಕೂ ನೇರ ಸಂಬಂಧ ಇದೆ. ದಾವುದ್ ಇಬ್ರಾಹಿಮ್ ಇದಕ್ಕೆ ಮೂಲ ಪುರುಷ. ಆಜೀಮ್ ಅಸ್ತಾನ ಎಂಬ ದೇಶ ದ್ರೋಹಿ ಇದ್ದ. ಇವರೆಲ್ಲರೂ ಇಡೀ ಚಿತ್ರ ರಂಗವನ್ನು ಆವರಿಸಿದ್ದಾರೆ" ಎಂದು ಆರೋಪಿಸಿದರು.

English summary
Bhajarangadal Leader pramod muthalik suspected jihad behind triple murder at arakeshwara temple in mandya,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X