• search
  • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

5 ಸರಕಾರಿ ಶಾಲೆಗಳನ್ನು ದತ್ತು ಪಡೆದ ಪ್ರಕಾಶ್ ರೈ

By Sachhidananda Acharya
|

ಮಂಡ್ಯ, ಜೂನ್ 12: ಜಿಲ್ಲೆಯ ಮದ್ದೂರು ತಾಲೂಕಿನ ಭಾರತೀನಗರದಲ್ಲಿರುವ ಮೆಣಸಗೆರೆ ಸರಕಾರಿ ಶಾಲೆ ಸೇರಿದಂತೆ 5 ಶಾಲೆಗಳನ್ನು ಬಹುಭಾಷಾ ನಟ ಪ್ರಕಾಶ್ ರೈ ದತ್ತು ಪಡೆದಿದ್ದಾರೆ.

ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ 'ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ' ಕೆಲಸ ಮಾಡುತ್ತಿದ್ದು ಇದರ ಜೊತೆಗೆ ಪ್ರಕಾಶ್ ರೈ ರವರ 'ಜಸ್ಟ್ ಆಸ್ಕಿಂಗ್ ಫೌಂಡೇಶನ್' ಕೂಡ ಕೈಜೋಡಿಸಿದೆ.

ಸೈಲೆಂಟ್ ಆಗಿದ್ದ ಪ್ರಕಾಶ್ ರೈ, ವೈಲೆಂಟ್ ಆಗಿ #JustAsking

ಎರಡೂ ಸಂಸ್ಥೆಗಳು ಸಮುದಾಯಗಳ ಸಹಭಾಗಿತ್ವದಲ್ಲಿ ರಾಜ್ಯದಲ್ಲಿ 5 ಸರ್ಕಾರಿ ಶಾಲೆಗಳ ಬಲವರ್ಧನೆಯ ಗುರಿ ಹಾಕಿಕೊಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಕಾಶ್ ರೈ ಕೆ.ಆರ್ ಪೇಟೆಯ ಶತಮಾನದ ಶಾಲೆ, ಪಾಂಡವಪುರದ ಫ್ರೆಂಚ್ ರಾಕ್ಸ್ ಸರ್ಕಾರಿ ಮಾದರಿ ಶಾಲೆ ಮತ್ತು ಮದ್ದೂರು ತಾಲ್ಲೂಕಿನ ಮೆಣಸಗೆರೆ ಶಾಲೆಗಳಿಗೆ ಸೋಮವಾರ ಭೇಟಿ ನೀಡಿ ಸಭೆಗಳನ್ನು ನಡೆಸಿದರು.

ತಾಂತ್ರಿಕವಾಗಿ ಯಾವುದೇ ಶಾಲೆಗಳನ್ನು ಪ್ರಕಾಶ್ ರೈ ದತ್ತು ತೆಗೆದುಕೊಳ್ಳುತ್ತಿಲ್ಲ. ದತ್ತು ತೆಗೆದುಕೊಂಡರೆ ಆಗ ಊರಿನ ಸಮುದಾಯಕ್ಕೆ ಹೆಚ್ಚಿನ ಪಾತ್ರವಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಊರಿನ ಸಮುದಾಯವೇ ಶಾಲೆಯ ಅಭಿವೃದ್ಧಿಯ ಜವಾಬ್ದಾರಿ ತೆಗೆದುಕೊಂಡಲ್ಲಿ ಅವರಿಗೆ ಬೇಕಾದುದ್ದನ್ನು ಒದಗಿಸುವ, ಅವರಿಗೆ ಸಕಲ ನೆರವು ನೀಡುವ ವಾಗ್ದಾನವನ್ನು ಪ್ರಕಾಶ್ ರೈ ಮಾಡಿದ್ದಾರೆ.

ನಂತರ ಮಾತನಾಡಿದ ಅವರು, "ಭಯವನ್ನು ಉಪಯೋಗಿಸಿಕೊಂಡು ಶಿಕ್ಷಣವನ್ನು ವ್ಯಾಪಾರೀಕರಣ ಮಾಡಲಾಗುತ್ತಿದೆ. ಎಲ್ಲಾ ಖಾಸಗೀ ಶಾಲೆಗಳೂ ಇದರಲ್ಲಿ ಪಾಲುದಾರರಾಗಿವೆ," ಎಂದು ದೂರಿದರು.

"ಅಂಜಿಕೆ ಇಲ್ಲದೆ, ಭಯ ಇಲ್ಲದೆ ನಾವು ಓದಬೇಕಾದರೆ ಅದು ಸರಕಾರಿ ಶಾಲೆಯಲ್ಲಿ ಮಾತ್ರ ಸಾಧ್ಯ. ಸರಕಾರಿ ಶಾಲೆಗಳಿಗೆ ನಡೆಸುವ ವೆಚ್ಚ ನಮ್ಮ ತೆರಿಗೆಯಾಗಿದ್ದರೂ ನಾವು ಅವುಗಳ ಬಗ್ಗೆ ನಿರ್ಲಕ್ಷಿತರಾಗಿದ್ದೇವೆ," ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಪ್ರಕಾಶ್ ರೈ ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭ ಹಬ್ಬದ ವಾತವಾರಣ ಕಂಡುಬಂತು. ಪೋಷಕರು, ಶಿಕ್ಷಕರು, ಎಸ್.ಡಿ.ಎಂ.ಸಿ ಸದಸ್ಯರು, ಹಳೆ ವಿದ್ಯಾರ್ಥಿಗಳು ಅತೀ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಈ ಸರ್ಕಾರಿ ಶಾಲೆಗಳನ್ನು ಅತ್ಯುತ್ತಮದ ಗುಣಮಟ್ಟದ ಶಿಕ್ಷಣ ನೀಡುವ ಮಾದರಿ ಶಾಲೆಗಳನ್ನಾಗಿ ಮಾಡುವುದರ ಜೊತೆಗೆ ಸರ್ಕಾರ ಈ ರೀತಿ ಮಾಡಬೇಕೆಂಬ ಒತ್ತಡ ಮೂಡಿಸುವುದು, ಆ ಮೂಲಕ ಸಮಾನ ಶಿಕ್ಷಣ ಜಾರಿಗೆ ಹಂತ ಹಂತವಾಗಿ ಮುನ್ನಡೆಯುವುದರ ಕುರಿತು ಪ್ರಕಾಶ್ ರೈ ತೀರ್ಮಾನಿಸಿದ್ದಾರೆ.

English summary
Maltilingual actor Prakash Raj's Just Asking Foundation has adopted 5 Government Kannada medium schools in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more