ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾಂಡವಪುರ; ಅಂಬ್ಯುಲೆನ್ಸ್ ಸೀಜ್ ಹಿಂದೆ ರಾಜಕೀಯದ ಆರೋಪ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಮೇ 30; ಕೊರೊನಾ ಸೋಂಕಿತರ ಬಳಕೆಗಾಗಿ ಸಮಾಜ ಸೇವಕ ಬಿ. ರೇವಣ್ಣ ಅಭಿಮಾನಿಗಳ ಬಳಗದಿಂದ ಕೊಡುಗೆಯಾಗಿ ನೀಡಿದ್ದ 3 ಅಂಬ್ಯುಲೆನ್ಸ್‌ಗಳನ್ನು ತಹಶೀಲ್ದಾರ್ ಪ್ರಮೋದ್ ಎಲ್. ಪಾಟೀಲ್ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣ ರಾಜಕೀಯಕ್ಕೆ ತಿರುವು ಪಡೆದಿದೆ.

ಸಮಾಜ ಸೇವಕ ಬಿ.ರೇವಣ್ಣ ಸಮಾಜ ಸೇವೆಯನ್ನು ಸಹಿಸದೆ ಮಾಜಿ ಸಚಿವ, ಹಾಲಿ ಶಾಸಕ ಸಿ. ಎಸ್. ಪುಟ್ಟರಾಜು ತಾಲೂಕು ಆಡಳಿತದ ಮೂಲಕ ವಾಹನಗಳನ್ನು ಸೀಜ್ ಮಾಡಿಸಿದ್ದಾರೆ ಎಂಬುದು ರೇವಣ್ಣ ಅಭಿಮಾನಿಗಳ ಆರೋಪ.

ಮಂಡ್ಯ; ಲಾಕ್ ಡೌನ್ ನಿಯಮ ಪಾಲನೆಗೆ ಸಚಿವರ ಸೂಚನೆ ಮಂಡ್ಯ; ಲಾಕ್ ಡೌನ್ ನಿಯಮ ಪಾಲನೆಗೆ ಸಚಿವರ ಸೂಚನೆ

ಇಷ್ಟಕ್ಕೂ ನಡೆದಿದ್ದಾದರೂ ಏನು ಎಂಬುದನ್ನು ನೋಡುವುದಾದರೆ. ಕಳೆದ ಮೇ 24ರ ಸೋಮವಾರದಂದು ಸಮಾಜ ಸೇವಕ, ಮೈಸೂರು ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ. ರೇವಣ್ಣ ತಮ್ಮ ಅಭಿಮಾನಿಗಳ ಬಳಗದ ಹೆಸರಿನಲ್ಲಿ ಕೊರೊನಾ ಸೋಂಕಿತರ ನೆರವಿಗಾಗಿ ಮೂರು ಅಂಬ್ಯುಲೆನ್ಸ್‌ ನೀಡಿದ್ದರು.

ಕೋವಿಡ್ ಕೇಂದ್ರಗಳ ಸೋಂಕಿತರ ಸಮಸ್ಯೆ ಆಲಿಸಿದ ಮಂಡ್ಯ ಡಿಸಿಕೋವಿಡ್ ಕೇಂದ್ರಗಳ ಸೋಂಕಿತರ ಸಮಸ್ಯೆ ಆಲಿಸಿದ ಮಂಡ್ಯ ಡಿಸಿ

Politics Behind Ambulance Seize At Pandavapura

ಆ ಅಂಬ್ಯುಲೆನ್ಸ್‌ಗಳ ಮೇಲೆ ಹಾಕಲಾಗಿರುವ ಬಿ. ರೇವಣ್ಣ ಭಾವಚಿತ್ರ ಹಾಗೂ ಬಿ. ರೇವಣ್ಣ ಅಭಿಮಾನಿಗಳ ಬಳಗ ಎಂಬ ಸ್ಟಿಕರ್‌ಗಳನ್ನು ಕಿತ್ತು ಹಾಕುವಂತೆ ತಹಶೀಲ್ದಾರ್ ಪ್ರಮೋದ್ ಎಲ್. ಪಾಟೀಲ್ ಸೂಚಿಸಿ ರೋಗಿಗಳ ಸಮೇತ ಮೂರು ಅಂಬ್ಯುಲೆನ್ಸ್‌ ವಾಹನಗಳನ್ನು ಸೀಜ್ ಮಾಡಿದ್ದರು.

ಮಂಡ್ಯ; ನಿವೃತ್ತ ಎಎಸ್‍ಐ ಕೊರೋನಾಗೆ ಬಲಿ ಮಂಡ್ಯ; ನಿವೃತ್ತ ಎಎಸ್‍ಐ ಕೊರೋನಾಗೆ ಬಲಿ

ತಾಲೂಕು ಆಡಳಿತ ಈ ಕ್ರಮಕ್ಕೆ ಬಿ.ರೇವಣ್ಣ ಅಭಿಮಾನಿಗಳ ಬಳಗದ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಸ್ಪಷ್ಟನೆ ನೀಡಬೇಕು, ಅಂಬ್ಯುಲೆನ್ಸ್ ವಾಹನಗಳನ್ನು ರೋಗಿಗಳ ಸೇವೆಗೆ ಬಿಡುಗಡೆಗೊಳಿಸಬೇಕು ಎಂದು ತಹಶೀಲ್ದಾರ್, ಉಪವಿಭಾಗಾಧಿಕಾರಿ ಬಿ. ಸಿ. ಶಿವಾನಂದಮೂರ್ತಿ ಅವರನ್ನು ಒತ್ತಾಯಿಸಿದರು.

ಸ್ವಂತ ಖರ್ಚಿನಲ್ಲಿ ನಮ್ಮ ನಾಯಕರಾದ ಸಮಾಜ ಸೇವಕ ಬಿ.ರೇವಣ್ಣ ನೀಡಿರುವ ಅಂಬ್ಯುಲೆನ್ಸ್ ಗಳನ್ನು ಸೀಜ್ ಮಾಡುವ ಅಧಿಕಾರವನ್ನು ನಿಮಗೆ ನೀಡಿದವರಾರು ಎಂದು ಪ್ರಶ್ನಿಸಿದರಲ್ಲದೇ? ಕೊರೊನಾ ಸಂದರ್ಭದಲ್ಲಿ ಈ ರೀತಿ ದಾನಿಗಳು ಕೊಡುಗೆ ನೀಡುವ ಅಂಬ್ಯುಲೆನ್ಸ್‌ ವಾಹನಗಳ ಮೇಲೆ ದಾನಿಗಳ ಭಾವಚಿತ್ರ ಹಾಕಬಾರದು ಎಂಬುದು ಯಾವ ಕಾನೂನಿನಲ್ಲಿದೆ ಎಂಬುದನ್ನು ತಾಲೂಕು ಆಡಳಿತ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಆಗ ಸ್ಥಳಕ್ಕೆ ಧಾವಿಸಿದ ಉಪವಿಭಾಗಾಧಿಕಾರಿ ಬಿ. ಸಿ. ಶಿವಾನಂದಮೂರ್ತಿ, ಬಿ.ರೇವಣ್ಣ ಅಭಿಮಾನಿಗಳ ಸಮಸ್ಯೆಗಳನ್ನು ಆಲಿಸಿ, ಜಿಲ್ಲಾಧಿಕಾರಿಗಳಿಂದ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯೋಣ, ಈಗ ಅಂಬ್ಯುಲೆನ್ಸ್‌ ವಾಹನಗಳನ್ನು ಬಿಟ್ಟು ಕಳುಹಿಸುವಂತೆ ಸೂಚಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಇನ್ನು ಈ ಬಗ್ಗೆ ಮಾತನಾಡಿದರು ಕಿಸಾನ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಸಿ. ಆರ್. ರಮೇಶ್, "ಇದರಲ್ಲಿ ಶಾಸಕ ಸಿ. ಎಸ್. ಪುಟ್ಟರಾಜು ಕೈವಾಡವಿದ್ದು, ಅಧಿಕಾರಿಗಳ ಮೂಲಕ ವಾಹನ ಸೀಜ್ ಮಾಡಿಸುವ ಮೂಲಕ ಕೀಳುಮಟ್ಟದ ರಾಜಕೀಯ ಪ್ರದರ್ಶಿಸುತ್ತಿದ್ದಾರೆ" ಎಂದು ಗಂಭೀರ ಆರೋಪ ಮಾಡಿದ್ದಾರೆ.

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಕೊರೊನಾ ಸೋಂಕಿತರ ಅನುಕೂಲಕ್ಕಾಗಿ ಸ್ವಂತ ಹಣದಲ್ಲಿ 3 ಅಂಬ್ಯುಲೆನ್ಸ್, 5 ಆಕ್ಸಿಜನ್ ಕಾನ್ಸನ್‌ಟ್ರೇಟರ್, 2 ಕುಡಿಯುವ ನೀರಿನ ಮಿಷನ್, 2ಸಾವಿರ ಹೆಲ್ತ್ ಕಿಟ್ ಹಾಗೂ 2.5 ಸಾವಿರ ಕಷಾಯದ ಬಾಟಲ್ ಕೊಡುಗೆಯನ್ನು ಸಮಾಜ ಸೇವಕ ಬಿ.ರೇವಣ್ಣ ನೀಡಿದ್ದಾರೆ.

ಇದನ್ನು ಸಹಿಸಕೊಳ್ಳದ ಶಾಸಕ ಸಿ. ಎಸ್. ಪುಟ್ಟರಾಜು ತಹಶೀಲ್ದಾರ್ ಮೂಲಕ ವಾಹನಗಳನ್ನು ಸೀಜ್ ಮಾಡಿಸಿದ್ದಾರೆ. ರೋಗಿಗಳು ಇದ್ದರೂ ಲೆಕ್ಕಿಸದೆ ತಾಲೂಕು ಆಡಳಿತದ ಅಧಿಕಾರಿಗಳು ವಾಹನ ವಶಕ್ಕೆ ಪಡೆದಿರುವುದು ಸರಿಯಲ್ಲ. ಅಧಿಕಾರಿಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಬೇಡಿ ಎಂದು ಹೇಳಿದ್ದಾರೆ.

Recommended Video

UT Khader Exclusive Interview with lavanya | ಜನ BJP ಅವರಿಗೆ ಬುದ್ಧಿ ಕಲಿಸುತ್ತಾರೆ! | Oneindia Kannada

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಸಿ. ಎಸ್. ಪುಟ್ಟರಾಜು ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ? ಎಂಬುದನ್ನು ಕಾದು ನೋಡಬೇಕಿದೆ.

English summary
Social activist B. Revanna ambulance seized in Pandavapura, Manday. Revanna fans alleged that C. S. Puttaraju doing politics in the time of Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X