ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ ವಿಶೇಷ ಚೇತನ ಯುವಕನ ಸಮಸ್ಯೆ 2 ದಿನದಲ್ಲಿ ಪರಿಹರಿಸಿದ ಮೋದಿ

|
Google Oneindia Kannada News

ಮಂಡ್ಯ, ಜೂನ್ 3: ಕಳೆದ ಎರಡು ವರ್ಷಗಳಿಂದ ಆಧಾರ್‌ ಕಾರ್ಡ್‌ಗಾಗಿ ಪರಿತಪಿಸುತ್ತಿದ್ದ ವಿಶೇಷಚೇತನನಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೆರವಾಗಿದ್ದಾರೆ. ಜಿಲ್ಲೆಯ ತಂಡಸಹಳ್ಳಿ ಗ್ರಾಮದ 26 ವರ್ಷದ ಯುವಕ ನೂತನ್‌ ಹುಟ್ಟಿನಿಂದಲೇ ಅಂಗವಿಕಲರಾಗಿದ್ದು, ಚರ್ಮದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದು ಅವರಿಗೆ ಆಧಾರ್ ಕಾರ್ಡ್‌ ಪಡೆಯುವುದಕ್ಕೆ ದೊಡ್ಡ ಸಮಸ್ಯೆಯನ್ನು ತಂದೊಡ್ಡಿದೆ.

ಪ್ರಸ್ತುತ ಆಧಾರ್ ಕಾರ್ಡ್‌ ಪಡೆಯಬೇಕೆಂದರೆ ಬೆರಳಚ್ಚು ಅತ್ಯಾವಶ್ಯಕವಾಗಿದೆ. ಆದರೆ ನೂತನ್‌ಗೆ ಬೆರಳಚ್ಚು ಬಾರದ ಬೆನ್ನಲ್ಲೇ ಅವರು ಭಾವಚಿತ್ರದ ಆಧಾರದ ಮೇಲೆ ಅವರಿಗೆ ಅಧಿಕಾರಿಗಳು ಆಧಾರ್ ಕಾರ್ಡ್‌ ಮಾಡಿಕೊಟ್ಟಿದ್ದರು.

ನೇತಾಜಿ ಪ್ರತಿಮೆ ಕೆತ್ತನೆ ಮಾಡಲಿರುವ ಮೈಸೂರಿನ ಅರುಣ್ ಬಗ್ಗೆ ನಿಮಗೆಷ್ಟು ಗೊತ್ತು?ನೇತಾಜಿ ಪ್ರತಿಮೆ ಕೆತ್ತನೆ ಮಾಡಲಿರುವ ಮೈಸೂರಿನ ಅರುಣ್ ಬಗ್ಗೆ ನಿಮಗೆಷ್ಟು ಗೊತ್ತು?

ಅದೇ ಆಧಾರದಲ್ಲಿ ಅವರು ಪಿಂಚಣಿ ಸೇರಿದಂತೆ ಸರಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದರು. ಆದರೆ ಕಳೆದ ಎರಡು ವರ್ಷಗಳ ಹಿಂದೆ ಸರಕಾರ ಆಧಾರ್‌ಗೆ ಮೊಬೈಲ್ ನಂಬರ್‌ ನೋಂದಣಿ ಕಡ್ಡಾಯಗೊಳಿಸಿತ್ತು. ಹಿಂದೆ ಆಧಾರ್‌ ಮಾಡಿಸುವಾಗ ನೂತನ್‌ ಮೊಬೈಲ್ ನಂಬರ್ ಕೊಟ್ಟಿರಲಿಲ್ಲ. ಹಾಗಾಗಿ ಕಳೆದ ಎರಡು ವರ್ಷಗಳಿಂದ ಅವರಿಗೆ ಪಿಂಚಣಿ ಸೇರಿದಂತೆ ಯಾವುದೇ ಸೌಲಭ್ಯ ಸಿಗುತ್ತಿರಲಿಲ್ಲ.

PM Modi Helps to Get Aadhar Card For a specially abled Youth of Mandya

ಅಧಿಕಾರಿಗಳು ಆಧಾರ್‌ಗೆ ಮೊಬೈಲ್ ನಂಬರ್ ಅಪ್‌ಡೇಟ್ ಮಾಡಲು ತೆರಳುವುದಕ್ಕೆ ಸೂಚಿಸಿದ ಬೆನ್ನಲ್ಲೇ ಆಧಾರ್ ಕಚೇರಿಗೆ ತೆರಳಿದ್ದಾರೆ. ಆದರೆ ಅಲ್ಲಿ ನೂತನ್ ಬಯೋಮೆಟ್ರಿಕ್‌ ತೆಗೆದುಕೊಂಡಿಲ್ಲ. ಇತ್ತ ಕಣ್ಣುಗಳ ಸ್ಕ್ಯಾನ್‌ ಆಗಲಿಲ್ಲ. ಇದರಿಂದ ಆಧಾರ್ ಕಾರ್ಡ್‌ ಬ್ಲಾಕ್‌ ಆಗಿದೆ. ಅಲ್ಲಿಂದ ಅವರು ಎಲ್ಲಾ ಸರಕಾರಿ ಸೌಲಭ್ಯವನ್ನು ಕಳೆದುಕೊಂಡಿದ್ದರು. ಈ ಕುರಿತು ಜಿಲ್ಲಾಡಳಿತ, ಸಂಸದೆ ಸುಮಲತಾರನ್ನು ಭೇಟಿ ಮಾಡಿ ಮನವಿ ಮಾಡಿದರೂ ಕೂಡ ಏನೂ ಪ್ರಯೋಜನವಾಗಿರಲಿಲ್ಲ. ಇದು ಕುಟುಂಬಸ್ಥರಿಗೆ ಮತ್ತಷ್ಟು ಚಿಂತೆ ಉಂಟುಮಾಡಿತ್ತು.

ಮೋದಿ ಆಗಮಿಸುವ ಹಿನ್ನೆಲೆ, ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸ್ಥಳ ಪರಿಶೀಲನೆ ಮೋದಿ ಆಗಮಿಸುವ ಹಿನ್ನೆಲೆ, ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸ್ಥಳ ಪರಿಶೀಲನೆ

ರೈತ ಮುಖಂಡ ಮಧುಚಂದನ್ ನೆರವು: ಅಧಿಕಾರಿಗಳಿಂದ ಯಾವುದೇ ನೆರವಾಗದಿದ್ದ ಸಂದರ್ಭದಲ್ಲಿ ಕುಟುಂಬಸ್ಥರು ಸ್ನೇಹಿತರ ಸಲಹೆಯಂತೆ ಆರ್ಗ್ಯಾನಿಕ್ ಸಂಸ್ಥಾಪಕ ಹಾಗೂ ರೈತ ಮುಖಂಡ ಮಧು ಚಂದನ್ ಭೇಟಿಯಾಗಿ ತಮ್ಮ ಸಮಸ್ಯೆಯನ್ನು ವಿವರಿಸಿದ್ದಾರೆ. ನೂತನ್ ನೋವಿನ ಕಥೆ ಕೇಳಿದ ಮಧುಚಂದನ್, ನೂತನ್ ಫೋಟೋ ಮತ್ತು ಮಾಹಿತಿಯನ್ನು ಟ್ವೀಟ್ ಮಾಡಿ ಪಿಎಂ ಕಚೇರಿಗೆ ಟ್ಯಾಗ್ ಮಾಡಿದ್ದಾರೆ.

ಮಧುಚಂದನ್ ಟ್ವೀಟ್‌ಗೆ ತಕ್ಷಣ ಸ್ಪಂದಿಸಿದ ಪ್ರಧಾನಮಂತ್ರಿ ಕಚೇರಿ ಅಧಿಕಾರಿಗಳು ಬೆಂಗಳೂರಿನ ಕಚೇರಿಗೆ ಮಾಹಿತಿ ರವಾನಿಸಿದ್ದಾರೆ. ಮೇ 29 ರಂದು ಬೆಂಗಳೂರಿನ ಆಧಾರ್‌ಕಾರ್ಡ್‌ ಕಚೇರಿ ಅಧಿಕಾರಿಗಳು ಮಧುಚಂದನ್‌ಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡು, ಮರು ದಿನವೇ ಹಳೆಯ ಆಧಾರ್ ಕಾರ್ಡ್ ಆಕ್ಟಿವ್‌ಗೊಳಿಸಿ ಅಪ್‌ಡೇಟ್ ಮಾಡಿಕೊಟ್ಟಿದ್ದಾರೆ.

Recommended Video

Siraj ಐಪಿಎಲ್ ಬಳಿಕ Rohit Sharma ಬಗ್ಗೆ ಹೇಳಿದ್ದೇನು | Oneindia Kannada

ಎರಡೂ ವರ್ಷಗಳ ಕಾಲ ಆಧಾರ್‌ ಕಾರ್ಡ್‌ ಮಾಡಿಸಲಾಗದೆ ಪರಿತಪಿಸಿದ್ದ ನೂತನ್‌ಗೆ ರೈತ ಮುಖಂಡ ಮಾಡಿದ ಒಂದು ಟ್ವೀಟ್‌ನಿಂದ ಸಮಸ್ಯೆ ಮುಕ್ತರಾಗಿದ್ದು, ಕುಟುಂಬಸ್ಥರು ಮಧುಚಂದನ್‌ಗೆ ಧನ್ಯವಾದ ತಿಳಿಸಿದ್ದಾರೆ.

English summary
Mandya's specially abled youth got adhar after prime minister Narendra modi intervention. 25 year old youth lost his aadhar card because unable to obtain fingerprint or retina scan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X