ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ಕುಮಾರಸ್ವಾಮಿಗೆ ಚೆಲುವರಾಯಸ್ವಾಮಿ ಮಾಡಿದ ಮನವಿ

|
Google Oneindia Kannada News

Recommended Video

ಕುಮಾರಸ್ವಾಮಿಗೆ ಮಂಡ್ಯ ಪರಿಸ್ಥಿತಿ ಬಿಚ್ಚಿಟ್ಟ ಚೆಲುವರಾಯಸ್ವಾಮಿ | Oneindia Kannada

ಮಂಡ್ಯ, ಜೂನ್ 29: ನಿಮ್ಮ ವೈಯಕ್ತಿಕ ಅಸಮಾಧಾನ ಏನೇ ಇರಲಿ, ಇದರಿಂದ ಜಿಲ್ಲೆಯ ಅಭಿವೃದ್ದಿಗೆ ತೊಂದರೆಯಾಗಬಾರದೆಂದು ಮಾಜಿ ನಾಗಮಂಗಲ ಶಾಸಕ ಚೆಲುವರಾಯಸ್ವಾಮಿ, ಮುಖ್ಯಮಂತ್ರಿ ಕುಮಾರಸ್ವಾಮಿಯವರಲ್ಲಿ ಮನವಿ ಮಾಡಿದ್ದಾರೆ.

ಜಿಲ್ಲೆಯ ನಾಗಮಂಗಲ ಬಿಂಡಿಗನವಿಲೆ ಗ್ರಾಮದಲ್ಲಿ ಮಾತನಾಡುತ್ತಿದ್ದ ಚೆಲುವರಾಯಸ್ವಾಮಿ, ನಿಖಿಲ್ ಕುಮಾರಸ್ವಾಮಿ ಲೋಕಸಭಾ ಚುನಾವಣೆಯಲ್ಲಿ ಸೋತರೆಂದು ಜಿಲ್ಲೆಯನ್ನು ಕಡೆಗಣಿಸಬೇಡಿ ಎಂದು ಮುಖ್ಯಮಂತ್ರಿಗಳಿಗೆ ಹೇಳಿದ್ದಾರೆ.

ಮುಖ್ಯಮಂತ್ರಿಗಳೇ ರೈತರ ಜೊತೆ ಆಟ ಆಡಬೇಡಿ: ಚಲುವರಾಯಸ್ವಾಮಿ ಮುಖ್ಯಮಂತ್ರಿಗಳೇ ರೈತರ ಜೊತೆ ಆಟ ಆಡಬೇಡಿ: ಚಲುವರಾಯಸ್ವಾಮಿ

ಮಂಡ್ಯ ಜಿಲ್ಲೆಯ ಎಲ್ಲಾ ಎಂಟು ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರು ಇದ್ದಾರೆ, ದುರಂತವೆಂದರೆ, ಕಾವೇರಿ ನದಿನೀರು ಹಂಚಿಕೆ ಸಂಬಂಧ, ಒಬ್ಬರೇ ಒಬ್ಬರು ಸಭೆ ಕರೆಯದೇ ಇರುವುದು ಎಂದು ಚೆಲುವರಾಯಸ್ವಾಮಿ ಬೇಸರ ವ್ಯಕ್ತ ಪಡಿಸಿದ್ದಾರೆ.

Please do not neglect Mandya district develoment: Cheluvaryaswamy appeal to CM.

ಚುನಾವಣೆಯಲ್ಲಿ ಹಿನ್ನಡೆಯಾಗಿದೆ ಎನ್ನುವ ಕಾರಣಕ್ಕಾಗಿ, ಸಿಟ್ಟು ಮಾಡಿಕೊಂಡು ಜಿಲ್ಲೆಯ ಶಾಸಕರು ಸಿಎಂ ಬಳಿ ಕಾವೇರಿ ವಿಚಾರದ ಬಗ್ಗೆ ಮಾತನಾಡದೇ ಇದ್ದಿರಬಹುದು ಎಂದು ಚೆಲುವರಾಯಸ್ವಾಮಿ ಹೇಳಿದ್ದಾರೆ.

ನೀರು ಬಿಡಲು ಕಾವೇರಿ ಪ್ರಾಧಿಕಾರದ ಅನುಮತಿ ಬೇಕು ಎಂದು ಹೇಳುತ್ತಾರೆ. ಚುನಾವಣೆಗೆ ಮುನ್ನ ಪ್ರಾಧಿಕಾರದ ಅನುಮತಿ ಪಡೆಯದೇ ಮೂರು ಬಾರಿ ನೀರು ಬಿಟ್ಟಿರುವುದು ಇಲ್ಲಿನ ರೈತರಿಗೆ ತಿಳಿದಿದೆ ಎಂದು ಚೆಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
Please do not neglect Mandya district develoment: Cheluvaryaswamy appeal to CM HD Kumarawamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X