ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾವೇರಿ ನೀರು ಬಿಟ್ಟರೆ ಜನ ದಂಗೆ ಏಳ್ತಾರೆ: ಮಾದೇಗೌಡ ಎಚ್ಚರಿಕೆ

|
Google Oneindia Kannada News

ಮಂಡ್ಯ, ಮೇ 28: ತಮಿಳುನಾಡಿಗೆ ನೀರು ಬಿಡುವಂತೆ ಕೇಂದ್ರ ಜಲ ಆಯೋಗ ಆದೇಶಿಸಿರುವ ಬೆನ್ನಲ್ಲೇ, ಮಂಡ್ಯದಲ್ಲಿ ಆಕ್ರೋಶ ಭುಗಿಲೆದ್ದಿದೆ.

ಈ ಆದೇಶ ಹೊರಬೀಳುತ್ತಿದ್ದಂತೆಯೇ ಜಿಲ್ಲೆಯ ವಿವಿಧೆಡೆ ರೈತರು ರಸ್ತೆಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ. ರೈತಸಂಘ, ಕನ್ನಡಸೇನೆ ಕಾರ್ಯಕರ್ತರು ಮಂಡ್ಯ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಕರ್ನಾಟಕಕ್ಕೆ ಆಘಾತ, ತಮಿಳುನಾಡಿಗೆ ಕಾವೇರಿ ನೀರು ಬಿಡಲು ಆದೇಶಕರ್ನಾಟಕಕ್ಕೆ ಆಘಾತ, ತಮಿಳುನಾಡಿಗೆ ಕಾವೇರಿ ನೀರು ಬಿಡಲು ಆದೇಶ

ಜಿಲ್ಲೆಯಲ್ಲಿ ಕುಡಿಯುವ ನೀರಿಲ್ಲದೆ ಜನರು ಪರದಾಡುತ್ತಿದ್ದಾರೆ. ನಾಲೆಗಳಿಗೆ ನೀರು ಬಿಡದೆ ಬೆಳೆದ ಬೆಳೆಗಳು ಒಣಗುತ್ತಿವೆ. ಬೆಂಗಳೂರಿಗೆ ಕುಡಿಯುವ ನೀರು ಹರಿಸಲು ಸಹ ಇರುವ ಸಂಗ್ರಹದಲ್ಲಿರುವ ನೀರು ಸಾಲುವುದಿಲ್ಲ. ಪರಿಸ್ಥಿತಿ ಇಷ್ಟು ವಿಷಮಿಸಿರುವಾಗ ತಮಿಳುನಾಡಿಗೆ ನೀರು ಬಿಟ್ಟರೆ ಜನರು ದಂಗೆ ಏಳುತ್ತಾರೆ ಎಂದು ಕಾವೇರಿ ಹೋರಾಟ ಸಮಿತಿ ಅಧ್ಯಕ್ಷ ಜಿ. ಮಾದೇಗೌಡ ಎಚ್ಚರಿಕೆ ನೀಡಿದರು.

people will revolt if cauvery water released to Tamil Nadu G madegowda

ಸುದ್ದಿಗಾರರೊಂದಿಗೆ ಮಾತನಾಡಿ ಅವರು, ರಾಜ್ಯಕ್ಕೆ ಪ್ರಾಧಿಕಾರದವರೇ ಬಂದು ಪರಿಶೀಲನೆ ನಡೆಸಲಿ. ನಮ್ಮ ಪರಿಸ್ಥಿತಿ ಹೇಗಿದೆ ಎಂದು ಖುದ್ದಾಗಿ ನೋಡಿಕೊಂಡು ಹೋಗಲಿ. ಅದನ್ನು ಬಿಟ್ಟು ಎಲ್ಲಿಯೋ ಕುಳಿತು ತೀರ್ಮಾನ ಕೈಗೊಳ್ಳುವುದು ಸರಿಯಲ್ಲ. ನೀರು ಬಿಟ್ಟರೆ ಹೋರಾಟ ನಡೆಸುವುದು ಅನಿವಾರ್ಯ ಎಂದರು.

ಕಾವೇರಿ ಅಂತಿಮ ತೀರ್ಪು: ಟ್ವಿಟ್ಟರ್ ನಲ್ಲಿ ಶಾಂತಿಮಂತ್ರ ಪಠಣಕಾವೇರಿ ಅಂತಿಮ ತೀರ್ಪು: ಟ್ವಿಟ್ಟರ್ ನಲ್ಲಿ ಶಾಂತಿಮಂತ್ರ ಪಠಣ

ನನ್ನ 90 ವರ್ಷದ ಬದುಕಿನಲ್ಲಿ ಕುಡಿಯುವ ನೀರಿಗಾಗಿ ಇಷ್ಟೊಂದು ತತ್ವಾರ ಉಂಟಾಗಿದ್ದನ್ನು ನೋಡಿಲ್ಲ. ಕುಡಿಯುವ ನೀರಿಲ್ಲ ಎಂಬ ಕಾರಣಕ್ಕೆ ಹಳ್ಳಿಯ ಜನರು ನಗರ, ಪಟ್ಟಣಗಳಿಗೆ ಗುಳೆ ಹೋಗುತ್ತಿದ್ದಾರೆ. ಕೆರೆಕಟ್ಟೆಗಳು, ಕೊಳವೆ ಬಾವಿಗಳು ಬತ್ತಿಹೋಗಿವೆ. ಕೆಆರ್‌ಎಸ್‌ನಲ್ಲಿ ಇರುವ ನೀರನ್ನೇ ಕುಡಿಯುವ ಉದ್ದೇಶಕ್ಕೆ ಉಳಿಸಿಕೊಳ್ಳಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುವಂತೆ ಹೇಳಿದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಹೇಳಿದರು.

English summary
Cauvery protection committee president G Madegowda warned that, people will revolt if the water was released to Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X