ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಂಗೇರಿದ ಮಂಡ್ಯ: ಬಣ್ಣದ ಲೋಕದವರಿಗೆ ಮರುಳಾಗಬೇಡಿ ಅಂದ್ರು ತಮ್ಮಣ್ಣ, ಹಾಗಾದ್ರೆ ನಿಖಿಲ್?

|
Google Oneindia Kannada News

Recommended Video

Lok Sabha Elections 2019 : ರಂಗೇರಿದ ಮಂಡ್ಯ: ಬಣ್ಣದ ಲೋಕದವರಿಗೆ ಮರುಳಾಗಬೇಡಿ ಅಂದ್ರು ತಮ್ಮಣ್ಣ

ಹಿಂದಿನಿಂದಲೂ ಜಿದ್ದಾಜಿದ್ದಿನ ರಾಜಕೀಯಕ್ಕೆ ಹೆಸರಾಗಿರುವ ಮಂಡ್ಯದಲ್ಲಿ, ಚುನಾವಣಾ ದಿನಾಂಕ ಮತ್ತು ಅಧಿಕೃತ ಅಭ್ಯರ್ಥಿ ಘೋಷಣೆಗೂ ಮುನ್ನ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರತೊಡಗಿದೆ. ಸುಮಲತಾ ಮತ್ತು ಕುಮಾರಸ್ವಾಮಿಯವರಿಗೆ ಪ್ರಶ್ನೆಗಳ ಸುರಿಮಳೆಯೇ ಸಾಮಾಜಿಕ ತಾಣದಲ್ಲಿ ಹರಿದು ಬರುತ್ತಿದೆ.

ಈ ನಡುವೆ, ಸಾರಿಗೆ ಸಚಿವ ಮತ್ತು ದೇವೇಗೌಡ್ರ ಸೊಸೆಯ ತಂದೆ ಡಿ ಸಿ ತಮ್ಮಣ್ಣ, ಮದ್ದೂರಿನಲ್ಲಿ ಆಡಿದ ಮಾತೂ ಈಗ ಭಾರೀ ಚರ್ಚೆಗೆ ಗುರಿಯಾಗಿದೆ. ಅವರ ಮಾತಿಗೆ ಮಳವಳ್ಳಿಯಲ್ಲಿ ಸುಮಲತಾ ಅಂಬರೀಶ್ ತಿರುಗೇಟು ನೀಡಿದ್ದಾರೆ. ಇಬ್ಬರ ವಾಗ್ಯುದ್ದದ ನಡುವೆ ಬಿಜೆಪಿ ಮುಖಂಡರು ಸುಮಲತಾ ಅವರನ್ನು ಭೇಟಿಯಾಗಿ ಬಂದಿದ್ದಾರೆ.

ಬಣ್ಣದವರ ಮಾತಿಗೆ ಮಂಡ್ಯದ ಜನ ಬೆರಗಾಗೋದು ಬೇಡ : ಡಿಸಿ ತಮ್ಮಣ್ಣಬಣ್ಣದವರ ಮಾತಿಗೆ ಮಂಡ್ಯದ ಜನ ಬೆರಗಾಗೋದು ಬೇಡ : ಡಿಸಿ ತಮ್ಮಣ್ಣ

ಬಣ್ಣದ ಲೋಕದವರ ಮಾತಿಗೆ ಮರುಳಾಗಬೇಡಿ ಎಂದು ಸಚಿವ ತಮ್ಮಣ್ಣ ಹೇಳುವ ಮೂಲಕ ಸುಮಲತಾ ಅವರ ಸಿನಿಮಾ ಜೀವನವನ್ನು ವೇದಿಕೆಗೆ ಎಳೆದಿದ್ದಾರೆ. ಅದಕ್ಕೆ ಸುಮಲತಾ ನೀಡಿರುವ ಖಡಕ್ ರಿಪ್ಲೈ, ಎಲ್ಲಾ ಜೆಡಿಎಸ್ ಮುಖಂಡರ ಬಾಯಿ ಮುಚ್ಚಿಸುವಂತಿದೆ.

ಸುಮಲತಾ ಮುಂದೆ 4 ಪ್ರಶ್ನೆಗಳಿಟ್ಟ ಅಂಬರೀಶ್ ಅಭಿಮಾನಿಗಳುಸುಮಲತಾ ಮುಂದೆ 4 ಪ್ರಶ್ನೆಗಳಿಟ್ಟ ಅಂಬರೀಶ್ ಅಭಿಮಾನಿಗಳು

ಸುಮಲತಾ ಅಂಬರೀಶ್ ಅವರು ಬಣ್ಣದ ಲೋಕದವರು ಎನ್ನುವ ಮಾತು ಸರಿ, ಜೆಡಿಎಸ್ ಸಂಭಾವ್ಯ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಬಣ್ಣ ಹಚ್ಚಲಿಲ್ಲವೇ ಎನ್ನುವ ಸುಮಲತಾ ಪ್ರಶ್ನೆಗೆ, ಸಚಿವ ತಮ್ಮಣ್ಣ ಅವರು ಹಾರಿಕೆಯ ಉತ್ತರವನ್ನು ನೀಡಿದ್ದಾರೆ.

ಗೌಡ್ರ ಮಕ್ಕಳಿಗೆ ಪಕ್ಷದ ಟಿಕೆಟ್, ಕಾರ್ಯಕರ್ತರಿಗೆ ಸೀತಾರಾಮ ಕಲ್ಯಾಣ ಟಿಕೆಟ್

ಗೌಡ್ರ ಮಕ್ಕಳಿಗೆ ಪಕ್ಷದ ಟಿಕೆಟ್, ಕಾರ್ಯಕರ್ತರಿಗೆ ಸೀತಾರಾಮ ಕಲ್ಯಾಣ ಟಿಕೆಟ್

ಸಾಮಾಜಿಕ ತಾಣದಲ್ಲಿ ಪ್ರಮುಖವಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಯ ವಿಚಾರದಲ್ಲಿ ವ್ಯಾಪಕ ಟೀಕೆ, ತಮಾಷೆಯ ಟ್ರೋಲ್ ಗಳು ಹೆಚ್ಚಾಗುತ್ತಿವೆ. 'ಗೌಡ್ರ ಮಕ್ಕಳಿಗೆ ಪಕ್ಷದ ಚುನಾವಣಾ ಟಿಕೆಟ್, ಕಾರ್ಯಕರ್ತರಿಗೆ ಸೀತಾರಾಮ ಕಲ್ಯಾಣ ಚಿತ್ರದ ಟಿಕೆಟ್'. ಅದೇ ರೀತಿ, ಮಂಡ್ಯ ಜನತೆಯ ಋಣ ತೀರಿಸಲು ರಾಜಕೀಯಕ್ಕೆ ಬರಬೇಕಾ?. ಅಂಬರೀಶ್ ಅವರಿಗೆ ಬೇಡವಾದ ರಾಜಕೀಯ ನಿಮಗೇಕೆ?. ಅಂಬರೀಶ್ ಅವರ ಹೆಸರಿನಲ್ಲಿ ಸಂಸ್ಥೆ (ಎನ್‌ಜಿಓ) ಮಾಡಿ ಅದರಿಂದ ಮಂಡ್ಯ ಜನತೆಗೆ ಅನುಕೂಲ ಮಾಡಿಕೊಂಡು ಋಣ ತೀರಿಸಬಹುದಲ್ಲವೇ? ಎನ್ನುವ ಪ್ರಶ್ನೆಯೂ ಸುಮಲತಾ ಅವರಿಗೆ ಎದುರಾಗಿದೆ.

ಬಣ್ಣ ಹಚ್ಚುವವರನ್ನು ಕಂಡು ಮತದಾರ ಮರುಳಾಗಬಾರದು

ಬಣ್ಣ ಹಚ್ಚುವವರನ್ನು ಕಂಡು ಮತದಾರ ಮರುಳಾಗಬಾರದು

ಬಣ್ಣ ಹಚ್ಚುವವರನ್ನು ಕಂಡು ಮತದಾರ ಮರುಳಾಗಬಾರದು, ರೈತರ, ಜನರ ಮತ್ತು ಸಮಾಜದ ಬಗ್ಗೆ ಚಿಂತನೆ ಮಾಡುವ ಮತ್ತು ಅದಕ್ಕೆ ಸ್ಪಂದಿಸುವವರನ್ನು ಜನರು ಗುರುತಿಸಿ, ಅಂತವರನ್ನು ಆಯ್ಕೆ ಮಾಡಬೇಕು. ಬಣ್ಣದ ಲೋಕದವರ ಮಾತನ್ನು ಕೇಳಿ ಯಾರೂ ಹಾಳಾಗಬೇಡಿ ಎಂದು ಸಾರಿಗೆ ಸಚಿವ ಡಿ ಸಿ ತಮ್ಮಣ್ಣ ಹೇಳಿದ್ದರು. ನಿಖಿಲ್ ಗೆ ರಕ್ತದಲ್ಲೇ ರಾಜಕೀಯ ಬೆಳೆದುಬಂದಿದೆ, ಹಾಗಾಗಿ ಅವರಿಗೆ ಅನುಭವದ ಅವಶ್ಯಕತೆಯಿಲ್ಲ ಎಂದು ತಮ್ಮಣ್ಣ ಹೇಳಿದ್ದರು.

ಡಿ.ಸಿ.ತಮ್ಮಣ್ಣ ಹೇಳಿಕೆಗೆ ತಿರುಗೇಟು ಕೊಟ್ಟ ಸುಮಲತಾಡಿ.ಸಿ.ತಮ್ಮಣ್ಣ ಹೇಳಿಕೆಗೆ ತಿರುಗೇಟು ಕೊಟ್ಟ ಸುಮಲತಾ

ತಮ್ಮಣ್ಣ ಅವರ ಮಾತು, ನಿಖಿಲ್ ಕುಮಾರಸ್ವಾಮಿಗೂ ಅನ್ವಯಿಸುತ್ತದಾ

ತಮ್ಮಣ್ಣ ಅವರ ಮಾತು, ನಿಖಿಲ್ ಕುಮಾರಸ್ವಾಮಿಗೂ ಅನ್ವಯಿಸುತ್ತದಾ

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸುಮಲತಾ, ತಮ್ಮಣ್ಣ ಅವರು ಯಾರಿಗೆ ಈ ಮಾತನ್ನು ಹೇಳುತ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿ ಬಣ್ಣ ಹಚ್ಚಲಿಲ್ಲವೇ, ಅವರ ಎರಡು ಸಿನಿಮಾ ಬಂದಿಲ್ಲವೇ? ಬಣ್ಣದ ಲೋಕದವರ ಮಾತಿಗೆ ಮರುಳಾಗಬಾರದು ಎನ್ನುವ ತಮ್ಮಣ್ಣ ಅವರ ಮಾತು, ನಿಖಿಲ್ ಕುಮಾರಸ್ವಾಮಿಗೂ ಅನ್ವಯಿಸುತ್ತದಾ ಎಂದು ಸುಮಲತಾ ಮರು ಪ್ರಶ್ನಿಸಿದ್ದಾರೆ.

ಲೋಕಸಭೆ ಚುನಾವಣೆ 2019: ಸಕ್ಕರೆ ನಾಡು ಮಂಡ್ಯ ಕ್ಷೇತ್ರದ ಪರಿಚಯಲೋಕಸಭೆ ಚುನಾವಣೆ 2019: ಸಕ್ಕರೆ ನಾಡು ಮಂಡ್ಯ ಕ್ಷೇತ್ರದ ಪರಿಚಯ

'ನಿಖಿಲ್ ಗೋಬ್ಯಾಕ್' ಅಭಿಯಾನವೂ ವ್ಯವಸ್ಥಿತ ತಂತ್ರ

'ನಿಖಿಲ್ ಗೋಬ್ಯಾಕ್' ಅಭಿಯಾನವೂ ವ್ಯವಸ್ಥಿತ ತಂತ್ರ

ಮಂಡ್ಯದಿಂದ ನಿಖಿಲ್ ಸ್ಪರ್ಧಿಸುತ್ತಿರುವುದರಿಂದ ಇದರ ಸಾಧಕ-ಬಾಧಕಗಳ ಚರ್ಚೆ ನಡೆಸಲು ಸಿಎಂ ಕುಮಾರಸ್ವಾಮಿ ಗುರುವಾರ ತಡರಾತ್ರಿಯವರೆಗೂ ಸ್ಥಳೀಯ ಮುಖಂಡರು, ಜಿಲ್ಲೆಯ ಸಚಿವರು ಮತ್ತು ಶಾಸಕರ ನಡುವೆ ಚರ್ಚೆ ನಡೆಸಿದ್ದರು ಎನ್ನುವ ಮಾಹಿತಿಯಿದೆ. ಸಾಮಾಜಿಕ ತಾಣದಲ್ಲಿನ 'ನಿಖಿಲ್ ಗೋಬ್ಯಾಕ್' ಅಭಿಯಾನವೂ ವ್ಯವಸ್ಥಿತ ತಂತ್ರ ಎಂದು ಕುಮಾರಸ್ವಾಮಿ ವ್ಯಾಖ್ಯಾನಿಸಿದ್ದರು.

ಟ್ವಿಟರ್‌ನಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ GoBack ಅಭಿಯಾನಟ್ವಿಟರ್‌ನಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ GoBack ಅಭಿಯಾನ

ಅಂಬರೀಶ್ ಇದ್ದಾಗ, ನಮ್ಮ ಸಂಬಂಧಿಕರು ಎಂದು ನಮ್ಮ ಮನೆಗೆ ಬರುತ್ತಿದ್ದರು

ಅಂಬರೀಶ್ ಇದ್ದಾಗ, ನಮ್ಮ ಸಂಬಂಧಿಕರು ಎಂದು ನಮ್ಮ ಮನೆಗೆ ಬರುತ್ತಿದ್ದರು

ನನ್ನ ಪತಿ ಕಳಂಕರಹಿತ ರಾಜಕಾರಣಿ, ನನ್ನವರ ಹೆಸರು ಹೇಳಿಕೊಂಡು ಯಾರ್ಯಾರು ಏನೇನಾಗಿದ್ದರೆ ಎನ್ನುವುದು ನನಗೆ ಗೊತ್ತಿದೆ. ಮಾತಾಡೋದು ಅವರ (ತಮ್ಮಣ್ಣ) ಸಂಸ್ಕಾರ, ಮಾತನಾಡದೇ ಇರುವುದು ನನ್ನ ಸಂಸ್ಕಾರ. ಅಂಬರೀಶ್ ಇದ್ದಾಗ, ನಮ್ಮ ಸಂಬಂಧಿಕರು ಎಂದು ನಮ್ಮ ಮನೆಗೆ ಬರುತ್ತಿದ್ದರು ಎಂದು ಡಿ ಸಿ ತಮ್ಮಣ್ಣ ವಿರುದ್ದ ಸುಮಲತಾ, ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

English summary
People should not take the words of film industry, Karnataka transport Minister DC Thammanna. Then what about Nikhil Kumaraswamy background, Sumalatha Ambarish questions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X