ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾವಯವ ಬೆಲ್ಲದ ಕಡೆಗೆ ಮುಖ ಮಾಡಿದ ಮಂಡ್ಯದ ಜನತೆ!

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಆಗಸ್ಟ್‌, 04: ಬೆಲ್ಲದ ಸಿಹಿ ಆರೋಗ್ಯಕರ ಎನ್ನುವ ವರದಿಗಳು ಇಂದು ಜನರನ್ನು ಹೊಳೆಯುವ ಸಕ್ಕರೆಯಿಂದ ವಿಮುಖರನ್ನಾಗಿಸುತ್ತಿದೆ. ಸಕ್ಕರೆಯ ಕೆಮಿಕಲ್ ಅಂಶಗಳಿಂದ ಬೇಸತ್ತಿರುವ ಜನರು ಸಾವಯವ ಬೆಲ್ಲದ ಕಡೆ ಮಖ ಮಾಡಿರುವುದು ನಿಜಕ್ಕೂ ವಿಶೇಷವಾಗಿದೆ

ವಿಶ್ವದೆಲ್ಲೆಡೆ ಶೇ.70ರಷ್ಟು ಬೆಲ್ಲವನ್ನು ಬೇರೆ ದೇಶಗಳಿಗೆ ಭಾರತವೇ ಪೂರೈಸುತ್ತಿದೆ. ದೇಶವು 2019-20ರಲ್ಲಿ 3.41 ಲಕ್ಷ ಟನ್ ಬೆಲ್ಲವನ್ನು ರಫ್ತು ಮಾಡಲಾಗಿದ್ದು, ಇದರ ಮೌಲ್ಯ ಪ್ರತಿ ವರ್ಷದ ಸರಾಸರಿಯ 1,633 ಕೋಟಿ ರೂಪಾಯಿ ಆಸುಪಾಸಿನಲ್ಲಿರುತ್ತದೆ. ಅದರಲ್ಲೂ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ನಂತರ ಕರ್ನಾಟಕವು ದೇಶದಲ್ಲೇ ಅತಿ ಹೆಚ್ಚು ಬೆಲ್ಲವನ್ನು ಉತ್ಪಾದಿಸುವ ರಾಜ್ಯ ಆಗಿದೆ.

ಸಕ್ಕರೆ ರಫ್ತು ಅನುಮತಿಗೆ ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರ ಆಹ್ವಾನ ಸಕ್ಕರೆ ರಫ್ತು ಅನುಮತಿಗೆ ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರ ಆಹ್ವಾನ

2000ನೇ ಇಸವಿಯಲ್ಲಿ ಮಂಡ್ಯ ಜಿಲ್ಲೆಯೊಂದರಲ್ಲೇ ಸುಮಾರು 5,700 ಬೆಲ್ಲ ತಯಾರಿಸುವ ಘಟಕಗಳಿದ್ದವು. ಇಂದು ಅದರಲ್ಲಿ 600ಕ್ಕಿಂತಲೂ ಕಡಿಮೆ ಘಟಕಗಳು ಇನ್ನೂ ಸಕ್ರಿಯವಾಗಿವೆ. ಪ್ರಸ್ತುತ ಮಂಡ್ಯ ಜಿಲ್ಲೆಯಲ್ಲಿ 400 ರಿಂದ 500 ಆಲೆಮನೆಗಳು ಕಾರ್ಯನಿರ್ವಹಿಸುತ್ತಿದ್ದು, 42,500 ಎಕರೆಯಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಹೋಗುವಷ್ಟೇ ಆಲೆಮನೆಗಳಿಗೂ ಕಬ್ಬು ಹೋಗುತ್ತದೆ.

ಮಂಡ್ಯ ತಾಲೂಕಿನಲ್ಲಿ 100 ರಿಂದ 120, ಮದ್ದೂರು 50-75, ಮಳವಳ್ಳಿಯಲ್ಲಿ 50-75, ಶ್ರೀರಂಗಪಟ್ಟಣ 50-60, ಪಾಂಡವಪುರ 60-70, ಕೆ.ಆರ್.ಪೇಟೆಯಲ್ಲಿ 30-40 ಹಾಗೂ ನಾಗಮಂಗಲ ತಾಲೂಕಿನಲ್ಲಿ ಅತಿ ಕಡಿಮೆ ಸಂಖ್ಯೆಯ ಆಲೆಮನೆಗಳಿವೆ. ಜನರು ಸಾಂಪ್ರದಾಯಿಕ ಬೆಲ್ಲದೆಡೆಗೆ ಒಲವು ತೋರುತ್ತಿದ್ದು, ಮಾರುಕಟ್ಟೆಯಲ್ಲಿ ಸಿಗುವ ದಿನ ಬಳಕೆಯ ಬೆಲ್ಲದ ಶುಚಿತ್ವದ ಬಗ್ಗೆ ಏನು ಹೇಳಬೇಕಾಗಿಲ್ಲ.

 ಬೆಲ್ಲದಲ್ಲಿನ ಆರೋಗ್ಯಕರ ಅಂಶಗಳು

ಬೆಲ್ಲದಲ್ಲಿನ ಆರೋಗ್ಯಕರ ಅಂಶಗಳು

ಬೆಲ್ಲವು ಕಾರ್ಬೋಹೈಡ್ರೇಟ್ ಅಂಶಗಳ ಉಗ್ರಾಣವಾಗಿದ್ದು, ಇದು ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ದೇಹದ ರಕ್ತದಲ್ಲಿ ಸಕ್ಕರೆ ಪ್ರಮಾಣದ ಮಟ್ಟವನ್ನು ಹೆಚ್ಚಿಸದೆ. ಹಾಗಾಗಿ ಸಕ್ಕರೆ ಕಾಯಿಲೆ ಇರುವವರಿಗೂ ಇದು ಪ್ರಯೋಜನಕಾರಿ ಎನ್ನಲಾಗಿದೆ. ಸಾವಯುವ ಬೆಲ್ಲವು ನಮ್ಮ ದೇಹದಲ್ಲಿ ಜೀರ್ಣಕಾರಿ ಕಿಣ್ವಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ಸ್ವತಃ ಹೊಟ್ಟೆಯಲ್ಲಿ ಅಸಿಟಿಕ್ ಆಮ್ಲವಾಗಿ ಬದಲಾಗುತ್ತದೆ. ಕರುಳು ಮತ್ತು ಜೀರ್ಣಾಂಗ ವ್ಯವಸ್ಥೆಯ ಮೇಲೆ ಉಂಟಾಗುವ ಒತ್ತಡವನ್ನು ಕಡಿಮೆ ಆಗುವಂತೆ ಮಾಡುತ್ತದೆ.

ಬೆಲ್ಲವು ಉಸಿರಾಟ, ಶ್ವಾಸಕೋಶಗಳು, ಅನ್ನನಾಳ, ಹೊಟ್ಟೆಯ ಭಾಗ ಮತ್ತು ಕರುಳನ್ನು ಪರಿಣಾಮಕಾರಿಯಾಗಿ ಸ್ವಚ್ಛ ಮಾಡುತ್ತದೆ. ನಾರಿನ ಅಂಶ ಇರುವುದರಿಂದ ಹೆಚ್ಚಾಗಿ ಸಹಾಯಕವಾಗುತ್ತದೆ. ಕರುಳಿನ ಚಲನೆಯನ್ನು ಉತ್ತೇಜಿಸುವುದು ಮತ್ತು ದೇಹವನ್ನು ಶುದ್ಧಗೊಳಿಸುವುದು ಬೆಲ್ಲದ ಪ್ರಮುಖ ಆದ್ಯತೆ ಆಗಿರುತ್ತದೆ. ಸಾವಯುವ ಬೆಲ್ಲದಲ್ಲಿ ಕಬ್ಬಿಣದ ಅಂಶ ಹೇರಳವಾಗಿರುವುದರಿಂದ ರಕ್ತದ ಉತ್ಪಾದನೆಗೆ ಹೆಚ್ಚು ಒತ್ತು ಕೊಡುತ್ತದೆ.

ರಕ್ತಹೀನತೆ ಸಮಸ್ಯೆ ಇರುವವರಿಗೆ ಅಥವಾ ಕೆಂಪು ರಕ್ತಕಣಗಳ ಉತ್ಪಾದನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುವವರಿಗೆ ಉಪಯುಕ್ತವಾಗಿದೆ. ಚರ್ಮಕ್ಕೆ ಆರೋಗ್ಯಕರ ಹೊಳಪು, ಧೀರ್ಘ ಕಾಲದವರೆಗೆ ರೋಗಮುಕ್ತವಾಗಲು ಅನುಕೂಲವಾಗುತ್ತದೆ ಎಂದು ವೈದ್ಯಕೀಯ ಮೂಲಗಳಿಂದ ತಿಳಿದುಬಂದಿದೆ. ಶೇಕಡಾ 100ರಷ್ಟು ಸಾವಯವವಾದ ಬೆಲ್ಲವು ಡಿಟಾಕ್ಸ್ ಆಗಿ ಕಾರ್ಯನಿರ್ವಹಿಸುತ್ತದೆ. ಏಕೆಂದರೆ ಇದು ದೇಹದಿಂದ ಅಸಹ್ಯವಾದ ವಿಷವನ್ನು ಹೊರಹಾಕುವ ಮೂಲಕ ಯಕೃತ್ತನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.

 ಕೆಮಿಕಲ್ಸ್‌ಗಳ ಬಳಕೆಯಿಂದ ಹೆಚ್ಚಾದ ಆಪತ್ತು

ಕೆಮಿಕಲ್ಸ್‌ಗಳ ಬಳಕೆಯಿಂದ ಹೆಚ್ಚಾದ ಆಪತ್ತು

ಇತ್ತೀಚೆಗೆ ಮಂಡ್ಯ ಜಿಲ್ಲೆಯಲ್ಲಿ ತಯಾರಾದ ಬೆಲ್ಲವನ್ನು ಖರೀದಿಸುವುದನ್ನು ವಿರೋಧಿಸಿ ಗುಜರಾತ್‌ನ ವ್ಯಾಪಾರಿಗಳು ಪ್ರತಿರೋಧಿಸಿದ್ದರು. ಇದರಿಂದ ಇಲ್ಲಿನ ದಶಕಗಳ ಹಿಂದಿನ ಬೆಲ್ಲದ ವ್ಯಾಪಾರದ ಮೇಲೆ ಕರಿನೆರಳು ಬೀರಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಬೆಲ್ಲದ ಘಟಕಗಳ ಮೇಲೆ ಆಹಾರ ಇಲಾಖೆ ಸಂಬಂಧಿಸಿದ ಅಧಿಕಾರಿಗಳು ದಾಳಿ ನಡೆಸಿದ್ದು, ತಯಾರಕರು ಸಕ್ಕರೆಯೊಂದಿಗೆ ಬೆಲ್ಲವನ್ನು ಹೇಗೆ ಉತ್ಪಾದಿಸುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಿದರು. ಪ್ರಕ್ರಿಯೆಯನ್ನು ತ್ವರಿತವಾಗಿ ಮತ್ತು ತ್ವರಿತ ಲಾಭಗಳಿಸಲು ಆಲೆಮನೆಯವರು ಮಾಡಿದ ತಂತ್ರ ಬಯಲು ಮಾಡಿದ್ದರು.

ಹೊಸಪೇಟೆ ಸೇರಿದಂತೆ ಮುಂತಾದ ಕಡೆಗಳಲ್ಲಿ ಅಧಿಕಾರಿಗಳು ದಾಳಿ ಮಾಡಿದಾಗ ಆಹಾರ ನಕಲಿ ಬೆಲ್ಲದ ತಯಾರಿಕೆಯ ಜಾಡು ಸಿಕ್ಕಿತ್ತು. ಅಲ್ಲಿ ಕೈಗಾರಿಕಾ ದರ್ಜೆಯ ರಾಸಾಯನಿಕಗಳು ಮತ್ತು ಸಿಂಥೆಟಿಕ್ ಬಣ್ಣಗಳನ್ನು ಮೀರಿ ಬೆಲ್ಲಕ್ಕೆ ಕಲಬೆರಕೆ ಮಾಡುತ್ತಿದ್ದರು. ಇದರ ಪರಿಣಾಮ ‘ಒಂದು ಜಿಲ್ಲೆ, ಒಂದು ಉತ್ಪನ್ನ' ಯೋಜನೆಯಡಿಯಲ್ಲಿ ಗುಡಿ ಕೈಗಾರಿಕೆಗಳನ್ನು ಪುನರುಜ್ಜೀವನಗೊಳಿಸುವ ರಾಜ್ಯ ಸರ್ಕಾರದ ಯೋಜನೆಗಳಿಗೆ ತೊಡಕಾಗಿ ಪರಿಣಮಿಸಿತು.

 ಸಾಮಯವ ಬೆಲ್ಲದ ಕಡೆ ಹೆಚ್ಚು ಒತ್ತು

ಸಾಮಯವ ಬೆಲ್ಲದ ಕಡೆ ಹೆಚ್ಚು ಒತ್ತು

2017ರಲ್ಲಿ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ಮಂಡ್ಯ ಬೆಲ್ಲದ ಗುಣಮಟ್ಟದ ಮೌಲ್ಯಮಾಪನ ಮಾಡಿತ್ತು. ಕೈಗಾರಿಕಾ ಬ್ಲೀಚಿಂಗ್ ಏಜೆಂಟ್‌ಗಳು ಆಮ್ಲಗಳ ಜೊತೆಗೆ ಸೀಶೆಲ್‌ಗಳು, ಮರದ ಪುಡಿ ಮತ್ತು ಇತರ ಪದಾರ್ಥಗಳ ವ್ಯಾಪಕ ಬಳಕೆಯನ್ನು ಬಹಿರಂಗಪಡಿಸಿತು. ಮಂಡ್ಯ ಭಾಗದ ಕೆಲವು ಬೆಲ್ಲದ ಘಟಕಗಳು ವಿಶೇಷವಾಗಿ ಕ್ಯಾಲ್ಸಿಯಂ ಹೈಡ್ರಾಕ್ಸೈಡ್, ಸೋಡಿಯಂ ಹೈಡ್ರೋಸಲ್ಫೈಟ್‌, ಸೋಡಿಯಂ ಸೇರಿದಂತೆ ಕೈಗಾರಿಕಾ ಗುಣಮಟ್ಟದ ಅಡಿಗೆ ಸೋಡಾ ಮತ್ತು ಸಿಂಥೆಟಿಕ್ ಬಣ್ಣಗಳನ್ನು ಬಳಸುತ್ತಿವೆ ಎಂದು ಎನ್ನುವ ಮಾಹಿತಿಯನ್ನು ಬಹಿರಂಗಪಡಿಸಿದ್ದರು.

 ರಾಸಯನಿಕ ಮುಕ್ತ ಬೆಲ್ಲದ ಕಡೆ ಗಮನ

ರಾಸಯನಿಕ ಮುಕ್ತ ಬೆಲ್ಲದ ಕಡೆ ಗಮನ

ಹೈಡ್ರೋಸ್ ಮತ್ತು ಸೋಲೈಟ್‌ನಂತಹ ರಾಸಾಯನಿಕಗಳನ್ನು ಬ್ಲೀಚ್ ಮಾಡಲು ಮತ್ತು ಉತ್ಪನ್ನಕ್ಕೆ ಬಣ್ಣ ನೀಡಲು ಬಳಸಲಾಗುತ್ತದೆ. ಇದವೆಲ್ಲ ರಾಸಾಯನಿಕಗಳು ಆರೋಗ್ಯವನ್ನು ಹಾಳುಮಾಡುತ್ತವೆ ಎನ್ನುವ ಕಾರಣಕ್ಕೆ ಸಾವಯವ ಬೆಲ್ಲದೆಡೆಗೆ ಸರ್ಕಾರ ಹೆಚ್ಚು ಗಮನ ನೀಡಿದೆ. ಪ್ರಧಾನ ಮಂತ್ರಿಯವರ ಆತ್ಮನಿರ್ಭರ ಭಾರತ್ ಯೋಜನೆಯಡಿ ಸಾವಯವ ಬೆಲ್ಲಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜನತೆ ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಮುಕ್ತ ಸಾವಯವ ಬೆಲ್ಲದ ಕಡೆಗೆ ಮುಖ ಮಾಡಿರುವುದು ವಿಶೇಷವಾಗಿದೆ.

Recommended Video

Rohit Sharma ಅನುಪಸ್ಥಿತಿಯಲ್ಲಿ ಭಾರತ ತಂಡಕ್ಕೆ ಹೊಸ ನಾಯಕ | *Cricket | OneIndia Kannada

English summary
Mandya people using organic jaggery instead of sugar. Mandya sugar bowl of the Karnataka. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X