ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಕ್ಕರೆಬೆಳ್ಳೂರಿನಲ್ಲಿ ಆತಂಕ ತಂದ ಪೆಲಿಕಾನ್ ಸಾವು!

|
Google Oneindia Kannada News

ಮಂಡ್ಯ, ಜನವರಿ 11: ಹಕ್ಕಿ ಜ್ವರದ ಆತಂಕ ಮನೆ ಮಾಡಿರುವ ಬೆನ್ನಲ್ಲೇ ಪಕ್ಷಿಧಾಮ ಕೊಕ್ಕರೆಬೆಳ್ಳೂರಿನಲ್ಲಿ ಕೊಕ್ಕರೆ (ಫೆಲಿಕಾನ್)ಗಳು ಸಾವನ್ನಪ್ಪುತ್ತಿರುವುದು ಆತಂಕ ಉಂಟು ಮಾಡಿದೆ. ಒಂದೆಡೆ ಹಕ್ಕಿಜ್ವರದ ಭಯ ಮತ್ತೊಂದೆಡೆ ಪೆಲಿಕಾನ್ ಗಳ ಸಾವಿನ ಸಾವಿನ ಸರಣಿ ಮುಂದುವರೆಯುತ್ತಿರುವುದು ಪಕ್ಷಿಪ್ರಿಯರಲ್ಲಿ ಭಯವನ್ನುಂಟು ಮಾಡಿದೆ.

ಈಗ ಸಾವನ್ನಪ್ಪುತ್ತಿರುವ ಪೆಲಿಕಾನ್ ಗಳ ಸಾವಿಗೆ ಕಾರಣ ಹಕ್ಕಿ ಜ್ವರನಾ? ಅಥವಾ ಜಂತುಹುಳು ಬಾಧೆನಾ? ಎಂಬುದು ಪರೀಕ್ಷೆಯಿಂದ ಗೊತ್ತಾಗಬೇಕಾಗಿದೆ. ಮರದ ಮೇಲಿಂದ ಉರುಳಿ ಬಿದ್ದು ಪೆಲಿಕಾನ್ ಸಾವನ್ನಪ್ಪಿದ್ದು, ಇದರಿಂದ ಕಳೆದ ನವಂಬರ್‌ನಿಂದ ಇಲ್ಲಿವರೆಗೆ ಸಾವನ್ನಪ್ಪಿದ ಫೆಲಿಕಾನ್‍ಗಳ ಸಂಖ್ಯೆ 6ಕ್ಕೇ ಏರಿಕೆಯಾಗಿದೆ.

ಚಿತ್ರಗಳು; ಹಕ್ಕಿ ಜ್ವರವಿದ್ದರೂ ಮೈಸೂರು ಗಡಿಯ ಚೆಕ್ ಪೋಸ್ಟ್‌ನಲ್ಲಿ ನಿರ್ಲಕ್ಷ್ಯ ಚಿತ್ರಗಳು; ಹಕ್ಕಿ ಜ್ವರವಿದ್ದರೂ ಮೈಸೂರು ಗಡಿಯ ಚೆಕ್ ಪೋಸ್ಟ್‌ನಲ್ಲಿ ನಿರ್ಲಕ್ಷ್ಯ

ಇದು ಇಲ್ಲಿನ ಪಕ್ಷಿ ಪ್ರೇಮಿಗಳ ಆತಂಕಕ್ಕೆ ಕಾರಣವಾಗಿದೆ. ಇನ್ನು ಮೃತಪಟ್ಟ ಪೆಲಿಕಾನ್ ಕಳೆಬರದ ಪರೀಕ್ಷೆ ನಡೆಸಿದ ಪಶು ವೈದ್ಯ ಡಾ.ಸತೀಶ್ ಅವರು ಮಾತನಾಡಿ, "ಪೆಲಿಕಾನ್ ಗಳ ಸರಣಿ ಸಾವಿಗೆ ಜಂತುಹುಳುಗಳೇ ಕಾರಣವಾಗಿವೆ ಎಂಬುದು ಮೇಲ್ನೋಟಕ್ಕೆ ದೃಢಪಡುತ್ತಿದೆ. ಆದರೂ ಈ ಬಗ್ಗೆ ಹೆಚ್ಚಿನ ಪರೀಕ್ಷೆಗೆ ಉತ್ತರ ಪ್ರದೇಶದಲ್ಲಿರುವ ಇಂಡಿಯನ್ ವೆಟೆರ್ನರಿ ರೀಸರ್ಚ್ ಇನ್‍ಸ್ಟಿಟ್ಯೂಶನ್ ಹಾಗೂ ತಮಿಳುನಾಡು ಕೊಯಮತ್ತೂರಿನಲ್ಲಿರುವ ಸಕಾನ್ ಸಂಸ್ಥೆಗೆ ಪೆಲಿಕಾನ್ ಸ್ಯಾಂಪಲ್ ಕಳುಹಿಸಲಾಗಿದೆ. ಹಕ್ಕಿ ಜ್ವರದ ಭೀತಿಯಂತು ಇಲ್ಲ" ಎಂದು ಸ್ಪಷ್ಟಪಡಿಸಿದರು.

 ದೆಹಲಿಯಲ್ಲೂ ನೂರಾರು ಕಾಗೆಗಳ ಸಾವು: ಪಕ್ಷಿ ಜ್ವರ ದೃಢ! ದೆಹಲಿಯಲ್ಲೂ ನೂರಾರು ಕಾಗೆಗಳ ಸಾವು: ಪಕ್ಷಿ ಜ್ವರ ದೃಢ!

Pelican Dies In Kokkare Bellur Creates Panic

ಭಯದ ವಾತಾವರಣ ನಿರ್ಮಾಣ; ವಿದೇಶದಿಂದ ಸಂತಾನ ಅಭಿವೃದ್ಧಿಗಾಗಿ ಕೊಕ್ಕರೆ ಬೆಳ್ಳೂರು ಗ್ರಾಮಕ್ಕೆ ಆಗಮಿಸುವ ಪೆಲಿಕಾನ್ ಗಳು, ಗ್ರಾಮದ ಮಧ್ಯೆಯೇ ಮರಗಳ ಮೇಲೆ ಗೂಡು ಕಟ್ಟಿ ವಾಸಿಸುವುದು ಮಾಮೂಲಿಯಾಗಿದೆ. ಇವು ಸುತ್ತಮುತ್ತಲಿನ ಜಮೀನುಗಳಿಂದ ಆಹಾರಗಳನ್ನು ಹೆಕ್ಕಿ ತಿನ್ನುತ್ತಿದ್ದು, ಕಳೆದ ನಾಲ್ಕು ವರ್ಷಗಳಿಂದೀಚೆಗೆ ಇವುಗಳು ಮೇಲಿಂದ ಮೇಲೆ ಸಾವನ್ನಪ್ಪುತ್ತಿವೆ.

ಪ್ರತಿಭಟನಾ ನಿರತ ರೈತರು ತಿನ್ನುತ್ತಿರುವ ಚಿಕನ್ ಬಿರಿಯಾನಿಯಿಂದ ಹಕ್ಕಿ ಜ್ವರ ಹರಡುತ್ತಿದೆ: ಬಿಜೆಪಿ ಶಾಸಕ ಆರೋಪ ಪ್ರತಿಭಟನಾ ನಿರತ ರೈತರು ತಿನ್ನುತ್ತಿರುವ ಚಿಕನ್ ಬಿರಿಯಾನಿಯಿಂದ ಹಕ್ಕಿ ಜ್ವರ ಹರಡುತ್ತಿದೆ: ಬಿಜೆಪಿ ಶಾಸಕ ಆರೋಪ

ಮರದಲ್ಲಿ ಕುಳಿತ ಪೆಲಿಕಾನ್ ಗಳು ಇದ್ದಕ್ಕಿದ್ದಂತೆಯೇ ಮರದ ಮೇಲಿಂದ ಉರುಳಿ ಬಿದ್ದು ಸಾವನ್ನಪ್ಪುತ್ತಿವೆ. ಹೀಗೆ ಇದುವರೆಗೆ ಸುಮಾರು 125 ಕ್ಕೂ ಹೆಚ್ಚು ಫೆಲಿಕಾನ್‍ಗಳು ಮೃತಟ್ಟಿವೆ ಎಂದು ಹೇಳಲಾಗುತ್ತಿದೆ. ಈ ಕುರಿತಂತೆ ಅರಣ್ಯ ಹಾಗೂ ಪಶು ಇಲಾಖೆ ಮತ್ತು ಹಲವು ಪಕ್ಷಿ ತಜ್ಞರು ಈ ಪೆಲಿಕಾನ್ ಗಳ ಸಾವಿಗೆ ಸಂಬಂಧಿಸಿದಂತೆ ಹಲವು ರೀತಿಯ ಪರೀಕ್ಷೆಗಳನ್ನು ಕೈಗೊಂಡಿದ್ದರೂ ಕೂಡ ಗ್ರಾಮದಲ್ಲಿ ಫೆಲಿಕಾನ್‍ಗಳ ಸಾವು ಮಾತ್ರ ನಿಂತಿಲ್ಲ.

Pelican Dies In Kokkare Bellur Creates Panic

ಇದು ಒಂದು ರೀತಿಯಲ್ಲಿ ಜನರನ್ನು ಭಯಭೀತರನ್ನಾಗಿಸಿದೆ. ಇದುವರೆಗೆ ಇವುಗಳ ಸಾವಿನ ಬಗ್ಗೆ ಅಷ್ಟೊಂದಾಗಿ ಜನ ತಲೆಕೆಡಿಸಿಕೊಳ್ಳದಿದ್ದರೂ ಈ ಬಾರಿ ಹಕ್ಕಿಜ್ವರ ಹಲವೆಡೆ ಕಂಡು ಬಂದಿರುವ ಈ ಸಮಯದಲ್ಲಿ ಪೆಲಿಕಾನ್ ಸಾವು ಭಯದ ವಾತಾವರಣವನ್ನು ನಿರ್ಮಿಸಿದೆ.

ಕಟ್ಟೆಚ್ಚರ: ಕೊಕ್ಕರೆ ಬೆಳ್ಳೂರಿನಲ್ಲಿ ಪೆಲಿಕಾನ್ ಮೃತಪಟ್ಟ ಕಾರಣ ಹಾಗೂ ಹಕ್ಕಿಜ್ವರದ ಭೀತಿಯಿಂದಾಗಿ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮದಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ. ಪಕ್ಷಿಧಾಮದ ಆವರಣದಲ್ಲೆಲ್ಲಾ ಹೈಪರ್ ಕ್ಲೋರೈಡ್‍ನ್ನು ಸಿಂಪಡಿಸಲಾಗಿದೆ. ಪಕ್ಷಿಗಳ ಹಿಕ್ಕೆಗಳನ್ನು ಆಗಾಗ್ಗೆ ಪ್ರಯೋಗಾಲಯಕ್ಕೆ ಕಳುಹಿಸಿ ಪಕ್ಷಿಗಳಿಗೆ ತೊಂದರೆ ಇರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

English summary
Pelicans death in Kokkare Bellur, Mandya created panic in the time of bird flu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X