ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಜಾಪ್ರಭುತ್ವದ ಆಶಯ ಕೇವಲ ಬಿಜೆಪಿಯಿಂದ ಈಡೇರಿಸಲು ಸಾಧ್ಯ: ಡಾ.ಅಶ್ವತ್ಥನಾರಾಯಣ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಜೂ 6: ಪ್ರಜಾಪ್ರಭುತ್ವದ ಆಶಯಗಳನ್ನು ರಾಜಕೀಯ ಪಕ್ಷದಲ್ಲಿ ಜಾರಿಗೊಳಿಸಿರುವುದು ಕೇವಲ ಬಿಜೆಪಿ ಮಾತ್ರ. ಬೇರೆ ಪಕ್ಷಗಳಲ್ಲಿ ಪ್ರಜಾಪ್ರಭುತ್ವದ ಆಶಯಗಳೇ ಈಡೇರದ ಮೇಲೆ ಇನ್ನು ಸಮಾಜವನ್ನು ಯಾವ ರೀತಿ ಸುಧಾರಣೆ ಮಾಡಲು ಸಾಧ್ಯ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಪ್ರಶ್ನಿಸಿದರು.

ದಕ್ಷಿಣ ಪದವೀಧರ ಕ್ಷೇತ್ರದ ಅಭ್ಯರ್ಥಿ ಮೈ.ವಿ.ರವಿಶಂಕರ್ ಪರವಾಗಿ ಮದ್ದೂರಿನಲ್ಲಿ ಪಟ್ಟಣದಲ್ಲಿ ಪ್ರಚಾರ ಕೈಗೊಂಡು ಮಾತನಾಡಿದ ಅವರು, ರಾಜಕೀಯ ಪಕ್ಷಗಳು, ಕುಟುಂಬ ಮತ್ತು ಕೆಲವೇ ವ್ಯಕ್ತಿಗಳಿಗೆ ಮಾತ್ರ ಸೀಮಿತವಾಗಿವೆ. ಇದರಿಂದ ಪ್ರಜಾಪ್ರಭುತ್ವದ ಆಶಯಗಳು ಗಾಳಿಗೆ ತೂರಿವೆ. ಪಕ್ಷಗಳಲ್ಲೇ ಈ ರೀತಿಯ ವ್ಯವಸ್ಥೆ ಇದ್ದರೆ ಇನ್ನು ದೇಶದ ವ್ಯವಸ್ಥೆಯನ್ನು ಸಹ ಸುಧಾರಣೆ ಮಾಡಲಾಗುದು ಎಂದು ಹೇಳಿದರು.

ಶಿಕ್ಷಕ, ಪದವೀಧರ ಕ್ಷೇತ್ರದ ಚುನಾವಣೆ: ಮತದಾನದ ಅವಧಿ ವಿಸ್ತರಣೆಗೆ ಮನವಿಶಿಕ್ಷಕ, ಪದವೀಧರ ಕ್ಷೇತ್ರದ ಚುನಾವಣೆ: ಮತದಾನದ ಅವಧಿ ವಿಸ್ತರಣೆಗೆ ಮನವಿ

ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡುವುದು, ಕುಟುಂಬ ರಾಜಕೀಯಕ್ಕೆ ಅವಕಾಶ ನೀಡದ ಪಕ್ಷ ಎಂದರೆ ಅದು ಭಾರತೀಯ ಜನತಾ ಪಾರ್ಟಿ ಮಾತ್ರ ಎಂದು ಹೇಳಿದರು.

Only BJP can Fulfil Democracy, Says Minister Ashwath Narayana

ಬಿಜೆಪಿಗೆ ಮೊದಲ ಪ್ರಾಶಸ್ತ್ಯ ಮತ ನೀಡಿ: ಡಾ.ಸಿ.ಎನ್.ಅಶ್ವತ್ಥನಾರಾಯಣ

ನಮ್ಮ ಸರ್ಕಾರ ಬಂದ ನಂತರ ಶಿಕ್ಷಣದಲ್ಲಿ ಬಹಳಷ್ಟು ಸುಧಾರಣೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದೇವೆ. ತ್ರಂತ್ರಜ್ಞಾನವನ್ನೂ ಬಳಕೆ ಮಾಡಿಕೊಂಡಿದ್ದೇವೆ. ಆ ಮೂಲಕ ಶಿಕ್ಷಕರ ಸಮಸ್ಯೆಗಳನ್ನೂ ಬಗೆಹರಿಸುವ ಪ್ರಯತ್ನ ಮಾಡಿದ್ದೇವೆ. ಹಲವಾರು ಸೌಲಭ್ಯಗಳನೂ ನೀಡಿದ್ದೇವೆ. ಇನ್ನೂ ಪೂರಕ ಸೌಲಭ್ಯ ಕೊಡುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದೇವೆ ಎಂದು ಹೇಳಿದರು.

ಸಿದ್ದರಾಮಯ್ಯ ಬಳಿ ವಾಚ್, ಶೂ ಲೆಕ್ಕ ಕೇಳಿದ; ಅಶ್ವಥ್ ನಾರಾಯಣಸಿದ್ದರಾಮಯ್ಯ ಬಳಿ ವಾಚ್, ಶೂ ಲೆಕ್ಕ ಕೇಳಿದ; ಅಶ್ವಥ್ ನಾರಾಯಣ

ಕಲಿಕೆಗೆ ಅವಕಾಶ ನೀಡುವ ದೃಷ್ಠಿಯಿಂದ ಎಲ್ಲಾ ರೀತಿಯ ಸುಧಾರಣೆಗಳನ್ನು ಮಾಡಿದ್ದೇವೆ. ಗುಣಮಟ್ಟದ ಸಮಾಜ ಕಟ್ಟೋಣ. ಸಮಾಜದಲ್ಲಿ ಏನೇ ಸುಧಾರಣೆ ತಂದರೂ ಅದು ಕೇವಲ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.

Only BJP can Fulfil Democracy, Says Minister Ashwath Narayana

ದಕ್ಷಿಣ ಪದವೀಧರ ಕ್ಷೇತ್ರದ ನಮ್ಮ ಅಭ್ಯರ್ಥಿ ಮೈ.ವಿ.ರವಿಶಂಕರ್ ಅವರು ಕಳೆದ 50 ವರ್ಷಗಳಿಂದ ಪಕ್ಷದಲ್ಲಿದ್ದುಕೊಂಡು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಸೇವೆ ಮಾಡಿರುವ ಅನುಭವ ಇದೆ. ಅವರಿಗೆ ಮೊದಲ ಪ್ರಾಶಸ್ತ್ಯ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು. ಮೈ.ವಿ.ರವಿಶಂಕರ್ ಅವರು ಸಮಾಜದ ಅಭಿವೃದ್ಧಿಗೆ ಸರ್ವ ಪ್ರಯತ್ನ ಮಾಡುತ್ತಾರೆ. ಇದರಿಂದ ಸಮಾಜದ ಸಮೃದ್ಧಿಗೆ ಸರ್ಕಾರ ಮಾಡುವ ಸರ್ವಪ್ರಯತ್ನಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು.

(ಒನ್ಇಂಡಿಯಾ ಸುದ್ದಿ)

English summary
BJP is the only party that doesn't allow family politics, said minister Ashwath Narayana during election campaign for party candidate MV Ravishankar in South Graduates constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X