ಮಂಡ್ಯ; ರಸ್ತೆ ಹಂಪ್ ದಾಟುವಾಗ ಬೈಕಿನಿಂದ ಬಿದ್ದು ಮಗು ಸಾವು
ಮಂಡ್ಯ, ನವೆಂಬರ್ 20: ಬೈಕಿನಲ್ಲಿ ಹೋಗುವಾಗ ತಾಯಿಯ ಮಡಿಲಿನಲ್ಲಿ ಕುಳಿತಿದ್ದ ಒಂದು ವರ್ಷದ ಮಗು ಕೈ ಜಾರಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮಂಡ್ಯದ ಕಿರಂಗೂರು ಗ್ರಾಮದ ಬಳಿ ಗುರುವಾರ ನಡೆದಿದೆ.
ಚಂದಗಾಲು ಗ್ರಾಮದ ಶಿವಕುಮಾರ್ ಮತ್ತು ರಂಜಿತಾ ದಂಪತಿ ಮೃತ ಮಗುವಿನ ಪೋಷಕರು. ಮದುವೆ ಕಾರ್ಯಕ್ರಮವನ್ನು ಮುಗಿಸಿಕೊಂಡು ದಂಪತಿ ಮಗುವನ್ನು ಬೈಕಿನಲ್ಲಿ ಕೂರಿಸಿಕೊಂಡು ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಮಂಡ್ಯ: ತಾಯಿ ಒಳಗೆ ಹೋದಾಗ ಮಹಡಿಯಿಂದ ಬಿದ್ದು ಹೆಣ್ಣುಮಗು ಸಾವು
ಕಿರಂಗೂರು ಗ್ರಾಮದ ಬಳಿ ರಸ್ತೆಯ ಉಬ್ಬು ಇದ್ದು, ಶಿವಕುಮಾರ್ ತಮ್ಮ ಬೈಕನ್ನು ಹಂಪ್ ಮೇಲೆ ಹತ್ತಿಸಿದ್ದಾರೆ. ರಂಜಿತಾ ಅವರು ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡಿದ್ದರು. ಬೈಕ್ ಹಂಪ್ ಹತ್ತಿದ ವೇಳೆ ಮಗು ರಂಜಿತಾ ಅವರ ಕೈಯಿಂದ ಜಾರಿ ರಸ್ತೆಗೆ ಬಿದ್ದಿದೆ. ಈ ವೇಳೆ ಮಗು ತೀವ್ರವಾಗಿ ಗಾಯಗೊಂಡಿದೆ. ಮಗುವನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದ ಕಾರಣ ಮಗು ಕೊನೆಯುಸಿರೆಳೆದಿದೆ.
Recommended Video
ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.