ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ: ಪೆಂಟಾವಲೆಂಟ್ ಚುಚ್ಚುಮದ್ದಿಗೆ ಮತ್ತೊಂದು ಮಗು ಬಲಿ

|
Google Oneindia Kannada News

ಮಂಡ್ಯ, ಫೆಬ್ರವರಿ 13 : ಪೆಂಟಾವಲೆಂಟ್ ಚುಚ್ಚುಮದ್ದಿಗೆ ಮಂಡ್ಯ ಜಿಲ್ಲೆಯಲ್ಲಿ ಮತ್ತೊಂದು ಮಗು ಬಲಿಯಾಗಿದೆ. ಮಳವಳ್ಳಿ ತಾಲೂಕಿನ ಹಾಡ್ಲಿ ಗ್ರಾಮದ ಸಂತೋಷ್, ಹೇಮಾ ದಂಪತಿಯ 2 ತಿಂಗಳ ಕೂಸು ಸಾವನ್ನಪ್ಪಿದೆ. ಗುರುವಾರ ಅಗಸನಪುರ ಅಂಗನವಾಡಿಯಲ್ಲಿ ಚುಚ್ಚುಮದ್ದು ಹಾಕಲಾಗಿತ್ತು.

ಚುಚ್ಚುಮದ್ದು ಕೊಟ್ಟ ಕೆಲವು ಗಂಟೆಗಳ ನಂತರ ಮಗು ಅನಾರೋಗ್ಯ ಈಡಾಗಿದೆ. ಭಾನುವಾರ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಮಗುವನ್ನು ಚಿಕಿತ್ಸೆಗೆ ದಾಖಲಿಸಲಾಗಿತ್ತು. ಫಲಕಾರಿಯಾಗದೇ ರಾತ್ರಿ ಆಸ್ಪತ್ರೆಯಲ್ಲಿಯೇ ಪುಟಾಣಿ ಕೊನೆ ಯುಸಿರೆಳೆದಿದೆ.

ಮಂಡ್ಯ: ಅಂಗನವಾಡಿ ಚುಚ್ಚುಮದ್ದಿನಿಂದ 2 ಮಕ್ಕಳು ಸಾವುಮಂಡ್ಯ: ಅಂಗನವಾಡಿ ಚುಚ್ಚುಮದ್ದಿನಿಂದ 2 ಮಕ್ಕಳು ಸಾವು

ಚುಚ್ಚುಮದ್ದಿನಿಂದಲೇ ಮಗು ಸತ್ತಿದೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ. ಬೇರೆ ಕಾಯಿಲೆಯಿಂದ ಮಗು ಸತ್ತಿದೆ ಎಂದು ಮಿಮ್ಸ್ ವೈದ್ಯರು ಸ್ಪಷ್ಟನೆ ನೀಡಿದ್ದಾರೆ. ಪಂಚನಾಮೆ ನಡೆಸದೇ ಮಗುವಿನ ಶವ ಪೋಷಕರಿಗೆ ಹಸ್ತಾಂತರಿಸಿದ್ದು, ವೈದ್ಯರ ಈ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಚಿಂದಗಿರಿ ದೊಡ್ಡಿಯಲ್ಲಿ ಶುಕ್ರವಾರ ಇಬ್ಬರು ಮಕ್ಕಳು ಚುಚ್ಚುಮದ್ದಿನಿಂದ ಸಾವನ್ನಪ್ಪಿದ್ದರು. ಏಳು ಮಕ್ಕಳು ಅಸ್ವಸ್ಥರಾಗಿದ್ದರು.

One more baby die in Mandya After Vaccination
English summary
Baby died after the Pentavalent vaccine which fights for diseases on Tuesday. Vaccin at Anganawadi centre on Thursday. There is possibility that within 48 hours of administering the Pentavalent vaccine, it can cause adverse side -effects. As per preliminary investigation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X