ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಂಗನತಿಟ್ಟು ಪಕ್ಷಿಧಾಮದ ಹಿರಿಮೆಗೆ ಮತ್ತೊಂದು ಗರಿ!

|
Google Oneindia Kannada News

ಮಂಡ್ಯ,ಆಗಸ್ಟ್.4: ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮಂಡ್ಯದ ರಂಗನತಿಟ್ಟು ಪಕ್ಷಿಧಾಮವನ್ನು ರಾಮ್ಸಾರ್ ಸೈಟ್ ಎಂದು ಘೋಷಿಸಿದೆ.

ಹತ್ತು ವರ್ಷಗಳ ಕಾಯುವಿಕೆಯ ನಂತರ ಕರ್ನಾಟಕವು ತನ್ನ ಮೊದಲ ರಾಮ್ಸಾರ್ ಸೈಟ್ ಅನ್ನು ಪಡೆದುಕೊಂಡಿದೆ. ಇದರೊಂದಿಗೆ ಅರಣ್ಯ ಇಲಾಖೆ, ಸ್ಥಳೀಯ ಆಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯು ತಾಣದ ಉತ್ತಮ ಸಂರಕ್ಷಣೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.

ಸ್ಥಗಿತಗೊಂಡಿದ್ದ ಮೈಶುಗರ್ ಕಾರ್ಖಾನೆ ಆಗಸ್ಟ್ 8ರಂದು ಪುನಾರಂಭಸ್ಥಗಿತಗೊಂಡಿದ್ದ ಮೈಶುಗರ್ ಕಾರ್ಖಾನೆ ಆಗಸ್ಟ್ 8ರಂದು ಪುನಾರಂಭ

ಈ ಮೂಲಕ ರಂಗನತಿಟ್ಟು ಪರಿಸರ, ಪ್ರವಾಸೋದ್ಯಮ ಸಾಮರ್ಥ್ಯವನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅಳೆಯುತ್ತದೆ. ರಂಗನತಿಟ್ಟು ಜೌಗು ಪ್ರದೇಶದ ಅವಿಭಾಜ್ಯ ಅಂಗವಾಗಿದ್ದು, 517.70 ಹೆಕ್ಟೇರ್‌ಗಳಲ್ಲಿ ವ್ಯಾಪಿಸಿದೆ. ಕಾವೇರಿ ನದಿಯ ಮಧ್ಯೆ ಈ ಪ್ರದೇಶ ನೆಲೆಗೊಂಡಿದೆ.

ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯಿಂದ ಗುರುತಿಸಲ್ಪಟ್ಟ ಕರ್ನಾಟಕದ 42 ತಾಣಗಳ ಪ್ರಮುಖ ಪಕ್ಷಿ ಪ್ರದೇಶಗಳ ಪಟ್ಟಿಯಲ್ಲಿ ಇದು ಸ್ಥಾನವನ್ನು ಪಡೆದುಕೊಂಡಿದೆ. ರಂಗನತಿಟ್ಟು 188 ಜಾತಿಯ ಸಸ್ಯಗಳು, 225 ಜಾತಿಯ ಪಕ್ಷಿಗಳು, 69 ಜಾತಿಯ ಮೀನುಗಳು, 13 ಜಾತಿಯ ಕಪ್ಪೆಗಳು, 98 ಜಾತಿಯ ಔಷಧೀಯ ಸಸ್ಯಗಳು ಮತ್ತು 30 ಜಾತಿಯ ಚಿಟ್ಟೆಗಳನ್ನು ಹೊಂದಿದೆ.

ಇದು ಸುಮಾರು 20 ಜಾತಿಯ ನೀರಿನ ಪಕ್ಷಿಗಳಿಗೆ ಪ್ರಮುಖ ಸಂತಾನೋತ್ಪತ್ತಿ ತಾಣವಾಗಿದೆ. ಅವುಗಳಲ್ಲಿ 17 ಸ್ಥಳದಲ್ಲೇ ದ್ವೀಪಗಳಲ್ಲಿ ಬೆಳೆಯುವ ಮರಗಳ ಮೇಲೆ ಸಂತಾನೋತ್ಪತ್ತಿ ಮಾಡುತ್ತವೆ. ಇದು ಮಗ್ಗರ್ ಮೊಸಳೆಗಳು (ಕ್ರೊಕೊಡೈಲಸ್ ಪಲುಸ್ಟ್ರಿಸ್), ನೀರುನಾಯಿ (ಲುಟ್ರೋಗೇಲ್ ಪರ್ಸ್ಪಿಸಿಲ್ಲಾಟಾ) ಮತ್ತು ಅಳಿವಿನಂಚಿನಲ್ಲಿರುವ ಮಹಸೀರ್ ಮೀನು (ಟಾರ್ ರಲ್ಲಿರೆಮಾದೇವಿ) ಗಳ ಸಂತತಿಯನ್ನು ಇಲ್ಲಿ ಹೊಂದಿದೆ.

ಕಪ್ಪು-ತಲೆಯ ಐಬಿಸ್ ಪಕ್ಷಿಗಳ ತಾಣ

ಕಪ್ಪು-ತಲೆಯ ಐಬಿಸ್ ಪಕ್ಷಿಗಳ ತಾಣ

ಏಷ್ಯನ್ ಓಪನ್‌ಬಿಲ್, ಸ್ಪಾಟ್- ಬಿಲ್ಡ್ ಪೆಲಿಕಾನ್ ಮತ್ತು ಕಪ್ಪು-ತಲೆಯ ಐಬಿಸ್ ಪಕ್ಷಿಗಳ ವಿಶ್ವದ ಜನಸಂಖ್ಯೆಯ 1 ಪ್ರತಿಶತಕ್ಕಿಂತ ಹೆಚ್ಚಿನದನ್ನು ಇಲ್ಲಿ ಕಾಣಬಹುದಾಗಿದೆ. ಕರ್ನಾಟಕದಲ್ಲಿ ಇನ್ನೂ ಕೆಲವು ರಾಮ್‌ಸಾರ್ ಸೈಟ್‌ಗಳನ್ನು ಘೋಷಿಸುವ ಕೆಲಸ ನಡೆಯುತ್ತಿದೆ. ರಾಜ್ಯ ವೆಟ್ಲ್ಯಾಂಡ್ ಪ್ರಾಧಿಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟಿಂಗ್ ತಾತ್ಕಾಲಿಕ ಮುಂದೂಡಿಕೆಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟಿಂಗ್ ತಾತ್ಕಾಲಿಕ ಮುಂದೂಡಿಕೆ

ಆಗಸ್ಟ್ 15 ರೊಳಗೆ 75 ರಾಮ್ಸರ್ ಸೈಟ್‌ ಘೋಷಿಸುವ ಗುರಿ

ಆಗಸ್ಟ್ 15 ರೊಳಗೆ 75 ರಾಮ್ಸರ್ ಸೈಟ್‌ ಘೋಷಿಸುವ ಗುರಿ

ಕರ್ನಾಟಕದಲ್ಲಿ ಕುಮಟಾದ ಅಘನಾಶಿನಿ, ಬಳ್ಳಾರಿಯ ಅಂಕಸಮುದ್ರ, ಗದಗಿನ ಮಾಗಡಿ ಮತ್ತು ತುಂಗಭದ್ರಾ ಹಿನ್ನೀರು ಸೇರಿವೆ. ನಮಗಿಂತ ಹೆಚ್ಚಾಗಿ ಕೇಂದ್ರ ಜಲಾನಯನ ಪ್ರಾಧಿಕಾರವು ಜಲಮೂಲಗಳನ್ನು ನಿರ್ಣಯಿಸಿರುವುದರಿಂದ ಮತ್ತು ಕರ್ನಾಟಕಕ್ಕೆ ಇದುವರೆಗೆ ಅಂತಹ ಯಾವುದೇ ಸೈಟ್ ಇಲ್ಲದಿರುವುದು ದುರದೃಷ್ಟಕರ ಎಂದು ಪ್ರತಿಕ್ರಿಯಿಸಿದ್ದಾರೆ. ದೇಶದ ಸ್ವಾತಂತ್ರ್ಯದ 75 ನೇ ವರ್ಷಕ್ಕೆ ಅನುಗುಣವಾಗಿ ಆಗಸ್ಟ್ 15 ರೊಳಗೆ 75 ರಾಮ್ಸರ್ ಸೈಟ್‌ಗಳನ್ನು ಘೋಷಿಸುವ ಗುರಿಯನ್ನು ಕೇಂದ್ರ ಹೊಂದಿದೆ.

ಭಾರತದಲ್ಲಿ ಈಗ 42 ರಾಮ್‌ಸರ್ ಸೈಟ್‌ಗಳು

ಭಾರತದಲ್ಲಿ ಈಗ 42 ರಾಮ್‌ಸರ್ ಸೈಟ್‌ಗಳು

ರಂಗನತಿಟ್ಟು ರಾಮ್‌ಸರ್ ಸೈಟ್ ಎಂದು ಘೋಷಿಸುವ ಪ್ರಸ್ತಾಪವನ್ನು ಮಾಜಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯು. ವಿ. ಸಿಂಗ್ ಅವರು ಪ್ರಸ್ತಾಪಿಸಿದ್ದರು. ದೇಶವು ಈಗ 42 ರಾಮ್‌ಸರ್ ಸೈಟ್‌ಗಳನ್ನು ಹೊಂದಿದೆ. ಬುಧವಾರ ಅರಣ್ಯ, ಸ್ಥಳೀಯ ಆಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯು ರಂಗನತಿಟ್ಟು ಜೊತೆಗೆ ಗೋವಾದ ನಂದಾ ಸರೋವರ, ಮಧ್ಯಪ್ರದೇಶದ ಸಿರ್ಪುರ್ ಜೌಗು ಪ್ರದೇಶ ಮತ್ತು ಒಡಿಶಾದ ಸತ್ಕೋಸಿಯಾ ಗಾರ್ಜ್‌ ಅನ್ನು ಪಟ್ಟಿಗೆ ಸೇರಿಸಿದೆ.

ಚಿಲಿಕಾ ಸರೋವರ ಭಾರತದ ಮೊದಲ ರಾಮ್ಸಾರ್‌ ತಾಣ

ಚಿಲಿಕಾ ಸರೋವರ ಭಾರತದ ಮೊದಲ ರಾಮ್ಸಾರ್‌ ತಾಣ

1975ರಲ್ಲಿ ಇರಾನ್ ದೇಶದಲ್ಲಿರುವ ರಾಮ್ಸಾರ್‌ ಎಂಬಲ್ಲಿ ವಿಶ್ವದ ವಿವಿಧ ಚೌಗು ಪ್ರದೇಶಗಳ ಸಂರಕ್ಷಣೆಗೆ ಸಮಾವೇಶ ನಡೆದಿತ್ತು. ಇದನ್ನು ರಾಮ್ಸಾರ್‌ ಸಮಾವೇಶ ಎಂದು ಕರೆಲಾಯಿತು. ಈ ಸಮಾವೇಶ ಚೌಗು ತಾಣಗಳ ಸಂರಕ್ಷಣೆಗೆ ಮಾರ್ಗದರ್ಶನನ ನೀಡಲಿದೆ. ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲಿದೆ. ಈ ಒಪ್ಪಂದಕ್ಕೆ ಭಾರತವು ಸಹಿ ಹಾಕಿದೆ. ಓಡಿಶಾದಲ್ಲಿರುವ ಚಿಲಿಕಾ ಸರೋವರ ಭಾರತದ ಮೊದಲ ರಾಮ್ಸಾರ್‌ ತಾಣವಾಗಿದೆ. ಭಾರತದಲ್ಲಿ ಈವರೆಗೂ ಒಟ್ಟು 42 ರಾಮ್ಸಾರ್‌ ತಾಣಗಳಿವೆ.

Recommended Video

ಮೋಸ್ಟ್ ವಾಂಟೆಡ್ ಉಗ್ರ ಅಲ್ ಜವಾಹಿರಿ ಫಿನೀಶ್: ಕಾರ್ಯಾಚರಣೆ ಎಷ್ಟು ರೋಚಕವಾಗಿತ್ತು ಗೊತ್ತಾ..? | OneIndia Kannada

English summary
The Ministry of Environment, Forests and Climate Change has declared Ranganathittu bird sanctuary in Mandya as a Ramsar site.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X