ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಆರ್ ಎಸ್ ನಲ್ಲಿ ನೀರು ತುಂಬಿದ್ದರೂ ಮಂಡ್ಯದ ನಾಲೆಗಳು ಮಾತ್ರ ಖಾಲಿ ಖಾಲಿ

|
Google Oneindia Kannada News

ಮಂಡ್ಯ, ಆಗಸ್ಟ್ 12: ಭಾರೀ ಮಳೆಯಾಗಿರುವುದರಿಂದ ಕೆಆರ್ ಎಸ್ ಅಣೆಕಟ್ಟೆಗೆ ನೀರೂ ತುಂಬಿಕೊಂಡಿದೆ. 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿದು ಹೋಗುತ್ತಿದೆ. ಹೀಗಿದ್ದರೂ ಮಂಡ್ಯ ಜಿಲ್ಲೆಯ ಕೆರೆ - ಕಟ್ಟೆ ಸೇರಿದಂತೆ ಹಲವೆಡೆ ನಾಲೆಗಳಿಗೆ ಇನ್ನೂ ನೀರು ಸೇರಿಲ್ಲ.

ಮಂಡ್ಯದಲ್ಲಿ ಮುಂದುವರೆದ ರೈತರ ಆತ್ಮಹತ್ಯೆ: 24 ಗಂಟೆಯೊಳಗೆ ಇಬ್ಬರ ಸಾವು
ಕೊಡಗಿನಲ್ಲಿ ವರುಣನ ಆರ್ಭಟದ ಪರಿಣಾಮ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಕೆಆರ್ ಎಸ್ ಅಣೆಕಟ್ಟೆಯಿಂದ ಒಂದೂವರೆ ಲಕ್ಷ ಅಧಿಕ ಕ್ಯೂಸೆಕ್ ನೀರು ಕಳೆದೆರಡು ದಿನಗಳಿಂದ ತಮಿಳುನಾಡಿಗೆ ಹೋಗುತ್ತಿದೆ. ಆದರೂ ಮಂಡ್ಯದ ನಾಲೆಗಳು, ಕೆರೆ ಕಟ್ಟೆಗಳಿಗೆ ನೀರಿಲ್ಲ. ಸದ್ಯ ಮಂಡ್ಯ ವಿಸಿ ನಾಲೆ ಸೇರಿದಂತೆ ಎಲ್ಲ ನಾಲೆಗಳಿಗೆ ನೀರು ಬಿಟ್ಟುಕೊಳ್ಳಬಹುದು. ದುರದೃಷ್ಟವಶಾತ್ ಮದ್ದೂರು, ಮಳವಳ್ಳಿ, ಕೆಎಂ ದೊಡ್ಡಿ ನಾಲೆಯ ಕೊನೆಯ ಭಾಗಗಳಿಗೆ ಇನ್ನೂ ನೀರು ತಲುಪಿಲ್ಲ. ಈಗಲಾದರೂ ನಾಲೆಗಳಿಗೆ ನೀರು ಬಿಟ್ಟು ಕೊಟ್ಟರೆ ಕೊನೆ ಭಾಗಕ್ಕೆ ನೀರು ಕೊಡಲು ಸಾಧ್ಯವಾಗುತ್ತದೆ. ಆದರೆ ಅಂತಹ ಯಾವ ಪ್ರಯತ್ನವೂ ನಡೆಯುತ್ತಿಲ್ಲ.

No water supply for Mandya canals, farmers are getting angry
ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಬರುವ 48 ಕೆರೆಗಳಲ್ಲಿ ಈವರೆಗೂ ನೀರೇ ಇಲ್ಲ. 7-8 ಕೆರೆಗಳಲ್ಲಷ್ಟೇ ಶೇ.10ರಷ್ಟು ನೀರಿದ್ದು ಉಳಿದ 40 ಕೆರೆಗಳೆಲ್ಲ ಖಾಲಿ ಇವೆ ಎಂಬ ಮಾಹಿತಿಯನ್ನು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳೇ ನೀಡಿದ್ದಾರೆ. ಕಾವೇರಿ ನೀರಾವರಿ ನಿಗಮ, ಪಿಡಬ್ಲ್ಯೂಡಿ ಹಾಗೂ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 1200ಕ್ಕೂ ಅಧಿಕ ಕೆರೆಗಳಿವೆ. ಆದರೆ ಅಲ್ಲಿ ಬೆರಳೆಣಿಕೆ ಕೆರೆಗಳಲ್ಲಿ ಮಾತ್ರ ನೀರಿದ್ದು, ಮಿಕ್ಕೆಲ್ಲಾ ಕೆರೆಗಳು ಖಾಲಿಯಾಗಿವೆ. ಈ ಕೆರೆಗಳಿಗೆ ಈವರೆಗೂ ಸಂಪೂರ್ಣವಾಗಿ ನೀರು ತುಂಬಿಸುವ ಕೆಲಸವನ್ನು ಯಾವ ಜನಪ್ರತಿನಿಧಿಯೂ ಮಾಡಿಲ್ಲವೆಂಬುದು ರೈತರ ಆಕ್ರೋಶ.

ಕೆ.ಆರ್.ನಗರದಲ್ಲಿ ನಾಲೆ ಒಡೆದು ಭತ್ತ, ಕಬ್ಬು ನಾಶ
ಮಂಡ್ಯ ಜಿಲ್ಲೆಯಲ್ಲಿ ಮಳೆಯ ಅಭಾವವಿದೆ. ವಾಡಿಕೆಗಿಂತ ಶೇ 14ರಷ್ಟು ಮಳೆಯ ಕೊರತೆ ಇದೆ. ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆಯಾಗಿಲ್ಲ. ಕನಿಷ್ಠ ಪಕ್ಷ ನೀರಾವರಿ ಪ್ರದೇಶದಲ್ಲಾದರೂ ನಾಲೆಗಳ ಮೂಲಕ ನೀರು ಹರಿಸಿ ಬೆಳೆ ಬೆಳೆಯಲು ಅವಕಾಶ ಮಾಡಿ ಕೊಡಬಹುದಾಗಿತ್ತು. ಆದರೆ ಅಂಥ ಪ್ರಯತ್ನವನ್ನು ನಡೆಸಿಲ್ಲ

ಅಣೆಕಟ್ಟು ನಮ್ಮದು, ನೀರು ಅವರಿಗೆ, ಇದು ಎಷ್ಟು ಸರಿ ಎಂಬುದು ಇಲ್ಲಿನ ರೈತರ ವಾದ. ಈ ಹಿಂದೆ ಮಂಡ್ಯದ ನಾಲೆಗಳಿಗೆ ಜುಲೈ 15 ರಿಂದ ಆಗಸ್ಟ್ 2 ರವರೆಗೆ ಪ್ರತಿನಿತ್ಯ ಮೂರು ಸಾವಿರ ಕ್ಯೂಸೆಕ್ ನೀರು ಬಿಡಲು ತಿಂಗಳುಗಟ್ಟಲೆ ಹೋರಾಟ ಮಾಡಬೇಕಾಯಿತು. ಆದರೆ ತಮಿಳುನಾಡಿಗೆ ಈಗಾಗಲೇ 10-12 ಟಿಎಂಸಿ ನೀರನ್ನು ಬಿಡಲಾಯಿದೆ.

No water supply for Mandya canals, farmers are getting angry


ಕಳೆದೊಂದು ವಾರದಿಂದ ರಾಜ್ಯದ ಎಲ್ಲೆಡೆ ಮಳೆಯಾಗುತ್ತಿದೆ. ಆದರೆ ಮಂಡ್ಯದಲ್ಲಿ ಸಮರ್ಪಕವಾಗಿ ಆಗಿಲ್ಲ. ಕೆಆರ್ ಎಸ್ ನಿಂದ ಒಂದು ಲಕ್ಷ ಕ್ಯೂಸೆಕ್ ನೀರು ತಮಿಳುನಾಡಿನತ್ತ ಹರಿದು ಹೋಗುತ್ತಿದ್ದರೂ, ರೈತರ ಅನುಕೂಲಕ್ಕಾಗಿ ನಾಲೆಗಳಿಗೆ, ಕೆರೆ - ಕಟ್ಟೆಗಳಿಗೆ ಹನಿ ನೀರೂ ಸೇರುತ್ತಿಲ್ಲ. ತಮಿಳುನಾಡಿಗೆ ಸಮೃದ್ಧಿಯಾಗಿ ನೀರು ಬಿಡುವ ವೇಳೆಯಲ್ಲಾದರೂ ನಮ್ಮ ನಾಲೆಗಳಿಗೆ ನೀರು ಹರಿಸಿದರೆ ಉಪಕಾರ ಮಾಡಿದಂತಾಗುತ್ತದೆ ಎಂದು ಬೇಸರದಿಂದ ನುಡಿಯುತ್ತಿದ್ದಾರೆ ಅನ್ನದಾತರು.

English summary
Karnataka know suffering Flood. Dams are overflowing. But no water supply for Mandya canals. Farmers are getting angry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X