ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಂಚೆ ಕಟ್ಟಿ ಗದ್ದೆಗಿಳಿದು ಭತ್ತ ನಾಟಿ ಮಾಡಿದ ನಿಖಿಲ್ ಕುಮಾರಸ್ವಾಮಿ

|
Google Oneindia Kannada News

Recommended Video

Lok Sabha Elections 2019 :ಪಂಚೆ ಕಟ್ಟಿ ಗದ್ದೆಗಿಳಿದು ಭತ್ತ ನಾಟಿ ಮಾಡಿದ ನಿಖಿಲ್ ಕುಮಾರಸ್ವಾಮಿ|Oneindia Kannada

ಮಂಡ್ಯ, ಮಾರ್ಚ್‌ 30: ಚುನಾವಣೆಗೆ ಸ್ಪರ್ಧಿಸುವ ಮೂಲಕ ಈಗಾಗಲೇ ಅಪ್ಪನ ಹಾದಿಯನ್ನು ನಿಖಿಲ್ ಕುಮಾರಸ್ವಾಮಿ ಅನುಸರಿಸಿದ್ದಾರೆ, ಆದರೆ ಜನಮಣ್ಣನೆ ಗಳಿಸಲು ಸಹ ಅಪ್ಪ ಅನುಸರಿಸಿದ ರೀತಿಗಳನ್ನೇ ನಿಖಿಲ್ ಅವರು ಅನುಸರಿಸುತ್ತಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕೆಲವೇ ತಿಂಗಳುಗಳ ಹಿಂದೆ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ರೈತರ ಹೊಲವೊಂದರಲ್ಲಿ ಭತ್ತ ನಾಟಿ ಮಾಡಿದ್ದರು, ಇಂದು ನಿಖಿಲ್ ಕುಮಾರಸ್ವಾಮಿ ಅವರು ಸಹ ಗದ್ದೆಗೆ ಇಳಿದು ಭತ್ತ ನಾಟಿ ಮಾಡಿದ್ದಾರೆ.

Nikhil Kumaraswamy planted rice paddy in Mandya

ಮಂಡ್ಯ ಲೋಕಸಭಾ ಚುನಾವಣೆಗೆ ಪ್ರಚಾರ ಕಾರ್ಯದಲ್ಲಿ ತೊಡಗಿರುವ ನಿಖಿಲ್ ಕುಮಾರಸ್ವಾಮಿ ಅವರು, ಮದ್ದೂರು ತಾಲ್ಲೂಕಿನ ಆತನೂರು ಗ್ರಾಮದಲ್ಲಿ ಗದ್ದೆಗೆ ಇಳಿದು ಭತ್ತ ನಾಟಿ ಮಾಡಿ ಗಮನ ಸೆಳೆದರು.

ಭತ್ತದ ನಾಟಿ ಮಾಡಿ ನಿಜಕ್ಕೂ ಮಣ್ಣಿನ ಮಗ ಆಗಲಿದ್ದಾರೆ ಎಚ್ಡಿಕೆ ಭತ್ತದ ನಾಟಿ ಮಾಡಿ ನಿಜಕ್ಕೂ ಮಣ್ಣಿನ ಮಗ ಆಗಲಿದ್ದಾರೆ ಎಚ್ಡಿಕೆ

ಪಕ್ಕಾ ರೈತನ ರೀತಿ, ಪಂಚೆಯನ್ನು ಎತ್ತಿ ಕಟ್ಟಿ, ತಲೆಗೆ ಟವೆಲ್ ಸುತ್ತಿ, ಭತ್ತ ನಾಟಿದ ನಿಖಿಲ್ ಕುಮಾರಸ್ವಾಮಿ, ಕೆಲ ಸಮಯ ರೈತರ ಜೊತೆ ಮಾತನಾಡಿದರು.

Nikhil Kumaraswamy planted rice paddy in Mandya

ಕುಮಾರಸ್ವಾಮಿ ಅವರು ಸಹ ಕೆಲವು ತಿಂಗಳ ಹಿಂದೆ ಮಂಡ್ಯದ ಪಾಂಡವಪುರ ತಾಲ್ಲೂಕಿನಲ್ಲಿ ಭತ್ತ ನಾಟಿ ಮಾಡಿದ್ದರು, ಆ ಕಾರ್ಯಕ್ರಮವು ರಾಜ್ಯದ ಗಮನ ಸೆಳೆದಿತ್ತು.

English summary
Mandya constitunecy JDS candidate Nikhil Kumaraswamy today planted rice paddy in Maddur taluk's village. His father CM Kumaraswamy also planted rice paddy in Mandya, which attracts many people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X