ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಖಿಲ್ ಕುಮಾರಸ್ವಾಮಿ ನಾಮಪತ್ರ ಕಾನೂನು ಬದ್ಧ: ಚುನಾವಣಾಧಿಕಾರಿ

|
Google Oneindia Kannada News

ಮಂಡ್ಯ, ಮಾರ್ಚ್ 28: ನಿಖಿಲ್ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸುವ ವೇಳೆ ನೀಡಬೇಕಿದ್ದ ದಾಖಲೆಯೊಂದನ್ನು ತಡವಾಗಿ ನೀಡಿದ್ದಾರೆ, ಹಾಗಾಗಿ ಅವರ ನಾಮಪತ್ರ ಅಸಿಂಧು ಆಗಲಿದೆ ಎಂಬ ಸುದ್ದಿಗೆ ಜಿಲ್ಲಾ ಚುನಾವಣಾಧಿಕಾರಿ ಮಂಜುಶ್ರೀ ಸ್ಪಷ್ಟನೆ ನೀಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಾರ್ಚ್‌ 27ರಂದು ನಾಮಪತ್ರ ಪರಿಶೀಲನೆಯ ಸಮಯ ನಾಮಪತ್ರದ ಫಾರಂ-26ರ ಕಾಲಂ7, 7a, 8 ಭರ್ತಿ ಮಾಡಲಾಗಿರಲಿಲ್ಲ, ಬೆಳಿಗ್ಗೆ 11 ಗಂಟೆ ವೇಳೆಗೆ ಪೂರ್ತಿ ಭರ್ತಿ ಮಾಡಿದ ನಾಮಪತ್ರವನ್ನು ಸಲ್ಲಿಸಲಾಯಿತು, ನಂತರ ನಾಮಪತ್ರವನ್ನು ಅಂಗೀಕರಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ.

ನಿಖಿಲ್ ನಾಮಪತ್ರ ಅಸಿಂಧುಗೊಳಿಸಲು ಚುನಾವಣಾ ಆಯೋಗಕ್ಕೆ ಮನವಿ ನಿಖಿಲ್ ನಾಮಪತ್ರ ಅಸಿಂಧುಗೊಳಿಸಲು ಚುನಾವಣಾ ಆಯೋಗಕ್ಕೆ ಮನವಿ

ಆದರೆ ನಾಮಪತ್ರ ಅಂಗೀಕಾರವಾದ ನಂತರ ಅಭ್ಯರ್ಥಿ ಸುಮಲತಾ ಅವರ ಪರ ಏಜೆಂಟರು ಆಕ್ಷೇಪಣೆ ಸಲ್ಲಿಸಿದರು, ಅಷ್ಟರಲ್ಲಾಗಲೆ ನಾಮಪತ್ರ ಅಂಗೀಕಾರವಾಗಿತ್ತು ಎಂದು ಮಂಜುಶ್ರೀ ಹೇಳಿದ್ದಾರೆ.

ಜೆಡಿಎಸ್ ಸಂಸದರು ಏನು ವಿದ್ಯಾರ್ಹತೆ ಪಡೆದಿದ್ದಾರೆ?

Nikhil Kumaraswamy nomination is legal: election officer

ನಾಮಪತ್ರ ಅಂಗೀಕಾರಕ್ಕೆ ಮುನ್ನಾ ಎಲ್ಲಾ ಅಭ್ಯರ್ಥಿಗಳಿಗೆ ಚೆಕ್ ಲಿಸ್ಟ್‌ ಕೊಟ್ಟಿದ್ದೆವು ಅದರಂತೆ ಎಲ್ಲ ದಾಖಲೆಗಳನ್ನು ನೀಡಿದ ಬಳಿಕವಷ್ಟೆ ನಾಮಪತ್ರ ಅಂಗೀಕಾರ ಮಾಡಲಾಗಿದೆ, ಈ ಎಲ್ಲ ಪ್ರಕ್ರಿಯೆಗಳು ವೀಕ್ಷಕರ ಸಮ್ಮುಖದಲ್ಲಿಯೇ ನಡೆದಿವೆ ಎಂದು ಅವರು ಹೇಳಿದ್ದಾರೆ.

ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಹೊಂದಿರುವ ಆಸ್ತಿ ಎಷ್ಟು?ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಹೊಂದಿರುವ ಆಸ್ತಿ ಎಷ್ಟು?

ಸುಮಲತಾ ಪರ ಏಜೆಂಟರುಗಳು ನಾಮಪತ್ರ ಅನುಮೋದನೆಯ ನಂತರ ದೂರು ನೀಡಿದ್ದಾರೆ, ಅದನ್ನು ಚುನಾವಣಾ ಆಯೋಗದ ಗಮನಕ್ಕೆ ತರಲಾಗುವುದು, ಯಾವುದೇ ಗೊಂದಲಗಳಿದ್ದಲ್ಲಿ ನ್ಯಾಯಾಲಯಕ್ಕೆ ಹೋಗಬಹುದು ಎಂದು ಅವರು ಹೇಳಿದರು.

English summary
Nikhil Kumaraswamy nomination is legal said Mandya election officer Manjushree. Sumalatha agents alleged that Nikhil Kumaraswamy filled nominations after the time over.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X