ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಖಿಲ್ ಗೆಲುವಿಗಾಗಿ ಶಬರಿಮಲೆ ಯಾತ್ರೆ ಕೈಗೊಂಡ ಅಭಿಮಾನಿಗಳು

|
Google Oneindia Kannada News

Recommended Video

ನಿಖಿಲ್ ಕುಮಾರಸ್ವಾಮಿ ಗೆಲುವಿಗೆ ಶಬರಿಮಲೈ ಯಾತ್ರೆ ಹೊರಟ ಬೆಂಬಲಿಗರು

ಮಂಡ್ಯ, ಮೇ 16: ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲುವು ಸಾಧಿಸಲಿ ಎಂದು ಅಭಿಮಾನಿಗಳ ಗುಂಪೊಂದು ಶಬರಿಮಲೆ ಯಾತ್ರೆ ಕೈಗೊಂಡಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಮಂಡ್ಯದ ಸುಮಾರು 35 ಜೆಡಿಎಸ್ ಕಾರ್ಯಕರ್ತರು ಮಾಲೆಧಾರಿಗಳಾಗಿ ಶಬರಿಮಲೆ ಯಾತ್ರೆಯನ್ನು ಕೈಗೊಂಡಿದ್ದಾರೆ. ತಾಲೂಕಿನ ಇಂಡುವಾಳು ಗ್ರಾಮದ ರಾಮ ಮಂದಿರದಲ್ಲಿ ಇರುಮುಡಿ ಕಟ್ಟಿಕೊಂಡು ಶಬರಿ ಮಲೆ ಯಾತ್ರೆ ಆರಂಭಿಸಿದ್ದಾರೆ.

ಚುನಾವಣೆ ಗೆಲುವಿನ ಬಗ್ಗೆ ಅತಿಯಾದ ಆತ್ಮವಿಶ್ವಾಸವಿಲ್ಲ: ಸುಮಲತಾ ಚುನಾವಣೆ ಗೆಲುವಿನ ಬಗ್ಗೆ ಅತಿಯಾದ ಆತ್ಮವಿಶ್ವಾಸವಿಲ್ಲ: ಸುಮಲತಾ

ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಗೆಲ್ಲಬೇಕೆಂದು ಹರಕೆ ಹೊತ್ತು ಇವರು ಶಬರಿಮಲೆಗೆ ಅಯ್ಯಪ್ಪನ ದರ್ಶನಕ್ಕೆ ಹೊರಟಿದ್ದಾರೆ. ನಿಖಿಲ್ ಗೆದ್ದಬಳಿಕ ಮತ್ತೊಮ್ಮೆ ಶಬರಿಮಲೆಗೆ ಹೋಗುವುದಾಗಿ ಇವರು ಹೇಳಿದ್ದಾರೆ.

Nikhil Kumaraswamy followers going to Sabarimala to pray for Nikhil

ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಇನ್ನು ಆರು ದಿನ ಬಾಕಿ ಇದೆ. ದೇಶದ ಗಮನವನ್ನು ಮಂಡ್ಯ ಫಲಿತಾಂಶ ಸೆಳೆದಿದೆ. ಅಭ್ಯರ್ಥಿಗಳಾದ ನಿಖಿಲ್ ಕುಮಾರಸ್ವಾಮಿ, ಸುಮಲತಾ ಅವರುಗಳೇನೋ ಕೂಲ್ ಇದ್ದಂತೆ ಕಾಣುತ್ತಿದ್ದಾರೆ. ಆದರೆ ಅವರ ಬೆಂಬಲಿಗರು ಆತಂಕದಲ್ಲಿದ್ದಾರೆ.

ಮಂಡ್ಯದಲ್ಲಿ ರಾಜಕೀಯದ ದಿಕ್ಕು ಬದಲಿಸುತ್ತಿರುವ ಕೈ-ತೆನೆ ನಾಯಕರ ಕಚ್ಚಾಟಮಂಡ್ಯದಲ್ಲಿ ರಾಜಕೀಯದ ದಿಕ್ಕು ಬದಲಿಸುತ್ತಿರುವ ಕೈ-ತೆನೆ ನಾಯಕರ ಕಚ್ಚಾಟ

ನಿಖಿಲ್ ಕುಮಾರಸ್ವಾಮಿ, ಕುಮಾರಸ್ವಾಮಿ, ದೇವೇಗೌಡ ಅವರುಗಳು ಸಹ ಹಲವು ಪೂಜೆ, ಹೋಮ, ದೇವಸ್ಥಾನಗಳ ಭೇಟಿ ನಡೆಸಿದ್ದಾರೆ. ಸುಮಲತಾ ಅವರ ಬೆಂಬಲಿಗರೂ ಕೆಲವರು ದೇವರ ಪೂಜೆ ನಡೆಸಿದ್ದಾರೆ. ಆದರೆ ಸುಮತಾ ಅವರು ಯಾವುದೇ ಹೋಮ, ಹವನ, ವಿಶೇಷ ಪೂಜೆಗಳನ್ನು ಮಾಡಿಸಿದ ವರದಿ ಆಗಿಲ್ಲ.

ಮಂಡ್ಯ ಚುನಾವಣೆ: ಐತಿಹಾಸಿಕ ದೇವಾಲಯದಲ್ಲಿ ಹೊರಬಿದ್ದ ಹೂವಿನ ಭವಿಷ್ಯ ಮಂಡ್ಯ ಚುನಾವಣೆ: ಐತಿಹಾಸಿಕ ದೇವಾಲಯದಲ್ಲಿ ಹೊರಬಿದ್ದ ಹೂವಿನ ಭವಿಷ್ಯ

ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ್ತು ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ನಡುವೆ ನಿಕಟ ಪೈಪೋಟಿ ನಡೆದಿತ್ತು, ಏಪ್ರಿಲ್ 18 ಕ್ಕೆ ಮತದಾನ ಮುಗಿದಿದ್ದು, ಮೇ 23 ರಂದು ಫಲಿತಾಂಶ ಹೊರಬೀಳಲಿದೆ.

English summary
Mandya lok sabha candidate Nikhil Kumaraswamy's followers going to Sabarimala to pray for Nikhil's win in election. Mandya election results will out on May 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X