ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ ರಾಜಕೀಯಕ್ಕೆ ಹೊಸ ಜೋಡೆತ್ತುಗಳ ಆಗಮನ!

|
Google Oneindia Kannada News

ಮಂಡ್ಯ, ನವೆಂಬರ್ 23 : 'ಜೋಡೆತ್ತು' 2019ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಮಂಡ್ಯದಲ್ಲಿ ಹೆಚ್ಚು ಭಾರಿ ಕೇಳಿಬಂದಿದ್ದ ಹೆಸರು. ಈಗ ಕೆ. ಆರ್. ಪೇಟೆ ಉಪ ಚುನಾವಣೆಯಲ್ಲಿಯೂ ಜೋಡೆತ್ತು ಎಂಬ ಪದ ಬಳಕೆಗೆ ಬಂದಿದೆ.

15 ಕ್ಷೇತ್ರಗಳ ಉಪ ಚುನಾವಣೆ ಪೈಕಿ ಮಂಡ್ಯದ ಕೆ. ಆರ್. ಪೇಟೆ ಕ್ಷೇತ್ರವೂ ರಾಜ್ಯದ ಗಮನ ಸೆಳೆದಿದೆ. ಬಿಜೆಪಿಯಿಂದ ನಾರಾಯಣ ಗೌಡ ಕಣದಲ್ಲಿದ್ದಾರೆ. ಬಿಜೆಪಿ ನಾಯಕರು ಬಿರುಸಿನಿಂದ ಪ್ರಚಾರವನ್ನು ಮಾಡುತ್ತಿದ್ದಾರೆ.

ಮಿನಿ ಸಮರದಲ್ಲಿ ಯಾರ ಋಣ ತೀರಿಸುತ್ತಾರೋ ಮಂಡ್ಯ ಗೌಡ್ತಿ? ಮಿನಿ ಸಮರದಲ್ಲಿ ಯಾರ ಋಣ ತೀರಿಸುತ್ತಾರೋ ಮಂಡ್ಯ ಗೌಡ್ತಿ?

ಶನಿವಾರ ಕೆ. ಆರ್. ಪೇಟೆ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತಯಾಚನೆ ಮಾಡಿದರು. ನಾರಾಯಣ ಗೌಡರ ಪರವಾಗಿ ಪ್ರಚಾರ ಮಾಡುವ ಸಂದರ್ಭದಲ್ಲಿ ಅವರು ಮಂಡ್ಯ ರಾಜಕೀಯಕ್ಕೆ ಹೊಸ ಜೋಡೆತ್ತುಗಳನ್ನು ಪರಿಚಯಿಸಿದರು.

ನಾರಾಯಣ ಗೌಡ ಬಿಚ್ಚಿಟ್ಟರು ಹತ್ಯೆಗೆ ಸುಪಾರಿ ಕೊಟ್ಟ ಸುದ್ದಿ ನಾರಾಯಣ ಗೌಡ ಬಿಚ್ಚಿಟ್ಟರು ಹತ್ಯೆಗೆ ಸುಪಾರಿ ಕೊಟ್ಟ ಸುದ್ದಿ

ಡಿಸೆಂಬರ್ 5ರಂದು ಕೆ. ಆರ್. ಪೇಟೆ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ನಾರಾಯಣ ಗೌಡ, ಕಾಂಗ್ರೆಸ್‌ನಿಂದ ಕೆ. ಬಿ. ಚಂದ್ರಶೇಖರ್, ಜೆಡಿಎಸ್‌ನಿಂದ ದೇವರಾಜ್ ಬಿ. ಎಲ್. ಅಭ್ಯರ್ಥಿಗಳಾಗಿದ್ದಾರೆ. ಡಿಸೆಂಬರ್ 9ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಉಪ ಚುನಾವಣೆ; ಸಿದ್ದರಾಮಯ್ಯಗೆ ಬಿಜೆಪಿ ಚಾಲೆಂಜ್! ಉಪ ಚುನಾವಣೆ; ಸಿದ್ದರಾಮಯ್ಯಗೆ ಬಿಜೆಪಿ ಚಾಲೆಂಜ್!

ಮಂಡ್ಯಕ್ಕೆ ಹೊಸ ಜೋಡೆತ್ತುಗಳು

ಮಂಡ್ಯಕ್ಕೆ ಹೊಸ ಜೋಡೆತ್ತುಗಳು

ಶನಿವಾರ ಕೆ. ಆರ್. ಪೇಟೆಯಲ್ಲಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, "ನಾರಾಯಣ ಗೌಡ ಮತ್ತು ವಿಜಯೇಂದ್ರ ಜೋಡೆತ್ತುಗಳು. ಈ ಜೋಡೆತ್ತುಗಳ ನೇತೃತ್ವದಲ್ಲಿ ಕ್ಷೇತ್ರ ಅಭಿವೃದ್ಧಿಯಾಗಲಿದೆ. ಕೆ. ಆರ್. ಪೇಟೆಯ ಜನರು ಬೆಂಬಲ ನೀಡುವ ಮೂಲಕ ಜೋಡೆತ್ತುಗಳ ಕೈ ಬಲಪಡಿಸಿ" ಎಂದು ಕರೆ ನೀಡಿದರು.

ಅಧಿಕಾರ ತ್ಯಾಗ ಮಾಡಿದರು

ಅಧಿಕಾರ ತ್ಯಾಗ ಮಾಡಿದರು

"ಕೆ. ಆರ್. ಪೇಟೆ ಒಂದು ಪುಣ್ಯ ಭೂಮಿ. ಯಡಿಯೂರಪ್ಪಗೆ ಜನ್ಮಕೊಟ್ಟ ಪುಣ್ಯಭೂಮಿ. ರಾಜ್ಯದ ಸಮರ್ಥ ನಾಯಕನನ್ನು, ರಾಜ್ಯವನ್ನು ದೇಶದಲ್ಲೇ ಮಾದರಿ ಮಾಡಲು ಪಣತೊಟ್ಟಿರುವ ಬಸವಣ್ಣ ಅನುಯಾಯಿ ಯಡಿಯೂರಪ್ಪರನ್ನು ಕೊಟ್ಟ ನೆಲ. ನಾರಾಯಣ ಗೌಡರು ಇದೇ ನೆಲದಿಂದ ನಾಡಿನ ಸ್ವಾಭಿಮಾನಕ್ಕಾಗಿ ಅಧಿಕಾರವನ್ನು ತ್ಯಾಗ ಮಾಡಿದರು" ಎಂದು ಕಟೀಲ್ ಹೇಳಿದರು.

ರಾಮರಾಜ್ಯ ಮಾಡಲು ರಾಜೀನಾಮೆ

ರಾಮರಾಜ್ಯ ಮಾಡಲು ರಾಜೀನಾಮೆ

"ನಾರಾಯಣ ಗೌಡರು ಹಣ, ಅಧಿಕಾರಕ್ಕಾಗಿ ರಾಜೀನಾಮೆ ಕೊಟ್ಟಿಲ್ಲ. ಅವರದ್ದೇ ಸರ್ಕಾರ ರಾಜ್ಯದಲ್ಲಿ ಇದ್ದಾಗ ರಾಜೀನಾಮೆ ಕೊಟ್ಟಿದ್ದಾರೆ. ಕೆ. ಆರ್. ಪೇಟೆಯನ್ನು ರಾಮರಾಜ್ಯ ಮಾಡಲು ರಾಜೀನಾಮೆ ನೀಡಿದ್ದಾರೆ. ನಾರಾಯಣ ಗೌಡರು ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತಾರೆ" ಎಂದು ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸ್ವಾಭಿಮಾನದ ಉಳಿವಿಗೆ ಮತ ಕೊಡಿ

ಸ್ವಾಭಿಮಾನದ ಉಳಿವಿಗೆ ಮತ ಕೊಡಿ

"ಯಡಿಯೂರಪ್ಪ ಕೇಳಿದ್ದನ್ನು ಕೊಡುವ ಕಾಮಧೇನು. ಅವರು ಅಧಿಕಾರದಲ್ಲಿ ಮುಂದುವರೆಯಲು ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿ. ನಿಮ್ಮ ಪುಣ್ಯ ಭೂಮಿಯನ್ನು ಸ್ವಾಭಿಮಾನದ ಉಳಿವಿಗಾಗಿ ಬಿಜೆಪಿಗೆ ಮತನೀಡಿ. ಗೂಂಡಾಗಿರಿ ರಾಜಕೀಯ ಅಂತ್ಯವಾಗಲು ಪಕ್ಷವನ್ನು ಬೆಂಬಲಿಸಿ" ಎಂದು ನಳಿನ್ ಕುಮಾರ್ ಕಟೀಲ್ ಕರೆ ನೀಡಿದರು.

English summary
Karnataka BJP president Nalin Kumar Kateel said that B.Y. Vijayendra and Naraya Gowda jodettu for state politics. Naraya Gowda BJP candidate for K.R.Pete by election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X