ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆ. ಆರ್. ಪೇಟೆಯ ಕೋವಿಡ್ ಕೇರ್ ಸೆಂಟರ್‌ನಲ್ಲಿ ಗಾನಸುಧೆ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಮೇ 20; ಕೊರೊನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಲ್ಲಿ ಮನೋಬಲ ತುಂಬುವ ಸಲುವಾಗಿ ಗಾನ ಸುಧೆಯನ್ನು ಕೆ. ಆರ್. ಪೇಟೆ ತಾಲೂಕಿನ ಶೆಟ್ಟನಾಯಕನಕೊಪ್ಪಲು ಗ್ರಾಮದ ಕಿತ್ತೂರರಾಣಿ ಚೆನ್ನಮ್ಮ ವಸತಿಶಾಲೆಯಲ್ಲಿ ಸ್ಥಾಪಿಸಿರುವ ಕೋವಿಡ್ ಕೇರ್ ಸೆಂಟರ್ ಹರಿಸಲಾಯಿತು.

ಸುಮಾರು 200ಕ್ಕೂ ಹೆಚ್ಚು ಸೋಂಕಿತರು ಇಲ್ಲಿದ್ದಾರೆ. ಮಂಡ್ಯದ ರಾಗರಂಜನಿ ಸಂಗೀತ ಕಲಾತಂಡವು ನಡೆಸಿಕೊಟ್ಟ ಸುಗಮ ಸಂಗೀತದ ಸುಮಧುರ ಹಾಡಿಗೆ ಜನರು ತಲೆದೂಗಿ ಖುಷಿಪಟ್ಟರಲ್ಲದೆ, ತಮ್ಮ ನೋವುಗಳನ್ನು ಮರೆತು ಸಂಭ್ರಮಿಸಿದರು.

ಕೋವಿಡ್ ಸೋಂಕಿತರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಡಿ. ಕೆ. ಸುರೇಶ್ ಕೋವಿಡ್ ಸೋಂಕಿತರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಡಿ. ಕೆ. ಸುರೇಶ್

ಈ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡರು ಸೋಂಕಿತರ ಮಾನಸಿಕ ನೆಮ್ಮದಿ ಹಾಗೂ ಆರೋಗ್ಯ ಸಂವರ್ಧನೆಗಾಗಿ ಆಯೋಜಿಸಿದ್ದರು. ಇದರಲ್ಲಿ ಪಾಲ್ಗೊಂಡಿದ್ದ ಸಬ್ ಇನ್ಸ್‍ಪೆಕ್ಟರ್ ಬ್ಯಾಟರಾಯಗೌಡ ಅವರು 'ಒಳಿತು ಮಾಡು ಮನುಸ ನೀನು ಇರೋದು ಮೂರು ದಿವಸ' ಎಂಬ ಹಾಡು ಹಾಡಿ ರಂಜಿಸಿದರು.

ಕೋವಿಡ್ ಕೇಂದ್ರಗಳ ಸೋಂಕಿತರ ಸಮಸ್ಯೆ ಆಲಿಸಿದ ಮಂಡ್ಯ ಡಿಸಿಕೋವಿಡ್ ಕೇಂದ್ರಗಳ ಸೋಂಕಿತರ ಸಮಸ್ಯೆ ಆಲಿಸಿದ ಮಂಡ್ಯ ಡಿಸಿ

COVID Care Center

ಈ ಸಂದರ್ಭ ಮಾತನಾಡಿದ ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, "ಸಚಿವ ನಾರಾಯಣಗೌಡರ ನಿರ್ದೇಶನದಂತೆ ಕೋವಿಡ್ ಕೇರ್ ಸೆಂಟರ್‌ನಲ್ಲಿಸುಗಮ ಸಂಗೀತ ಕಾರ್ಯಕ್ರವನ್ನು ಆಯೋಜಿಸಲಾಗಿದೆ. ಇಲ್ಲಿನ ಸಂಭ್ರಮ ಸಂತೋಷವನ್ನು ನೋಡಿದರೆ ಕಾರ್ಯಕ್ರಮದ ಆಯೋಜನೆಗೆ ಮಹತ್ವ ಬಂದಿದೆ ಎಂದು ಗೊತ್ತಾಗುತ್ತಿದೆ. ಆರೋಗ್ಯ ಸಂವರ್ಧನಾ ಕೇಂದ್ರದಲ್ಲಿ ಸಂತೋಷ ಮನೆ ಮಾಡಿದೆ. ಸೋಂಕಿತರ ಮೊಗದಲ್ಲಿ ಮಂದಹಾಸವು ಮೂಡಿದೆ" ಎಂದರು.

ಮಂಡ್ಯ; ಮೇಲುಕೋಟೆ ಚಲುವನಾರಾಯಣನಿಗೆ ಕಿರೀಟ ಧಾರಣೆ ಮಂಡ್ಯ; ಮೇಲುಕೋಟೆ ಚಲುವನಾರಾಯಣನಿಗೆ ಕಿರೀಟ ಧಾರಣೆ

ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ಪಾಸಿಟಿವ್ ಬಂದ ವ್ಯಕ್ತಿಗಳನ್ನು ಕೋವಿಡ್ ಕೇರ್ ಸೆಂಟರ್‌ನಲ್ಲಿಟ್ಟು ವಿಶೇಷ ಕಾಳಜಿಯಿಂದ ಊಟ, ವಸತಿ ಹಾಗೂ ವೈದ್ಯಕೀಯ ಆರೈಕೆಯನ್ನು ನೀಡಿ ಗುಣಪಡಿಸಲಾಗುತ್ತಿದೆ.

ಕೋವಿಡ್ ಸೋಂಕಿತರು ಭಯಭೀತಿಯಿಂದ ಮುಕ್ತರಾಗಿ ಆತ್ಮವಿಶ್ವಾಸದಿಂದ ಚಿಕಿತ್ಸೆಯನ್ನು ಪಡೆದುಕೊಂಡು ಗುಣಮುಖರಾಗಿ ಸಂತೋಷದಿಂದ ಮನೆಗೆ ತೆರಳಬೇಕು. ವೈಯಕ್ತಿಕ ಸ್ವಚ್ಛತೆಗೆ ಒತ್ತು ನೀಡಿ ಮಾಸ್ಕ್ ಧರಿಸಿಕೊಂಡು, ಸಾಮಾಜಿಕ ಅಂತರ ಕಾಪಾಡಿಕೊಂಡು, ಕೈಗಳನ್ನು ಸ್ಯಾನಿಟೈಸ್ ಮಾಡಿಕೊಂಡು ಆರೋಗ್ಯವಂತರಾಗಿರಬೇಕು.

Recommended Video

Pakistan ಬಿಟ್ಟು England ಪೌರತ್ವಕ್ಕೆ ಪರದಾಟ! | Oneindia Kannada

ಪಾಂಡವಪುರ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ತಹಶೀಲ್ದಾರ್ ಎಂ.ಶಿವಮೂರ್ತಿ, ಸರ್ಕಲ್ ಇನ್ಸ್‍ಪೆಕ್ಟರ್ ಎಂ.ಕೆ.ದೀಪಕ್, ಸಬ್‍ಇನ್ಸ್‍ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ ಮತ್ತು ಸಚಿವರ ಆಪ್ತಸಹಾಯಕರಾದ ದಯಾನಂದ ಮೊದಲಾದವರು ಇದ್ದರು.

English summary
Live musical performances organized at Krishnarajpet Covid care center. More than 200 Covid patients recovering in this center.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X