ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾರದಲ್ಲಿ ಮೂರು ದಿನ ಮಂಡ್ಯ ಜನರಿಗೆ ಮೀಸಲು: ಸುಮಲತಾ

|
Google Oneindia Kannada News

Recommended Video

ವಾರದಲ್ಲಿ ಮೂರು ದಿನ ಮಂಡ್ಯದಲ್ಲಿ ಇರ್ತೀನಿ ಎಂದ್ರು ಸುಮಲತಾ | Oneindia Kannada

ಮಂಡ್ಯ, ಜೂನ್ 11: ನಾನು ಯಾರನ್ನೂ ಟೀಕಿಸುವುದಿಲ್ಲ. ಜನರು ನನ್ನ ಮೇಲೆ ನಂಬಿಕೆಯಿಟ್ಟು ನನ್ನನ್ನು ಸಂಸದೆಯನ್ನಾಗಿ ಆಯ್ಕೆ ಮಾಡಿದ್ದಾರೆ. ವಾರದಲ್ಲಿ ಮೂರು ದಿನವನ್ನು ನಾನು ಮಂಡ್ಯ ಜನರ ಸಮಸ್ಯೆ ಆಲಿಸಲು ಮೀಸಲಿಡುತ್ತೇನೆ ಎಂದು ಸುಮಲತಾ ತಿಳಿಸಿದ್ದಾರೆ.

ಮಂಡ್ಯದ ಕೀಲಾರದಲ್ಲಿ ನೂತನ ಸಂಸದೆ ಸುಮಲತಾ ಪ್ರತಿಕ್ರಿಯಿಸಿ, 'ಈಗಾಗಲೇ ಮಂಡ್ಯದಲ್ಲಿ ಮನೆ ಮಾಡಿ ಆಗಿದೆ. ಸದ್ಯದಲ್ಲೇ ಅಲ್ಲಿ ವಾಸ್ತವ್ಯ ಮಾಡುತ್ತೇನೆ. ನಾನೇ ಎಲ್ಲಾ ಕ್ಷೇತ್ರಕ್ಕೂ ಸಂಚಾರ ಮಾಡುತ್ತೇನೆ. ವಾರದಲ್ಲಿ ಮೂರು ದಿನ ಜನರ ಸಮಸ್ಯೆಗಾಗಿ ಮೀಸಲಿಡುತ್ತೇನೆ. ಸದ್ಯ ಈಗ ಅಧಿವೇಶನ ಆರಂಭವಾಗಲಿದೆ, ಅದಕ್ಕಾಗಿ ಸ್ವಲ್ಪ ಕಷ್ಟ ಆಗುತ್ತಿದೆ. ಕಚೇರಿ ಮತ್ತು ಸಿಬ್ಬಂದಿ ವ್ಯವಸ್ಥೆ ಆದ ಬಳಿಕ ಕಚೇರಿ ತೆರೆದು ಜನರ ಸಮಸ್ಯೆ ಆಲಿಸುತ್ತೇನೆ' ಎಂದು ಹೇಳಿದರು.

ಸುಮಲತಾರನ್ನು ನೋಡಿ ಜೆಡಿಎಸ್ ಸಾಕಷ್ಟು ಕಲಿಯಬೇಕು : ಡಿವಿಎಸ್ಸುಮಲತಾರನ್ನು ನೋಡಿ ಜೆಡಿಎಸ್ ಸಾಕಷ್ಟು ಕಲಿಯಬೇಕು : ಡಿವಿಎಸ್

ಜೆಡಿಎಸ್ ಶಾಸಕನ ಜೊತೆಗೆ ವೇದಿಕೆ ಹಂಚಿಕೊಂಡ ವಿಚಾರಕ್ಕೆ ಪ್ರತಿಕ್ರಿಯಿಸಿ, 'ಜಿಲ್ಲೆಯ ಅಭಿವೃದ್ಧಿಗಾಗಿ ನಾನು ಯಾವಾಗಲೂ ಹೊಂದಾಣಿಕೆಗೆ ಸಿದ್ಧ ಎಂದರು. ಚುನಾವಣೆ ಸಂದರ್ಭದಲ್ಲೂ ನಾನು ಯಾರ ಬಗ್ಗೆಯೂ ಕೀಳಾಗಿ ಮಾತನಾಡಿಲ್ಲ. ಈಗಲೂ ನಾನು ಯಾರ ಬಗ್ಗೆಯೂ ಮಾತನಾಡಲ್ಲ. ನನಗೆ ಜನ ಜವಾಬ್ದಾರಿ ಕೊಟ್ಟಿದ್ದಾರೆ. ಕೆಲಸ ಮಾಡಿಕೊಂಡು ಹೋಗುತ್ತೇನೆ' ಎಂದರು.

MP Sumalatha reserve three days in a week reserve for mandya people

ಬಿಜೆಪಿ ಕಚೇರಿಯಲ್ಲಿ ಸುಮಲತಾ, ಮುಂದಿನ ನಡೆಯ ಬಗ್ಗೆ ಹೇಳಿದ್ದೇನು? ಬಿಜೆಪಿ ಕಚೇರಿಯಲ್ಲಿ ಸುಮಲತಾ, ಮುಂದಿನ ನಡೆಯ ಬಗ್ಗೆ ಹೇಳಿದ್ದೇನು?

ಬರ, ನೀರಿನ ಸಮಸ್ಯೆ ಹೆಚ್ಚಿದೆ. ಅದನ್ನು ಬಗೆಹರಿಸುವತ್ತ ಗಮನಹರಿಸಬೇಕು. ರಾಜಕಾರಣ ಮಾಡೋ ಸಮಯ ಇದಲ್ಲ. ಟೀಕೆಗಳಿಗೆ ಉತ್ತರ ಕೊಡುತ್ತಾ ಸಮಯ ಹರಣ ಮಾಡುವುದಿಲ್ಲ ಎಂದೂ ಹೇಳಿದರು.

English summary
MP Sumalatha said that, she will reserve three days in a week to listen to the problems of mandya people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X