ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ: 21ರಿಂದ 40 ವಯಸ್ಸಿನವರಲ್ಲೇ ಶೇ.50ರಷ್ಟು ಸೋಂಕು ಪತ್ತೆ

By Coovercolly Indresh
|
Google Oneindia Kannada News

ಮಂಡ್ಯ, ಜೂನ್ 8: ಸಕ್ಕರೆ ನಾಡು ಮಂಡ್ಯದಲ್ಲಿ ಎರಡನೇ ಅಲೆಯ ಕೋವಿಡ್-19 ದೇಶದ ಇತರ ಭಾಗಗಳಿಗಿಂತ ಭಿನ್ನವಾಗಿ ಹರಡಿದೆ. ದೇಶದ ಇತರ ಭಾಗಗಳಲ್ಲಿ ವಯಸ್ಸಾದವರು ಸೋಂಕಿಗೆ ಅತೀ ಹೆಚ್ಚು ತುತ್ತಾಗಿದ್ದರೆ ಜಿಲ್ಲೆಯ ಅಂಕಿ ಅಂಶ ವ್ಯತಿರಿಕ್ತವಾಗಿದೆ.

ಮಂಡ್ಯ ಜಿಲ್ಲಾಡಳಿತದ ಮಾಹಿತಿಯ ಪ್ರಕಾರ, 21-40 ವಯಸ್ಸಿನವರು ಜಿಲ್ಲೆಯ ಒಟ್ಟು ಕೋವಿಡ್- 19 ಪ್ರಕರಣಗಳಲ್ಲಿ ಶೇ. 50ರಷ್ಟು ಭಾಗವನ್ನು ಹೊಂದಿದ್ದಾರೆ. ಮಂಡ್ಯದ ಅಂಕಿ- ಅಂಶಗಳು ರಾಷ್ಟ್ರೀಯ ಸರಾಸರಿ ಅಂಕಿ ಅಂಶಗಳಿಗೆ ಸಂಪೂರ್ಣ ತದ್ವಿರುದ್ಧವಾಗಿವೆ. ಕಳೆದ ಏಪ್ರಿಲ್‌ನಲ್ಲಿ ಕೋವಿಡ್ ಕುರಿತ ಮಾಹಿತಿ ನೀಡುವಾಗ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮಹಾನಿರ್ದೇಶಕ ಬಲರಾಮ್ ಭಾರ್ಗವ, ಅವರು ಎರಡನೇ ಅಲೆಯಲ್ಲಿ ಯುವಕರಿಗಿಂತ ವಯಸ್ಸಾದವರೇ ಹೆಚ್ಚು ಸೋಂಕಿಗೆ ತುತ್ತಾಗುತ್ತಾರೆ ಎಂದು ಹೇಳಿದ್ದರು.

ರೋಗಿಗಳ ಸರಾಸರಿ ವಯಸ್ಸು 48.9 ವರ್ಷ

ರೋಗಿಗಳ ಸರಾಸರಿ ವಯಸ್ಸು 48.9 ವರ್ಷ

ಎರಡನೇ ಅಲೆಯಲ್ಲಿ ಸೋಂಕಿಗೆ ತುತ್ತಾಗುವ ಕೋವಿಡ್- 19 ರೋಗಿಗಳ ಸರಾಸರಿ ವಯಸ್ಸು 48.9 ವರ್ಷಗಳು, ಮೊದಲ ಅಲೆಯಲ್ಲಿ ಇದು 50.4 ವರ್ಷಗಳಾಗಿತ್ತು. ಮಂಡ್ಯದಲ್ಲಿ, ಸಾಂಕ್ರಾಮಿಕ ರೋಗದ ಎರಡನೇ ಅಲೆಯಲ್ಲಿ ಯುವಕರಲ್ಲೆ ಸೋಂಕು ಉಲ್ಬಣಗೊಂಡಿರುವುದು ಕಂಡು ಬಂದಿದೆ.

ಅಂಕಿ- ಅಂಶಗಳ ಪ್ರಕಾರ, 2020ರ ಏಪ್ರಿಲ್ 7ರಿಂದ 2021ರ ಮಾ.31ರವರೆಗೆ ಸುಮಾರು ಒಂದು ವರ್ಷ ಜಿಲ್ಲೆಯಲ್ಲಿ 20,035 ಪ್ರಕರಣಗಳು ವರದಿಯಾಗಿವೆ. ಆದರೆ ಸುಮಾರು ಎರಡು ತಿಂಗಳಲ್ಲಿ ಏಪ್ರಿಲ್ 1ರಿಂದ ಮೇ 24 ರವರೆಗೆ ಜಿಲ್ಲೆಯಲ್ಲಿ 36,341 ಪ್ರಕರಣಗಳು ದಾಖಲಾಗಿವೆ. ಇದು 181ರಷ್ಟು ಹೆಚ್ಚಾಗಿದೆ.

16,541 ಜನರು 21-40 ವಯಸ್ಸಿನವರಾಗಿದ್ದಾರೆ

16,541 ಜನರು 21-40 ವಯಸ್ಸಿನವರಾಗಿದ್ದಾರೆ

ಇದೇ ಅವಧಿಯಲ್ಲಿ ಮಂಡ್ಯ ಜಿಲ್ಲೆಯಲ್ಲಿ 258 ಸಾವುಗಳು ದಾಖಲಾಗಿವೆ. 36,341 ಪ್ರಕರಣಗಳಲ್ಲಿ, ಶೇ. 45.5 ಅಥವಾ 16,541 ಜನರು 21-40 ವಯಸ್ಸಿನವರಾಗಿದ್ದಾರೆ. ಒದಗಿಸಲಾದ ಮಾಹಿತಿಯ ಪ್ರಕಾರ, ಧನಾತ್ಮಕ ಪರೀಕ್ಷೆ ನಡೆಸಿದವರಲ್ಲಿ 8,012 ಮಂದಿ 21-30 ವಯಸ್ಸಿನವರಾಗಿದ್ದರೆ, 8,529 ಮಂದಿ 31-40 ವಯಸ್ಸಿನವರಾಗಿದ್ದಾರೆ. 0-10 ವಯೋಮಾನದವರಲ್ಲಿ 1,219 ಪ್ರಕರಣಗಳು ಮತ್ತು 11-20 ವಯೋಮಾನದವರಲ್ಲಿ 3,308 ಪ್ರಕರಣಗಳು ದಾಖಲಾಗಿವೆ. ಇದಕ್ಕೆ ವ್ಯತಿರಿಕ್ತವಾಗಿ, 50+ ವಯೋಮಾನದವರಲ್ಲಿ 8,382 ಪ್ರಕರಣಗಳು ಅಥವಾ ಶೇಕಡಾ 23ರಷ್ಟು ಪ್ರಕರಣಗಳು ದಾಖಲಾಗಿವೆ.

ಜಿಲ್ಲಾಡಳಿತ ಯಾವುದೇ ಅಧ್ಯಯನ ನಡೆಸಿಲ್ಲ

ಜಿಲ್ಲಾಡಳಿತ ಯಾವುದೇ ಅಧ್ಯಯನ ನಡೆಸಿಲ್ಲ

ಈ ಕೋವಿಡ್- 19 ಅಲೆಯಲ್ಲಿ ಯುವಕರು ಹೊರಗಡೆ ಇರುವುದೇ ಪ್ರಮುಖ ಕಾರಣ ಎಂದು ಮಂಡ್ಯ ಜಿಲ್ಲೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಳೆದ ಬಾರಿಯ ಕೋವಿಡ್ ಸಮಯದಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಲಾಗಿತ್ತು. ಆದರೆ ಎರಡನೇ ಅಲೆಯಲ್ಲಿ ಯುವಕರು ಕೆಲಸ ಮಾಡುವುದನ್ನು ಮುಂದುವರೆಸಿದ್ದಾರೆ. ಆದ ಕಾರಣ ಅವರೇ ಹೆಚ್ಚು ಸೋಂಕಿಗೆ ಒಳಗಾಗಿದ್ದಾರೆ ಎಂದು ಅವರು ಹೇಳಿದರು. ಮಂಡ್ಯ ಜಿಲ್ಲೆಯ ಯುವಕರು ಉದ್ಯೋಗಕ್ಕಾಗಿ ಬೆಂಗಳೂರಿಗೆ ವಲಸೆ ಬರುತ್ತಿರುವುದರಿಂದ ಹೆಚ್ಚು ಸೋಂಕು ಪ್ರಕರಣಗಳೂ ವರದಿ ಆಗಿವೆ ಎಂದಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಮಂಡ್ಯ ಜಿಲ್ಲಾಧಿಕಾರಿ ಎಸ್.ಅಶ್ವಥಿ, ""18- 45 ವಯೋಮಾನದವರಿಗೆ ಇತ್ತೀಚೆಗಷ್ಟೆ ಲಸಿಕೆ ನೀಡಲು ಅರಂಭಿಸಲಾಯಿತು. ಬಹುಶಃ ಇದರಿಂದಾಗಿಯೇ ಈ ವಯಸ್ಸಿನವರಲ್ಲಿ ಸೋಂಕು ಹೆಚ್ಚಾಗಿ ಕಂಡು ಬಂದಿರಬಹುದು ಎಂದರಲ್ಲದೆ, ಈ ಕುರಿತು ಜಿಲ್ಲಾಡಳಿತ ಯಾವುದೇ ಅಧ್ಯಯನ ನಡೆಸಿಲ್ಲ ಇದು ಬರೇ ಊಹೆಯಾಗಿದೆ'' ಎಂದರು.

ನಿರ್ಬಂಧಗಳೊಂದಿಗೆ ಈಗಾಗಲೇ ಲಾಕ್‌ಡೌನ್ ಇದೆ

ನಿರ್ಬಂಧಗಳೊಂದಿಗೆ ಈಗಾಗಲೇ ಲಾಕ್‌ಡೌನ್ ಇದೆ

ಸೋಂಕು ಪ್ರಕರಣಗಳ ಹೆಚ್ಚಳವನ್ನು ತಡೆಗಟ್ಟಲು, ಜನರು ಮನೆಯಲ್ಲಿಯೇ ಉಳಿಯುವಂತೆ ಮಾಡಲು ಜಿಲ್ಲಾಡಳಿತವು ಈಗ ಜಿಲ್ಲೆಯಲ್ಲಿ ಕಟ್ಟುನಿಟ್ಟಾದ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಿದೆ. ವಾರದ ನಾಲ್ಕು ದಿನಗಳಲ್ಲಿ (ನಿರಂತರವಲ್ಲದೆ) ಸಂಪೂರ್ಣ ಲಾಕ್‌ಡೌನ್ ಇರುತ್ತದೆ. ಈ ಸಮಯದಲ್ಲಿ ಕೇವಲ ವೈದ್ಯಕೀಯ ಅಂಗಡಿಗಳನ್ನು ಮಾತ್ರ ತೆರೆಯಲು ಅನುಮತಿಸಲಾಗಿದೆ. ರಾಜ್ಯ ಮಟ್ಟದಲ್ಲಿ, ನಿರ್ಬಂಧಗಳೊಂದಿಗೆ ಈಗಾಗಲೇ ಲಾಕ್‌ಡೌನ್ ಇದೆ' ಎಂದು ಅವರು ಹೇಳಿದರು. ಆದರೆ ಅದನ್ನು ಹೊರತುಪಡಿಸಿ, ಅಗತ್ಯವಿದ್ದರೆ ಹೆಚ್ಚುವರಿ ನಿರ್ಬಂಧಗಳನ್ನು ಜಾರಿಗೊಳಿಸಲು ಸರ್ಕಾರವು ಜಿಲ್ಲಾಧಿಕಾರಿಗಳಿಗೆ ಅವಕಾಶ ನೀಡಿದೆ ಎಂದೂ ತಿಳಿಸಿದರು.

ಏಪ್ರಿಲ್ ಮತ್ತು ಮಾರ್ಚ್ ನಡುವೆ 20,000 ಪ್ರಕರಣ

ಏಪ್ರಿಲ್ ಮತ್ತು ಮಾರ್ಚ್ ನಡುವೆ 20,000 ಪ್ರಕರಣ

ಈ ಕುರಿತು ಮಾತನಾಡಿದ ಮತ್ತೊಬ್ಬ ಅಧಿಕಾರಿಯು, ಎರಡನೇ ಅಲೆಯ ತೀವ್ರತೆಗೆ ಕಳೆದ ಏಪ್ರಿಲ್ ಮತ್ತು ಮಾರ್ಚ್ ನಡುವೆ 20,000 ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದರು. ಏಪ್ರಿಲ್ ಮತ್ತು ಮೇ ನಡುವೆ, ಈಗಾಗಲೇ 36,000 ಪ್ರಕರಣಗಳು ದಾಖಲಾಗಿವೆ. ನಾವು ಕಿರಿಯ ವಯಸ್ಸಿನವರಲ್ಲಿ ಸಾಕಷ್ಟು ಸಕಾರಾತ್ಮಕ ಪ್ರಕರಣಗಳನ್ನು ಪಡೆಯುತ್ತಿದ್ದೇವೆ. ಜನರು ಅನಗತ್ಯವಾಗಿ ಹೊರಬರದಂತೆ ನಾವು ಈಗ ಸಂಪೂರ್ಣ ಲಾಕ್‌ಡೌನ್ ಮಾಡಿದ್ದೇವೆ ಎಂದರು.

11-30 ವಯೋಮಾನದವರಲ್ಲಿ 11,320 ಪ್ರಕರಣ

11-30 ವಯೋಮಾನದವರಲ್ಲಿ 11,320 ಪ್ರಕರಣ

ಕಳೆದ ಎರಡು ತಿಂಗಳಲ್ಲಿ 11-30 ವಯೋಮಾನದವರಲ್ಲಿ 11,320 ಪ್ರಕರಣಗಳು ದಾಖಲಾಗಿವೆ. ಇದಕ್ಕೆ ವ್ಯತಿರಿಕ್ತವಾಗಿ, ಏಪ್ರಿಲ್ 2020 ಮತ್ತು 31 ಮಾರ್ಚ್ 2021 ರ ನಡುವಿನ ಮೊದಲ ಅಲೆಯಲ್ಲಿ ಇದೇ ವಯಸ್ಸಿನವರಲ್ಲಿ ಕೇವಲ 5,701 ಪ್ರಕರಣಗಳನ್ನು ಕಂಡಿದೆ. ಅಲ್ಲದೆ, 61-70 ವಯಸ್ಸಿನವರು ಜಿಲ್ಲೆಯ ಪ್ರಸ್ತುತ ಸೋಂಕು ಹೆಚ್ಚಳದಲ್ಲಿ ಅತಿ ಹೆಚ್ಚು ಸಾವುಗಳನ್ನು (84) ಕಂಡಿದ್ದರೆ, 41-50 ವಯಸ್ಸಿನವರಲ್ಲಿ ಸಾವಿನ ಪ್ರಮಾಣವು ತೀವ್ರವಾಗಿ ಏರಿದೆ. ಮೊದಲ ಅಲೆಯಲ್ಲಿ ಸುಮಾರು ಒಂದು ವರ್ಷದವರೆಗೆ 41-50 ವಯೋಮಾನದವರಲ್ಲಿ ಕೇವಲ 14 ಜನರು ಸಾವನ್ನಪ್ಪಿದ್ದಾರೆ. ಆದರೆ ಕಳೆದ ಎರಡು ತಿಂಗಳಲ್ಲಿ, ಈ ವಯೋಮಾನದವರಲ್ಲಿ 50 ಜನರು ಮೃತಪಟ್ಟಿದ್ದಾರೆ.

ಮನೆ-ಮನೆ ಸಮೀಕ್ಷೆ ಪ್ರಾರಂಭ

ಮನೆ-ಮನೆ ಸಮೀಕ್ಷೆ ಪ್ರಾರಂಭ

ಕೋವಿಡ್ ಸೋಂಕು ಪ್ರಕರಣಗಳನ್ನು ಮೊದಲೇ ಪತ್ತೆ ಹಚ್ಚಲು ಜಿಲ್ಲಾಡಳಿತವು ಮನೆ-ಮನೆ ಸಮೀಕ್ಷೆಯನ್ನು ಪ್ರಾರಂಭಿಸಿದೆ. ಅನೇಕ ರೋಗಿಗಳನ್ನು ಆಸ್ಪತ್ರೆಗೆ ಕರೆತಂದಾಗ, ಅವರ ಆಮ್ಲಜನಕದ ಮಟ್ಟವು ಈಗಾಗಲೇ ಶೇ. 40 ಅಥವಾ 50ಕ್ಕೆ ಕುಸಿದಿರುತ್ತದೆ. ಹೀಗಾಗಿ ಅನೇಕ ಸಂದರ್ಭಗಳಲ್ಲಿ, ಅವರು ಆಸ್ಪತ್ರೆಗೆ ತಲುಪಿದ 12 ಗಂಟೆಗಳಲ್ಲಿ ಸಾವು ಸಂಭವಿಸುತ್ತದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ಹೇಳಿದರು.

Recommended Video

ಯಾವ Vaccine ಬೆಸ್ಟ್ ಅನ್ನೋದು ಗೊತ್ತಾಗಿದೆ! | Oneindia Kannada

English summary
According to data from Mandya District Administration, 50% Of Covid-19 cases reported between 21-40 year old age group In Mandya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X