ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಂಬೈತೆ ಕೆಆರ್ ಎಸ್: ರುದ್ರರಮಣೀಯ ವಿಡಿಯೋ ಐತೆ ನೋಡಿ!

|
Google Oneindia Kannada News

ಮಂಡ್ಯ, ಜುಲೈ 16: ಐದು ವರ್ಷದ ಬಳಿಕ ಕೃಷ್ಣರಾಜ ಸಾಗರ ಅಣೆಕಟ್ಟು ಭರ್ತಿಯಾಗಿದೆ. ಕರ್ನಾಟಕದಲ್ಲಿ ಯಾರ ಬಾಯಲ್ಲಿ ಕೇಳಿ, ಈಗ ಅದೇ ಮಾತು!

ವಾಟ್ಸಾಪ್ ಗಳಲ್ಲೂ ಅದೇ ವಿಡಿಯೋ. ಕಳೆದ ವರ್ಷ ಈ ಸಮಯದಲ್ಲಿ ಕೆಆರ್ ಎಸ್ ಜಲಾಶಯದಲ್ಲಿ 78 ಅಡಿ ಇದ್ದ ನೀರಿನ ಮಟ್ಟ ಈ ವರ್ಷ ಜುಲೈ ಮಧ್ಯದಲ್ಲೇ 123.27(ನೆಲಮಟ್ಟದಿಂದ) ಅಡಿ ತಲುಪಿದೆ.

ಕೆಆರ್‌ಎಸ್‌ನಿಂದ 50 ಸಾವಿರ ಕ್ಯುಸೆಕ್ ನೀರು ಹೊರಕ್ಕೆ, ಪ್ರವಾಹ ಭೀತಿಕೆಆರ್‌ಎಸ್‌ನಿಂದ 50 ಸಾವಿರ ಕ್ಯುಸೆಕ್ ನೀರು ಹೊರಕ್ಕೆ, ಪ್ರವಾಹ ಭೀತಿ

ಜಲಾಶಯದಿಂದ 50 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಕೆಆರ್ ಎಸ್ ನ ಗರಿಷ್ಠ ಮಟ್ಟ 124.80 ಅಡಿ. ಕಾವೇರಿ ನದಿ ಪಾತ್ರದಲ್ಲಿ ಸಾಕಷ್ಟು ಮಳೆಯಾದ ಪರಿಣಾಮ ಜಲಾಶಯಕ್ಕೆ ಒಳಹರಿವು ಹೆಚ್ಚಿದ್ದು, ಇದೀಗ ಈ ಭಾಗದ ಜನರು ಪ್ರವಾಹ ಭೀತಿ ಎದುರಿಸುವಂತಾಗಿದೆ. ಮಂಡ್ಯ ಜಿಲ್ಲೆಯ ಕೆಆರ್ ಎಸ್ ಜಲಾಶಯದ ಸುಂದರ, ಮನಮೋಹ, ರುದ್ರರಮಣೀಯ ವಿಡಿಯೋಗಳು ಟ್ವಿಟ್ಟರ್ ನಲ್ಲಿ ಹರಿದಾಡುತ್ತಿವೆ.

ಆಹಾ, ಮನಮೋಹಕ!

ಕೆಆರ್ ಎಸ್, ಕಬಿನಿ, ಹಾರಂಗಿ ಮತ್ತು ಹೇಮಾವತಿ(ಗೊರೂರು) ಎಲ್ಲಾ ಜಲಾಶಯಗಳೂ ಭರ್ತಿಯಾಗಿವೆ. ಕರ್ನಾಟಕಕ್ಕೆ ಈ ಬಾರಿ ಸಮೃದ್ಧಿಯ ಮಳೆಯಾಗಿದೆ ಎಂದು ಮನಮೋಹಕ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ ಶ್ರೀವತ್ಸ.

ರುದ್ರ ರಮಣೀಯ!

ಕೆಆರ್ ಎಸ್ ತುಂಬಿ ತುಳುಕುತ್ತಿದೆ. ಎಲ್ಲೆಲ್ಲೂ ದಟ್ಟ ಮಂಜನ್ನು ಹಬ್ಬಿಸಿರುವ ಕೆಆರ್ ಎಸ್ ನ ವಿಡಿಯೋ ಎಷ್ಟು ರುದ್ರವೋ, ಅಷ್ಟೇ ರಮಣೀಯವೂ ಹೌದು!

ಜುಲೈನಲ್ಲಿಯೇ ಕರ್ನಾಟಕದ ಜಲಾಶಯಗಳು ಭರ್ತಿಜುಲೈನಲ್ಲಿಯೇ ಕರ್ನಾಟಕದ ಜಲಾಶಯಗಳು ಭರ್ತಿ

ತುಂಬಿಹಳು ಕಾವೇರಿ!

124.80 ಗರಿಷ್ಠ ಮಟ್ಟ(ನೆಲಮಟ್ಟದಿಂದ)ದ ಕೆಆರ್ ಎಸ್ ಜಲಾಶಯ ತುಂಬಿ ತುಳುಕುತ್ತಿದ್ದು, ಆ ಸುಂದರ ದೃಶ್ಯ ಕಣ್ತುಂಬಿಕೊಳ್ಳಿ...

ಎಷ್ಟು ಚೆಂದ!

ಕೆಆರ್ ಎಸ್ ಗೇಟ್ ನಿಂದ ಹೀಗೆ ನೀರು ಹರಿದು ಹೋಗುವುದನ್ನು ನೋಡುವುದಕ್ಕೆ ಎಷ್ಟು ಚೆಂದ ಎಂದು ಚೆಂದದ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ ವಿನಯ್ ನಾರಾಯಣ ಸ್ವಾಮಿ.

ಅಮೋಘ ದೃಶ್ಯ

ಈ ಅಮೋಘ ದೃಶ್ಯ ನೋಡಲು ಕಣ್ಣು ಸಾಲದು. ಕೆಆರ್ ಎಸ್ ತುಂಬಿದೆ. ತಾನು ಹರಿಯುವಲ್ಲೆಲ್ಲ ಜೀವ ನೀಡುವ ಜೀವನದಿ ಈ ಕಾವೇರಿ ಎಂದಿದ್ದಾರೆ ಕವಿತಾ ರೆಡ್ಡಿ.

ಮದುಂಬಿ ಹರಿಯುತಿಹಳು ಹೇಮಾವತಿ

ಸುಂದರ ಪಶ್ಚಿಮ ಘಟ್ಟದಲ್ಲಿ ಹುಟ್ಟುವ ಹೇಮಾವತಿ ನದಿ 245 ಕಿ.ಮಿ.ಉದ್ದವಿದೆ. ಇದು ಕೆಆರ್ ಎಸ್ ಸಮೀಪ ಕಾವೇರಿ ನದಿಯನ್ನು ಸೇರುತ್ತದೆ. ಈ ವರ್ಷ ಉತ್ತಮ ಮಳೆಯಿಂದಾಗಿ ಹೇಮಾವತಿ ಮೈದುಂಬಿ ಹರಿಯುತ್ತಿದ್ದಾಳೆ. ಕೊರುರು ಡ್ಯಾಮ್ ನಿಂದ ಹೇಮಾವತಿ ಹರಿಯುತ್ತಿರುವ ಅತ್ಯದ್ಭುತ ದೃಶ್ಯ ಇಲ್ಲಿದೆ ಎಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ ಕಿರಣ್ ಕುಮಾರ್ ಎಸ್.

English summary
After heavy rain in Cauvery vally, water level of KRS(Krishnaraja Sagar) reservoir reaches 123 feet. 50 cusecs of water from KRS released so far. Here are beautiful videos of KRS on social media
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X