ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಯಾವತಿ ರಾಷ್ಟ್ರ ರಾಜಕಾರಣದಲ್ಲಿ ಕಿಂಗ್ ಮೇಕರ್:ಶಾಸಕ ಎಂ. ಮಹೇಶ್

|
Google Oneindia Kannada News

ಮಂಡ್ಯ, ಏಪ್ರಿಲ್ 01: ರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಹಾಗೂ ಕಾಂಗ್ರೆಸ್ ನೇತೃತ್ವದ ಯುಪಿಎ ಸೆಡ್ಡು ಹೊಡೆದು ಬಿಎಸ್ಪಿ ಮೂರನೇ ದೊಡ್ಡ ಶಕ್ತಿಯಾಗಿ ನಿಲ್ಲಲಿದ್ದು, ಮಾಯಾವತಿ ಅವರು ಕಿಂಗ್ ಮೇಕರ್ ಅಥವಾ ಕಿಂಗ್ ಆಗಲಿದ್ದಾರೆ ಎಂದು ಶಾಸಕ ಎಂ. ಮಹೇಶ್ ಭವಿಷ್ಯ ನುಡಿದಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಂಡ್ಯದಲ್ಲಿ ದೋಸ್ತಿ ಅಭ್ಯರ್ಥಿ ನಿಖಿಲ್, ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್, ಪ್ರಜಾಕೀಯ ಪಕ್ಷದ ದಿವಾಕರ್ ಗೌಡ ಅವರು ಒಂದೆಡೆ ಪ್ರಚಾರ ಆರಂಭಿಸಿದ್ದರೆ, ಇದೀಗ ಬಿಎಸ್ಪಿ ಕೂಡ ತನ್ನ ಅಭ್ಯರ್ಥಿ ಪರ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದು, ಈ ಸಂಬಂಧ ರಾಜ್ಯದ ಏಕೈಕ ಬಿಎಸ್ಪಿ ಶಾಸಕ ಎನ್.ಮಹೇಶ್ ಅವರು ಪ್ರಚಾರ ನಡೆಸುತ್ತಿದ್ದಾರೆ.

 ಗೆಲುವಿಗಾಗಿ ದೇವೇಗೌಡರ ಮುಂದಿನ ರಣತಂತ್ರ ಏನಿರಬಹುದು? ಗೆಲುವಿಗಾಗಿ ದೇವೇಗೌಡರ ಮುಂದಿನ ರಣತಂತ್ರ ಏನಿರಬಹುದು?

ಈ ವೇಳೆ ಮಾತನಾಡಿದ ಅವರು, ಉತ್ತರ ಭಾರತದ ಕೆಲವು ಕಡೆಗಳಲ್ಲಿ ಬಿಎಸ್ಪಿ ಕೆಲ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ. ಲೋಕದಳ, ಆಂಧ್ರ, ತೆಲಂಗಾಣದಲ್ಲಿ ಜನಸೇವಾ ಪಕ್ಷ ಸೇರಿದಂತೆ ನಮ್ಮದೇ ಆದ ನಾಲ್ಕೈದು ಪಕ್ಷಗಳೊಂದಿಗೆ ಒಗ್ಗೂಡಿ ಚುನಾವಣೆ ಎದುರಿಸುತ್ತೇವೆ. ಇದರೊಂದಿಗೆ ರಾಷ್ಟ್ರದಲ್ಲಿ ಬಿಎಸ್ಪಿ ಸುಮಾರು 65 ರಿಂದ 70 ಸ್ಥಾನಗಳನ್ನು ಗಳಿಸುವ ಮೂಲಕ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.

MLA N. Mahesh is campaigning for the BSP

ಚುನಾವಣೆಯಲ್ಲಿ200 ರಿಂದ 300 ಸೀಟು ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿ ನಾವಿಲ್ಲ. ರಾಜ್ಯದಲ್ಲಿ ಕಳೆದ ವಿಧಾನ ಸಭಾ ಚುನಾವಣೆ ವೇಳೆ ಜೆಡಿಎಸ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿವೆ. ಆಗ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಿದ್ದೆವು. ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾರಣ ನಾವು ಆ ಪಕ್ಷದ ಸಂಬಂಧ ಕಡಿದುಕೊಂಡಿವೆ. ನಾವೂ ಸಹ ರಾಜ್ಯದ 28 ಕ್ಷೇತ್ರಗಳಲ್ಲೂ ಸ್ವತಂತ್ರವಾಗಿ ಸ್ಪರ್ಧೆ ಮಾಡುವುದಾಗಿ ಹೇಳಿದರು.

 ಉತ್ತರ ಕನ್ನಡ ಚುನಾವಣಾ ಕಣ : ಅನಂತ್ v/s ಆನಂದ್ ಅಸ್ನೋಟಿಕರ್ ಉತ್ತರ ಕನ್ನಡ ಚುನಾವಣಾ ಕಣ : ಅನಂತ್ v/s ಆನಂದ್ ಅಸ್ನೋಟಿಕರ್

ರಾಜ್ಯದಲ್ಲೂ ಚಾಮರಾಜನಗರ, ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ಬೀದರ್, ಗುಲ್ಬರ್ಗಾ, ಚಿಕ್ಕೋಡಿ ಕ್ಷೇತ್ರಗಳಲ್ಲಿ ಮುಂದಿದ್ದೇವೆ. ಒಂದು ಅಥವಾ ಎರಡು ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರಲ್ಲದೆ, ಮಂಡ್ಯ ಲೋಕಸಭಾ ಚುನಾವಣೆಯನ್ನು ಇಡೀ ರಾಷ್ಟ್ರವೇ ತಿರುಗಿ ನೋಡುತ್ತಿದೆ. ನಾಮಪತ್ರ ಗೊಂದಲ-ಗೋಜಲು ಸಹ ವ್ಯಕ್ತವಾಗುತ್ತಿದೆ. ಈ ಎಲ್ಲದರ ನಡುವೆ ಬಿಎಸ್ಪಿ ಮತದಾರರನ್ನು ಸೆಳೆಯಲು ತಂತ್ರ ರೂಪಿಸುತ್ತಿರುವುದಾಗಿಯೂ ಮಹೇಶ್ ಹೇಳಿದರು.

English summary
MLA N. Mahesh is campaigning for the BSP. On this time he said that our candidates will win in one or two constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X