ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ: ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಶಾಸಕ

|
Google Oneindia Kannada News

ಮಂಡ್ಯ, ಅಕ್ಟೋಬರ್, 20: ರೈತರ ಬೆಳೆಗೆ ಅಗತ್ಯ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಸರ್ಕಾರಿ ಇಂಜಿನಿಯರ್ ಮೇಲೆ ಕೆ.ಆರ್.ಪೇಟೆ ಶಾಸಕ ನಾರಾಯಣ ಗೌಡ ಅವರ ಕೈ ಹಿಡಿದು ಎಳೆದಾಡಿದ ಘಟನೆ ಬುಧವಾ ನಡೆದಿದೆ.

ತಾಲ್ಲೂಕಿನ ಮಂದಗೆರೆ ಬಲದಂಡೆ ಹಾಗೂ ಎಡದಂಡೆ ಕಾಲುವೆಗಳಿಗೆ ನೀರು ಹರಿಸಲು ಒತ್ತಾಯಿಸಿ ಹೇಮಾವತಿ ಜಲಾಶಯ ಯೋಜನೆಯ ಕಚೇರಿ ಮುಂದೆ ನಡದ ರೈತರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

MLA man handels officer over stopping of water

ಶಾಂತಿಯುತವಾಗಿ ಮಾತನಾಡುತ್ತಿದ್ದ ಶಾಸಕರು ಇದ್ದಕ್ಕಿದಂತೆ ಅವೇಶಭರಿತರಾಗಿ ಎಕ್ಸಿಕ್ಯೂಟಿವ್ ಇಂಜಿನಿಯರ್ ನಾರಾಯಣ ಅವರ ಕೈ ಹಿಡಿದು ಕಚೇರಿಯಲ್ಲೇ ಎಳೆದಾಡಿದ್ದಾರೆ, ಆವೇಶಭರಿತರಾಗಿ ಬೈಯತ್ತಾ ಹಲ್ಲೆಗೆ ಮುಂದಾಗಿದ್ದಾರೆ.

ತಾಲ್ಲೂಕಿನಲ್ಲಿ ಜಾನುವರುಗಳಿಗೂ ಕುಡಿಯುವ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೇಮಗಿರಿ ಮತ್ತು ಮಂದಗಿರಿ ನಾಲೆಗೆ ಕೂಡಲೇ ನೀರು ಹರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ನಾರಯಣಗೌಡ ಅವರು "ಸಭೆಗೆ ಬರುತ್ತೇನೆ ಎಂದುಮುಖ್ಯ ಎಂಜಿನಿಯರ್ ಹೇಳಿದ್ದಕ್ಕಾಗಿ ರೈತರು ಸಭೆ ಸೇರಿದ್ದಾರೆ. ಆದರೆ, ಸಭೆಗೆ ಗೈರುಹಾಜರಾಗಿದ್ದಾರೆ. ಕೇಳಿದರೆ ಉಡಾಫೆಯಿಂದ ವರ್ತಿಸುತ್ತಾರೆ. ರೈತರ ಸಮಸ್ಯೆ ಬಗ್ಗೆ ನಿರ್ಲಕ್ಷ್ಯವಹಿಸುವ ನಿಮ್ಮಂತಹ ಅಧಿಕಾರಿಗಳು ನನ್ನ ತಾಲ್ಲೂಕಿಗೆ ಬೇಡ' ಎಂದ ಕಿಡಿಕಾರಿದರು.

English summary
Narayanagowda from KR Pete assembly segment lost his temper and allegedly tried to attack a senior engineer attached to the Hemavathy reservoir in KR Pete on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X