ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇಲುಕೋಟೆಯ ಚೆಲುವರಾಯಸ್ವಾಮಿ ಕೃಷ್ಣರಾಜಮುಡಿ ಬ್ರಹ್ಮೋತ್ಸವ ಸಂಪನ್ನ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮೇಲುಕೋಟೆ, ಜುಲೈ 28: ಆಷಾಢ ಮಾಸದ ಕೃಷ್ಣ ಪಕ್ಷದ ಏಕಾದಶಿಯ ರೋಹಿಣಿ ನಕ್ಷತ್ರದ ಶುಭ ದಿನವಾದ ಭಾನುವಾರ ಮಂಡ್ಯ ಜಿಲ್ಲೆಯ ಮೇಲುಕೋಟೆ ಚೆಲುವನಾರಾಯಣಸ್ವಾಮಿಗೆ ಪವಿತ್ರ ಕಲ್ಯಾಣಿಯಲ್ಲಿ ತೀರ್ಥ ಸ್ನಾನ ನೆರವೇರುವುದರೊಂದಿಗೆ ಕೃಷ್ಣರಾಜಮುಡಿ ಬ್ರಹ್ಮೋತ್ಸವ ಸಂಪನ್ನಗೊಂಡಿತು.

ಶ್ರೀದೇವಿ- ಭೂದೇವಿಯರೊಂದಿಗೆ ವಜ್ರಖಚಿತ ಕೃಷ್ಣರಾಜಮುಡಿ ಕಿರೀಟ ಧರಿಸಿದ ಚೆಲುವನಾರಾಯಣಸ್ವಾಮಿಯ ಉತ್ಸವ ನೆರವೇರಿದ ನಂತರ ಪವಿತ್ರ ಕಲ್ಯಾಣಿಯ ಗಜೇಂದ್ರ ವರದನ ಸನ್ನಿಧಿಯ ಮುಂಭಾಗ ಸ್ನಪನ ಶೆಲ್ವರಿಗೆ ವೇದಘೋಷದೊಂದಿಗೆ ಅಭಿಷೇಕ ನೆರವೇರಿಸಲಾಯಿತು. ಆ ನಂತರ ಕಲ್ಯಾಣಿಯಲ್ಲಿ ತೀರ್ಥಸ್ನಾನ, ಪೂಜಾ ಕೈಂಕರ್ಯ ಮುಕ್ತಾಯಗೊಳಿಸಲಾಯಿತು.

ಮೇಲುಕೋಟೆ ಚಲುವನ ದರ್ಶನ ಪಡೆದ ಯಡಿಯೂರಪ್ಪಮೇಲುಕೋಟೆ ಚಲುವನ ದರ್ಶನ ಪಡೆದ ಯಡಿಯೂರಪ್ಪ

ವರಾಹ ಕುಂಡದಲ್ಲಿ ತೀರ್ಥಸ್ನಾನ: ಪ್ರತಿ ಬ್ರಹ್ಮೋತ್ಸವದ ತೀರ್ಥಸ್ನಾನವೂ ಕಲ್ಯಾಣಿಯ ಉತ್ತರ ಭಾಗದಲ್ಲಿ ನೆರವೇರುತ್ತಿತ್ತು. ಇನ್ಫೋಸಿಸ್ ಫೌಂಡೇಷನ್ ನಿಂದ ಕಲ್ಯಾಣಿಯ ಜೀರ್ಣೋದ್ಧಾರ ಮಾಡುತ್ತಿದ್ದು, ಈ ಭಾಗದಲ್ಲಿ ನೀರು ಕಡಿಮೆಯಿದ್ದ ಕಾರಣ ಕಲ್ಯಾಣಿಯ ಪೂರ್ವಭಾಗದ ವರಾಹ ಕುಂಡದಲ್ಲಿ ತೀರ್ಥಸ್ನಾನದ ವಿಧಿ- ವಿಧಾನಗಳನ್ನು ನೆರವೇರಿಸಲಾಯಿತು.

Melukote Temple

ಭಾನುವಾರ ಸಂಜೆ ಪರಕಾಲ ಮಠದಲ್ಲಿ ಪಟ್ಟಾಭಿಷೇಕ ಮಹೋತ್ಸವ ನಂತರ ಪಟ್ಟಾಭಿರಾಮ ತಿರುಕ್ಕುಲ ಉತ್ಸವ ನಡೆಯುವುದರೊಂದಿಗೆ ಮಹೋತ್ಸವ ಸಂಪನ್ನಗೊಂಡಿತು. ರಾಜ್ಯವೂ ಸೇರಿದಂತೆ ವಿವಿಧೆಡೆಗಳಿಂದ ಭಕ್ತರು ಆಗಮಿಸಿದ್ದರು.

English summary
Mandya district, Melukote Cheluvaryswmy Krishnarjmudi Brahmarathotsava completed on Sunday. Here is the complete details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X