ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೀರ ಯೋಧ ಗುರು ಅಂತ್ಯಕ್ರಿಯೆ, ಸ್ಥಳ, ವಿಧಿ ವಿಧಾನಗಳ ಮಾಹಿತಿ

|
Google Oneindia Kannada News

Recommended Video

Pulwama : ಮಂಡ್ಯದಲ್ಲಿ ಯೋಧ ಗುರು ಅಂತ್ಯಕ್ರಿಯೆ ಜಾಗ ಬದಲು | Oneindia Kannada

ಮೈಸೂರು, ಫೆಬ್ರವರಿ 16: ಜಮ್ಮು ಮತ್ತು ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ಬಾಂಬ್ ಸ್ಪೋಟದಲ್ಲಿ ಹುತಾತ್ಮರಾದ 42 ಮಂದಿ ಯೋಧರಲ್ಲಿ ಮಂಡ್ಯ ಜಿಲ್ಲೆ ಗುರು ಕೂಡ ಒಬ್ಬರು. ಅವರ ಅಂತ್ಯಕ್ರಿಯೆ ಮಂಡ್ಯ ಜಿಲ್ಲೆಯ ಗೂಡಿಗೆರೆಯಲ್ಲಿ ಇಂದು ಸಂಜೆ 6.10ಕ್ಕೆ ನಡೆಯಲಿದೆ.

ಹುತಾತ್ಮ ಯೋಧ ಗುರು ಅಂತ್ಯಸಂಸ್ಕಾರ ಜಾಗ ಬದಲು ಹುತಾತ್ಮ ಯೋಧ ಗುರು ಅಂತ್ಯಸಂಸ್ಕಾರ ಜಾಗ ಬದಲು

ಅಲ್ಲಿನಕೆ.ಎಂ. ದೊಡ್ಡಿ ಸಮೀಪದ ಮೆಳ್ಳಹಳ್ಳಿ ಬಳಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುಮಾರು 10 ಗುಂಟೆ ಸರ್ಕಾರಿ ಜಾಗದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಪೂರ್ವ-ಪಶ್ಚಿಮಕ್ಕೆ 6 ಅಡಿ, ಉತ್ತರ-ದಕ್ಷಿಣಕ್ಕೆ 9 ಅಡೊ ಅಳತೆಯ ವೇದಿಕೆ ನಿರ್ಮಾಣ ಮಾಡಲಾಗಿದೆ.

ಮಂಡ್ಯ ಯೋಧ ಗುರು ಅಂತ್ಯಕ್ರಿಯೆಯಲ್ಲಿ ನಿರ್ಮಲಾ ಸೀತಾರಾಮನ್ ಭಾಗಿ ಮಂಡ್ಯ ಯೋಧ ಗುರು ಅಂತ್ಯಕ್ರಿಯೆಯಲ್ಲಿ ನಿರ್ಮಲಾ ಸೀತಾರಾಮನ್ ಭಾಗಿ

ಸಿಮೆಂಟ್ ಇಟ್ಟಿಗೆಯಿಂದ ವೇದಿಕೆ ನಿರ್ಮಿಸಲಾಗಿದೆ. ಅದೇ ವೇದಿಕೆಯಲ್ಲಿ ಅಂತ್ಯಕ್ರಿಯೆ ಹಿಂದೂ ಸಂಪ್ರದಾಯದಂತೆ ನೆರವೇರಲಿದೆ. ಹುತಾತ್ಮ ಯೋಧ ಗುರು ಅವರ ಪಾರ್ಥಿವ ಶರೀರಕ್ಕೆ ಸಹೋದರರು ಅಗ್ನಿ ಸ್ಪರ್ಶ ಮಾಡಲಿದ್ದಾರೆ.

Maryred army slodier guru cremation information

ಅಂತ್ಯಕ್ರಿಯೆ ಸ್ಥಳದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಸ್ಥಳದಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಗಣ್ಯರು ಕುಳಿತುಕೊಳ್ಳಲು ಆಸನದ ವ್ಯವಸ್ಥೆಯನ್ನೂ ಕೂಡ ಮಾಡಲಾಗಿದೆ. ಯೋಧ ಗುರು ಅವರ ತಂದೆ, ಪತ್ನಿ, ಚಿಕ್ಕಮ್ಮ ಸೇರಿದಂತೆ ಕುಟುಂಬದ ಸಾಕಷ್ಟು ಮಂದಿ ಅಸ್ವಸ್ಥರಾಗಿದ್ದು, ಷಿಕಿತ್ಸೆ ನೀಡಲಾಗುತ್ತಿದೆ.

English summary
Army slodier Guru who martyred in Pulwama suicide bomb attack, cremation is today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X