ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ; 5 ರೂ. ಡಾಕ್ಟರ್‌ ಶಂಕರೇಗೌಡರಿಗೆ ಹೃದಯಾಘಾತ

|
Google Oneindia Kannada News

ಮಂಡ್ಯ, ಮೇ 24: ಜಿಲ್ಲೆಯಲ್ಲಿ 5 ರೂಪಾಯಿ ಡಾಕ್ಟರ್‌ ಎಂದೇ ಖ್ಯಾತರಾಗಿದ್ದ ಡಾ. ಶಂಕರೇಗೌಡಗೆ ಸೋಮವಾರ ರಾತ್ರಿ ಲಘು ಹೃದಯಾಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಅವರನ್ನು ಚಿಕಿತ್ಸೆಗಾಗಿ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹೃದಯದ ಮೂರು ರಕ್ತನಾಳಗಳಲ್ಲಿ ಬ್ಲಾಕ್‌ ಆಗಿದೆ ಎಂದು ತಿಳಿದುಬಂದಿದೆ. ಶಂಕರೇಗೌಡರ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಒಂದು ವಾರ ಕಳೆದ ಬಳಿಕ ಅವರಿಗೆ ಬೈಪಾಸ್‌ ಸರ್ಜರಿ ಮಾಡುವ ಸಾಧ್ಯತೆಗಳಿವೆ ಎಂದು ಕುಟುಂಬದ ಮೂಲಗಳು ಹೇಳಿವೆ.

 ಮಂಡ್ಯ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಉದ್ಯೋಗವಕಾಶ ಮಂಡ್ಯ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಉದ್ಯೋಗವಕಾಶ

ಜನಸಾಮಾನ್ಯರ ಸೇವೆಗಾಗಿ ತಮ್ಮ ಬದುಕು ಮೀಸಲಿಟ್ಟಿದ್ದ ಶಂಕರೇಗೌಡರು ಕೇವಲ 5 ರೂಪಾಯಿ ಪಡೆದು ಚಿಕಿತ್ಸೆ ನೀಡುತ್ತಿದ್ದರು. ತಮ್ಮ ಸ್ವಂತ ಊರು ಶಿವಳ್ಳಿಯಿಂದ ಬಂದವರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದರು.

ಮಂಡ್ಯ ಮೇಲೆ ಬಿಜೆಪಿ ಕಣ್ಣು; ಆಪರೇಷನ್ ಕಮಲಕ್ಕೆ ಮುಹೂರ್ತ ಫಿಕ್ಸ್?ಮಂಡ್ಯ ಮೇಲೆ ಬಿಜೆಪಿ ಕಣ್ಣು; ಆಪರೇಷನ್ ಕಮಲಕ್ಕೆ ಮುಹೂರ್ತ ಫಿಕ್ಸ್?

ಕೊರೊನಾ ಸಂದರ್ಭಲ್ಲೂ ಕಾಯಕ

ಕೊರೊನಾ ಸಂದರ್ಭಲ್ಲೂ ಕಾಯಕ

ಕೊರೊನಾ ಸಂದರ್ಭದಲ್ಲಿ ಇಡೀ ಜಗತ್ತೇ ನಲುಗಿತ್ತು. ಆಸ್ಪತ್ರೆಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಸಂಕಷ್ಟದ ಸಂದರ್ಭದಲ್ಲಿ ಸಾಮಾನ್ಯ ರೋಗಿಗಳ ಹೈರಾಣಾಗಿದ್ದರು. ಆದರೆ ಆ ಸಂದರ್ಭದಲ್ಲಿ ಶಂಕರೇಗೌಡರು ಕೊರೊನಾವನ್ನು ಲೆಕ್ಕಿಸದೇ ಎಂದಿನಂತೆ ತಮ್ಮ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ದಿನ ನಿತ್ಯ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಿ ಧೈರ್ಯ ತುಂಬುತ್ತಿದ್ದರು.

ಕೈಗೆಟುಕುವ ಬೆಲೆಯಲ್ಲಿ ಔಷಧ

ಕೈಗೆಟುಕುವ ಬೆಲೆಯಲ್ಲಿ ಔಷಧ

ಶಂಕರೇಗೌಡರೂ ಕೇವಲ ಚಿಕಿತ್ಸೆ ನೀಡುವುದಕ್ಕೆ 5 ಪಡೆಯುವುದಲ್ಲ ಹೊರಗಡೆ ಬರೆಯುವ ಔಷಧಿಗಳು ಕೂಡ ದುಬಾರಿಯಿರುತ್ತಿರಲಿಲ್ಲ. ನೂರರಿಂದ ಇನ್ನೂರು ರೂಪಾಯಿಗಳಲ್ಲಿ ಔಷಧಿಗಳು ದೊರೆಯುವಂತೆ ಬರೆದುಕೊಡುತ್ತಿದ್ದರು. ಇವರ ಬಳಿ ಚಿಕಿತ್ಸೆ ತೆಗೆದುಕೊಂಡವರ ರೋಗಗಳು ವಾಸಿಯಾಗುತ್ತಿದ್ದವು. ಪದೇ ಪದೇ ಬರುವ ಅಗತ್ಯವಿಲ್ಲ ಎಂದು ಅವರ ಬಳಿ ಚಿಕಿತ್ಸೆ ಪಡೆದುಕೊಂಡ ಜಿಲ್ಲೆಯ ಸಾಕಷ್ಟು ಮಂದಿ ಹೇಳುತ್ತಾರೆ.

ದಕ್ಷಿಣ ಭಾರತದಲ್ಲಿ ಜನಪ್ರಿಯ ವೈದ್ಯ

ದಕ್ಷಿಣ ಭಾರತದಲ್ಲಿ ಜನಪ್ರಿಯ ವೈದ್ಯ

ಡಾ. ಶಂಕರೇಗೌಡರು ಕೇವಲ ಮಂಡ್ಯಕ್ಕೆ ಮಾತ್ರ ಸೀಮಿತವಾಗಿಲ್ಲ, ಕರ್ನಾಟಕ ಹಾಗೂ ದಕ್ಷಿಣ ಭಾರತದಲ್ಲೇ ಜನಪ್ರಿಯರಾಗಿದ್ದಾರೆ. ದೇಶದ ಹಲವು ಭಾಗಗಳಿಂದ ಇವರ ಬಳಿ ಬಂದು ಚಿಕಿತ್ಸೆ ಪಡೆದುಕೊಂಡು ಹೋಗಿದ್ದಾರೆ. ದಿನನಿತ್ಯ ಸಾವಿರಾರು ಮಂದಿ ಸಾಲುಗಟ್ಟಿ ನಿಂತು ಇವರ ಬಳಿ ಚಿಕಿತ್ಸೆ ಪಡೆದು ಹೋಗುತ್ತಾರೆ. ಶ್ರೀಮಂತ-ಬಡವ ಎನ್ನುವ ಬೇಧವಿರುವುದಿಲ್ಲ, ಎಲ್ಲರನ್ನು ಸಮಾನವಾಗಿ ಕಾಣುವ ಇವರು, ಎಲ್ಲರಿಂದಲೂ ಅದೇ 5 ರೂ ಮೊತ್ತವನ್ನು ಮಾತ್ರ ಸ್ವೀಕರಿಸುತ್ತಾರೆ.

ಹತ್ತಾರು ಎಕರೆ ಜಮೀನನಲ್ಲಿ ವ್ಯವಸಾಯ

ಹತ್ತಾರು ಎಕರೆ ಜಮೀನನಲ್ಲಿ ವ್ಯವಸಾಯ

ಡಾ. ಶಂಕರೇಗೌಡರು ಕೇವಲ ವೈದ್ಯ ವೃತ್ತಿಗೆ ಸೀಮಿತವಾಗಿಲ್ಲ, ಅವರೊಬ್ಬ ಯಶಸ್ವಿ ರೈತನಾಗಿದ್ದಾರೆ. ಸ್ವಗ್ರಾಮ ಮಂಡ್ಯ ತಾಲೂಕಿನ ಶಿವಳ್ಳಿಯಲ್ಲಿ ಹತ್ತಾರು ಎಕರೆ ಜಮೀನನ್ನು ಹೊಂದಿದ್ದು, ಪ್ರತಿವರ್ಷ ಕಬ್ಬು, ಭತ್ತ ಬೆಳೆಯುತ್ತಾರೆ . ಜನರ ಒತ್ತಾಯದ ಮೇರೆಗೆ ಚುನಾವಣೆಗೆ ಸ್ಪರ್ಧಿಸಿದ್ದ ಅವರು ಮಂಡ್ಯ ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷರಾಗಿದ್ದರು.

Recommended Video

IPL ಪ್ಲೇಆಫ್ ಇತಿಹಾಸ ನೋಡಿದ್ರೆ RCB ಈ ಸಲ ಕಪ್‌ ಗೆಲ್ಲೋದು ಡೌಟೇ!!! | #cricket | #IPL2022 | Oneindia Kannda

English summary
Dr. Shankare Gowda who fondly known as five rupees doctor admitted Apolo hospital in mysuru after minor herat attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X