ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯದ ಒಕ್ಕಲಿಗರ ಹಾಸ್ಟೆಲ್ ಇನ್ಮುಂದೆ ಹೈಟೆಕ್ ಕೋವಿಡ್ ಆಸ್ಪತ್ರೆ

|
Google Oneindia Kannada News

ಮಂಡ್ಯ, ಮೇ 22: ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸೋಂಕಿತರನ್ನೆಲ್ಲ ಹೃದಯ ಭಾಗದಲ್ಲಿರುವ ಮಿಮ್ಸ್ ‌ಗೆ ದಾಖಲಿಸಲಾಗುತ್ತಿದ್ದು, ಸದ್ಯ ಅದು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿತಗೊಂಡಿದೆ. ಇದರಿಂದ ಇತರೆ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಮಿಮ್ಸ್ ‌ಗೆ ತೆರಳಲು ಭಯಪಡುತ್ತಿದ್ದಾರೆ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಹೈಟೆಕ್ ಚಿಕಿತ್ಸಾ ಕೇಂದ್ರ ಸ್ಥಾಪನೆಗೆ ಮುಂದಾಗಿದ್ದು, ಹೊರ ವಲಯದಲ್ಲಿರುವ ಉಮ್ಮಡಹಳ್ಳಿ ಗೇಟ್ ಬಳಿ ಒಕ್ಕಲಿಗರ ಸಂಘದ ಕಟ್ಟಡವನ್ನು 160 ಹಾಸಿಗೆಗಳ ಕೋವಿಡ್ ಹೈಟೆಕ್ ಆಸ್ಪತ್ರೆಯನ್ನಾಗಿ ಮಾರ್ಪಡಿಸಲು ಸರ್ವ ಸನ್ನದ್ಧವಾಗಿದ್ದು, ಈ ಸಂಬಂಧ ಯೋಜನೆ ರೂಪಿಸಿದೆ ಎನ್ನಲಾಗಿದೆ.

ಜಿಲ್ಲೆಗೆ ಬರಲಿದ್ದಾರೆ ಸಾವಿರಾರು ಮಂದಿ; ಮಂಡ್ಯಕ್ಕೆ ಮುಂದಿರುವುದೇ ನಿಜವಾದ ಸವಾಲ್ಜಿಲ್ಲೆಗೆ ಬರಲಿದ್ದಾರೆ ಸಾವಿರಾರು ಮಂದಿ; ಮಂಡ್ಯಕ್ಕೆ ಮುಂದಿರುವುದೇ ನಿಜವಾದ ಸವಾಲ್

ಒಕ್ಕಲಿಗರ ಸಂಘದ ಕಟ್ಟಡದಲ್ಲಿ ಸುಸಜ್ಜಿತ ಹಾಸ್ಟೆಲ್ ನಿರ್ಮಾಣ ಮಾಡಲಾಗಿತ್ತು. 88 ಕೊಠಡಿಗಳನ್ನು ಹೊಂದಿರುವ ಈ ಹಾಸ್ಟೆಲ್ ಅನ್ನು ಈಗ ಕೋವಿಡ್ ಹೈಟೆಕ್ ಚಿಕಿತ್ಸಾ ಕೇಂದ್ರವಾಗಿ ಬದಲಿಸಲಾಗುತ್ತಿದ್ದು, ಇಲ್ಲಿ 160 ಸೋಂಕಿತರಿಗೆ ಚಿಕಿತ್ಸೆ ನೀಡಲು ತಯಾರಿ ಮಾಡಲಾಗುತ್ತಿದೆ. ಮಂಡ್ಯ ತಹಶೀಲ್ದಾರ್ ನಾಗೇಶ್ ಅವರು ಪೂರ್ವ ಸಿದ್ಧತೆಗಳ ನಿರ್ವಹಣಾ ಹೊಣೆ ಹೊತ್ತಿದ್ದು, ಆಸ್ಪತ್ರೆಗಾಗಿ ಸಕಲ ಸಿದ್ಧತೆ ನಡೆಸಿದ್ದಾರೆ.

Mandya Vokkaliga Hostel Will Soon Become Hightech Covid Hospital

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹೀಗಾಗಿ ಮುನ್ನೆಚ್ಚರಿಕೆ ವಹಿಸಿ ಜಿಲ್ಲಾಡಳಿತ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದೆ. ಸದ್ಯ ಮಿಮ್ಸ್ ‌ನಲ್ಲಿ 400 ಜನರಿಗೆ ಚಿಕಿತ್ಸೆ ನೀಡಲು ಸಾಧ್ಯ ಎಂದು ಹೇಳಲಾಗಿದ್ದು, ಹೆಚ್ಚುವರಿ ಚಿಕಿತ್ಸಾ ಕೇಂದ್ರ ಆರಂಭಕ್ಕೆ ಪೂರ್ವ ಸಿದ್ಧತೆ ಮಾಡಲಾಗಿದೆ. ಈಗಿನ ಪರಿಸ್ಥಿತಿಗಳನ್ನು ಗಮನಿಸುತ್ತಿದ್ದರೆ ಮುಂದಿನ ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದೆ. ಇದೆಲ್ಲವನ್ನು ಗಮನಿಸಿ ಮುಂಜಾಗ್ರತಾ ಕ್ರಮವಾಗಿ ಕೋವಿಡ್ ಹೈಟೆಕ್ ಚಿಕಿತ್ಸಾ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ.

English summary
District administration has decided to convert vokkaliga hostel as hightech covid hospital in mandya
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X