ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಿಕೆಟ್ ಗಾಗಿ ಅರ್ಜಿ ಹಾಕದ ಅಂಬರೀಷ್, ಮುಂದಿನ ನಡೆ?

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 11: 'ಮುಂಬರುವ ಚುನಾವಣೆಯಲ್ಲಿ ಮಂಡ್ಯದಲ್ಲಿ ನಾನು ಸ್ಪರ್ಧೆ ಮಾಡುವುದು ನಿಶ್ಚಿತ. ರಮ್ಯಾ ಸ್ಪರ್ಧಿಸಿದ್ರೂ ನಾನು ಸ್ಪರ್ಧಿಸುತ್ತೇನೆ. ಯಾರೇ ಸ್ಪರ್ಧಿಸಿದರೂ ನಾನು ಸ್ಪರ್ಧಿಸುತ್ತೇನೆ. ಮಂಡ್ಯದಲ್ಲಿ ನಾನೇ ಬಾಸು' ಎನ್ನುತ್ತಿದ್ದ ಅಂಬರೀಷ್ ಅವರು ಈ ಬಾರಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸುತ್ತಾರೋ? ಇಲ್ಲವೊ? ಎಂಬ ಅನುಮಾನ ಕಾಡತೊಡಗಿದೆ.

ಈ ರೀತಿ ಅನುಮಾನ ಪಡುವುದಕ್ಕೂ ಕಾರಣವಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)ಯು ಟಿಕೆಟ್ ಆಕಾಂಕ್ಷಿಗಳಿಗೆ ಅರ್ಜಿ ಪಡೆಯುವಂತೆ ನಾಲ್ಕೈಂದು ತಿಂಗಳ ಹಿಂದೆ ಕರೆ ನೀಡಿತ್ತು.

ಚುನಾವಣೆ 2018: ಕಾಂಗ್ರೆಸ್ 123 ಅಭ್ಯರ್ಥಿಗಳ ಪಟ್ಟಿ

ಅದರಂತೆ, ಇವತ್ತಿನ ತನಕ ಸರಿ ಸುಮಾರು 2 ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿವೆ. ಆದರೆ, ಎಂ. ಎಚ್. ಅಂಬರೀಷ್ ಅವರು ಇನ್ನೂ ಅರ್ಜಿ ಹಾಕಿಲ್ಲ.

Mandya Politics : Former Minister MH Ambareesh yet to apply for Assembly ticket

ಕಳೆದ ನಾಲ್ಕೈದು ತಿಂಗಳಿನಿಂದ ಸೂಕ್ತ ಅಭ್ಯರ್ಥಿಗಳ ಆಯ್ಕೆ ಕಸರತ್ತಿನಲ್ಲಿರುವ ಕಾಂಗ್ರೆಸ್ ಪಕ್ಷ ಕೊನೆಗೂ ಹಾಲಿ ಶಾಸಕರಿಗೆ ಟಿಕೆಟ್ ಖಚಿತ ಪಡಿಸಿರುವ ಸುದ್ದಿ ಬಂದಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಬಹುತೇಕ 123 ಕಾಂಗ್ರೆಸ್ ಶಾಸಕರು ಮತ್ತೊಮ್ಮೆ ಕಣಕ್ಕಿಳಿಯುವ ಉಮೇದಿನಲ್ಲಿದ್ದಾರೆ. ಎಲ್ಲರೂ ಅರ್ಜಿ ಹಾಕುವುದು ಅನಿವಾರ್ಯವಾಗಿದೆ. ಆದರೆ, ಮಂಡ್ಯದ ಗಂಡು ಅಂಬರೀಷ್ ಮಾತ್ರ ಯಾಕೋ ಇನ್ನೂ ಕೆಪಿಸಿಸಿ ಕಚೇರಿ ಕಡೆ ತಿರುಗಿ ನೋಡಿಲ್ಲ.

ಅಂಬರೀಷ್- ಬೇರೆ ಪಕ್ಷದತ್ತ ಮುಖ ಮಾಡಿದ್ದರಾ?

ಅಂಬರೀಷ್- ಬೇರೆ ಪಕ್ಷದತ್ತ ಮುಖ ಮಾಡಿದ್ದರಾ?

ಕೊನೆ ಕ್ಷಣದಲ್ಲಿ ಅರ್ಜಿ ಪಡೆಯುವವರ ಅನುಕೂಲಕ್ಕಾಗಿ ಕೊನೆ ದಿನಾಂಕವನ್ನು ಸೋಮವಾರದ ಸಂಜೆ ತನಕ ವಿಸ್ತರಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಅರ್ಜಿ ಪಡೆದುಕೊಂಡಿದ್ದಾರೆ. ಈ ಬಾರಿ ಅರ್ಜಿ ಪಡೆಯುವುದನ್ನು ಕಡ್ಡಾಯಗೊಳಿಸುವಂತೆ ಎಐಸಿಸಿ ಖಡಕ್ ಸೂಚನೆ ನೀಡಿದೆ.

ಮಂಡ್ಯ ಜಿಲ್ಲಾ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಅನುಭವಿ ರಾಜಕಾರಣಿ ಅಂಬರೀಷ್ ಅವರು ಅಸಮಾಧಾನಗೊಂಡಿದ್ದರೂ ಯಾರೂ ಅವರನ್ನು ಓಲೈಸಲು ಯತ್ನಿಸುತ್ತಿಲ್ಲ. ನಾಳೆ ಅರ್ಜಿ ಸಲ್ಲಿಸಲು ಮುಂದಾಗದಿದ್ದರೆ ಅಂಬರೀಷ್ ಅವರಿಗೆ ಮಂಡ್ಯ ಅಷ್ಟೇ ಅಲ್ಲ, ಕಾಂಗ್ರೆಸ್ ಟಿಕೆಟ್ ಸಿಗುವುದೇ ಅನುಮಾನವಾಗಲಿದೆ. ಅಂಬರೀಷ್ ಅವರು ಬೇರೆ ಪಕ್ಷದತ್ತ ಮುಖ ಮಾಡಿದ್ದರಾ? ಎಂಬ ಪ್ರಶ್ನೆಯೂ ಎದ್ದಿದೆ.

ಪಕ್ಷ ಯಾರಿಗೆ ಟಿಕೆಟ್ ಕೊಡಬೇಕು ಎಂಬುದನ್ನು ನಿರ್ಧರಿಸಲಿದೆ, ಯಾರಾದರೂ ಸ್ಪರ್ಧೆ ಮಾಡಲಿ. ನಾನಂತೂ ಚುನಾವಣೆಯಲ್ಲಿ ಸ್ಪರ್ಧಿಸುವೆ ಎಂದು ಘೋಷಿಸಿದ್ದಾರೆ.

ಹಾಲಿ ಶಾಸಕರಿಗೆ ಟಿಕೆಟ್ ಖಚಿತವಾಗಿತ್ತು

ಹಾಲಿ ಶಾಸಕರಿಗೆ ಟಿಕೆಟ್ ಖಚಿತವಾಗಿತ್ತು

123 ಹಾಲಿ ಶಾಸಕರಿದ್ದಾರೆ ಅವರ ಕಾರ್ಯಕ್ಷಮತೆ, ಅವರ ಮೌಲ್ಯಮಾಪನ ಮಾಡಿ, ಟಿಕೆಟ್ ನೀಡಲಾಗುತ್ತದೆ. 123 ಹಾಲಿ ಶಾಸಕರು ಪ್ಲಸ್ 7 ಮಂದಿ ಜೆಡಿಎಸ್ ನಿಂದ ಬಂದಿರುವ ಬಂಡಾಯ ಶಾಸಕರು, ಪ್ಲಸ್ ಆನಂದ್ ಸಿಂಗ್ ಹಾಗೂ ಕೂಡ್ಲಿಗಿ ನಾಗೇಂದ್ರ, ಪ್ಲಸ್ ಅಶೋಕ್ ಖೇಣಿಗೆ ಟಿಕೆಟ್ ಖಚಿತ. ಮಿಕ್ಕ 91 ಸ್ಥಾನಗಳಿಗಾಗಿ ಎರಡು ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿವೆ.

ಹಾಲಿ ಶಾಸಕರು, ಸಚಿವರಿಗೆ ಟಿಕೆಟ್ ಖಚಿತ ಎಂದಾದರೂ ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಹಿರಿಯ-ಕಿರಿಯ ನಾಯಕರು ಟಿಕೆಟ್ ನೀಡುವಂತೆ ಕೋರಿ, ಅರ್ಜಿಯನ್ನು ಸಲ್ಲಿಸಿದ್ದಾರೆ.ಅರ್ಜಿ ಸಲ್ಲಿಕೆಗೆ ಬೇಕಾದ ಮೊತ್ತವನ್ನು ಬ್ಯಾಂಕ್ ಡಿಡಿ ಮೂಲಕ ಪಾವತಿಸಬೇಕಿದ್ದು, ಶನಿವಾರ, ಭಾನುವಾರ ಬ್ಯಾಂಕ್ ಕಾರ್ಯನಿರ್ವಹಿಸದ ಕಾರಣ, ಸೋಮವಾರ ಸಂಜೆ ತನಕ ಅವಕಾಶ ನೀಡಲಾಗಿದೆ.
ರಮ್ಯಾ ವಿರುದ್ಧ ಸ್ಪರ್ಧಿಸಲು ಸಿದ್ದ ಎಂದಿದ್ದ ಅಂಬಿ

ರಮ್ಯಾ ವಿರುದ್ಧ ಸ್ಪರ್ಧಿಸಲು ಸಿದ್ದ ಎಂದಿದ್ದ ಅಂಬಿ

ಮಂಡ್ಯದಲ್ಲಿ ಅಂಬರೀಶ್ ಅವರಿಗೆ ಟಿಕೆಟ್ ಸಿಗುವುದು ಡೌಟು, ರಮ್ಯಾ ಅಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನುವ ಊಹಾಪೋಹದ ಸುದ್ದಿಗೆ ಹೆಚ್ಚಿನ ಬಲ ಬರುತ್ತಿದೆ. ಮಂಡ್ಯ ಕಾಂಗ್ರೆಸ್ಸಿನ ಒಳಜಗಳದ ಲಾಭ ಪಡೆಯಲು ಇತ್ತ ಜೆಡಿಎಸ್ ಹವಣಿಸುತ್ತಿದೆ.

ಐಆರ್ ಎಸ್ ಅಧಿಕಾರಿಯಾಗಿದ್ದ ಲಕ್ಷ್ಮೀ ಅಶ್ವಿನ್ ಗೌಡ ಅವರು ಹುದ್ದೆ ತೊರೆದು ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟಿನಿಂದ ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನುವ ಸುದ್ದಿಯಿದೆ.

ರಮ್ಯಾ ಬೇಕಾದರೂ ಸ್ಪರ್ಧೆ ಮಾಡಲಿ, ಎಸ್ ಎಂ ಕೃಷ್ಣನವರೂ ಬೇಕಾದರೂ ಸ್ಪರ್ಧಿಸಲಿ, ನಾನು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎನ್ನುವ ಹೇಳಿಕೆಯನ್ನು ಹಾಲೀ ಮಂಡ್ಯದ ಶಾಸಕ ಅಂಬರೀಶ್ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಮೂಲಕ ಒಂದು ವೇಳೆ ಕಾಂಗ್ರೆಸ್ ಪಕ್ಷದ ಟಿಕೆಟ್ ಗೆ ಅರ್ಜಿ ಹಾಕದಿದ್ದರೆ, ಅಥವಾ ಟಿಕೆಟ್ ಸಿಗದಿದ್ದರೆ, ಅಂಬರೀಷ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ಅಚ್ಚರಿ ಪಡಬೇಕಾಗಿಲ್ಲ.
ಮಣ್ಣಿನ ಮಕ್ಕಳ ಕ್ಷೇತ್ರಕ್ಕೆ ಯಾರು ದಿಕ್ಕು?

ಮಣ್ಣಿನ ಮಕ್ಕಳ ಕ್ಷೇತ್ರಕ್ಕೆ ಯಾರು ದಿಕ್ಕು?

ಮಂಡ್ಯದ ಗಂಡು ಎಂದೇ ಖ್ಯಾತರಾದ ಹಿರಿಯ ನಟ ಅಂಬರೀಷ್ ಹಾಲಿ ಶಾಸಕ. 2013ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಅಭೂತಪೂರ್ವ ಗೆಲುವು ಗಳಿಸಿ, ಸಿದ್ದರಾಮಯ್ಯ ಸರ್ಕಾರದಲ್ಲಿ ವಸತಿ ಹಾಗು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದವರು. ಕಳೆದ ವರ್ಷ ಸಂಪುಟದಿಂದ ಕೈಬಿಡಲಾಯಿತು.2013ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಅಂಬರೀಷ್ ಅವರು ಸುಮಾರು 90,329 ಮತಗಳನ್ನು ಪಡೆದು, 42,937 ಮತಗಳ ಅಂತರದಿಂದ ಜೆಡಿಎಸ್ ನ ಮಾಜಿ ಶಾಸಕ ಎಂ. ಶ್ರೀನಿವಾಸ್ ರನ್ನು ಪರಾಭವಗೊಳಿಸಿದ್ದರು. ಈ ಮೊದಲು ಅಂಬರೀಷ್ ಮೂರು ಬಾರಿ ಲೋಕಸಭಾ ಸದಸ್ಯ (ಒಮ್ಮೆ ಜೆಡಿಎಸ್ ನಿಂದ ಹಾಗು ಎರಡು ಬಾರಿ ಕಾಂಗ್ರೆಸ್ ನಿಂದ), ಒಮ್ಮೆ ಕೇಂದ್ರ ಸಚಿವ(ಮಾಹಿತಿ ಮತ್ತು ಪ್ರಸಾರ ಇಲಾಖೆಯ ರಾಜ್ಯ ಖಾತೆ)ರಾಗಿದ್ದರು.

English summary
Mandya Politics crisis : Former Minister MH Ambareesh yet to apply for upcoming Assembly ticket. Over 2000 applications received for 224 constituencies.List includes from CM Siddaramaiah to migrants like Anand Singh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X