ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ: ಪೊಲೀಸರಿಂದ ಗ್ರಾಮ ವಾಸ್ತವ್ಯ, ಕುಂದು-ಕೊರತೆ ಆಲಿಕೆ

|
Google Oneindia Kannada News

ಮಂಡ್ಯ, ಜುಲೈ 30: ಜಿಲ್ಲೆಯ ಪೊಲೀಸರು ವಿನೂತಮ ಕಾರ್ಯಕ್ರಮಕ್ಕೆ ನಾಂದಿ ಹಾಡಿದ್ದು, ಕುಮಾರಸ್ವಾಮಿ ಅವರಂತೆಯೇ ಪೊಲೀಸರು ಕೂಡ ಇನ್ನು ಮುಂದೆ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.

ಜಿಲ್ಲಾ ವರಿಷ್ಠಾಧಿಕಾರಿ ಡಾ.ಶಿವಪ್ರಕಾಶ್ ದೇವರಾಜ್ ಅವರು ಈ ಸಂಪ್ರದಾಯಕ್ಕೆ ನಾಂದಿ ಹಾಡಿದ್ದು, ನಿನ್ನೆ ಅವರು ಜಿಲ್ಲೆಯ ಸೋಮನಹಳ್ಳಿ ಗ್ರಾಮದಲ್ಲಿ ರಾತ್ರಿ ಸಭೆ ನಡೆಸಿ ಅದೇ ಊರಿನ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಮಾಡಿದರು.

ಕುಮಾರಸ್ವಾಮಿ ಗ್ರಾಮ ವಾಸ್ತವ್ಯ: ಲಾಭ ಜೆಡಿಎಸ್‌ಗೋ, ಕಾಂಗ್ರೆಸ್‌ಗೊ? ಕುಮಾರಸ್ವಾಮಿ ಗ್ರಾಮ ವಾಸ್ತವ್ಯ: ಲಾಭ ಜೆಡಿಎಸ್‌ಗೋ, ಕಾಂಗ್ರೆಸ್‌ಗೊ?

ಜಿಲ್ಲೆಯ ಎಲ್ಲ ಪೊಲೀಸ್ ಅಧಿಕಾರಿಗಳು ಗ್ರಾಮಗಳಲ್ಲಿ ವಾಸ್ತವ್ಯ ಮಾಡಬೇಕು ಎಂದು ಎಸ್‌ಪಿ ಅವರು ಸೂಚನೆ ನೀಡಿದ್ದು, ಎಸ್‌ಐ, ಸಿಐ ಸೇರಿ ಎಲ್ಲ ಅಧಿಕಾರಿಗಳು ಯಾವುದಾದರೂ ಒಂದು ಗ್ರಾಮದಲ್ಲಿ ಸಭೆ ನಡೆಸಿ, ಜನರ ಕುಂದು-ಕೊರತೆ ಆಲಿಸಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.

Mandya police SP instructed all police officers should do village stay

ಕುಮಾರಸ್ವಾಮಿ ಅವರು ಮೊದಲ ಬಾರಿಗೆ 2006 ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಗ್ರಾಮ ವಾಸ್ತವ್ಯ ಪ್ರಾರಂಭಿಸಿದರು. ಆಗ ಅದು ಭಾರಿ ಜನಪ್ರಿಯಗೊಂಡಿತ್ತು. ಕುಮಾರಸ್ವಾಮಿ ಅವರಿಗೆ ರಾಷ್ಟ್ರಮಟ್ಟದಲ್ಲಿ ಹೆಸರು ತಂದುಕೊಟ್ಟಿತ್ತು, ರಾಜಕೀಯ ವಲಯದಲ್ಲಿ ಅವರಿಗೆ ಜನಪ್ರಿಯತೆಯನ್ನೂ ತಂದುಕೊಟ್ಟಿತ್ತು.

English summary
Mandya police officers will stay in village one day in every month. SP Shivaprakash Devaraj instructed all police officers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X