ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾತ್ರೋರಾತ್ರಿ ಸೀಲ್ ಡೌನ್ ಆಯ್ತು ಮಂಡ್ಯದ ಪೇಟೆ ಬೀದಿ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಏಪ್ರಿಲ್ 25: ಮಂಡ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಮಂಡ್ಯದಲ್ಲೀಗ ಕೊರೊನಾ ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದು, ಇದರಿಂದ ರಾತ್ರೋರಾತ್ರಿ ಇಲ್ಲಿನ ಪೇಟೆ ಬೀದಿಯನ್ನು ಸೀಲ್ ‍ಡೌನ್ ಮಾಡಲಾಗಿದೆ.

ಜುಬಿಲಿಯಂಟ್ ಕಾರ್ಖಾನೆ ನೌಕರೊಬ್ಬನಿಗೆ ಸೋಂಕು ಧೃಡಪಟ್ಟ ಮಾಹಿತಿ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಪೊಲೀಸ್ ಸಿಬ್ಬಂದಿ ಮಂಡ್ಯದ ಪ್ರಮುಖ ವಾಣಿಜ್ಯ ಕೇಂದ್ರವಾದ ಪೇಟೆ ಬೀದಿಯನ್ನು ಸೀಲ್ ‍ಡೌನ್ ಮಾಡಿದ್ದಾರೆ.

 ಮಂಡ್ಯಕ್ಕೆ ಕಂಟಕವಾದ ಮಳವಳ್ಳಿ ತಬ್ಲಿಘಿ ಸಂಪರ್ಕ ಮಂಡ್ಯಕ್ಕೆ ಕಂಟಕವಾದ ಮಳವಳ್ಳಿ ತಬ್ಲಿಘಿ ಸಂಪರ್ಕ

ವ್ಯಾಪಾರಸ್ಥರಿಗೆ ಸರಕು ಸರಂಜಾಮು ಸಾಗಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಪೇಟೆ ಬೀದಿ ರಸ್ತೆಗಳನ್ನು ಬ್ಲಾಕ್ ಮಾಡಿ ಓಡಾಟವನ್ನು ಬಂದ್ ಮಾಡಲಾಗಿದೆ. ಜನರು ರಸ್ತೆಗಿಳಿಯದಂತೆ, ಅಂಗಡಿ ಮುಂಗಟ್ಟುಗಳು ತೆರೆಯದಂತೆ ಪೊಲೀಸರು ಎಚ್ಚರಿಕೆ ಕೊಟ್ಟಿದ್ದಾರೆ. ಮಳವಳ್ಳಿ ಸೇರಿದಂತೆ ಮಂಡ್ಯದಲ್ಲಿ ಗುರುವಾರದವರೆಗೂ 14 ಕೊರೊನಾ ಪ್ರಕರಣಗಳು ಇದ್ದವು.

Mandya Pete Beedi Seal Down As Precaution To Coronavirus

ಶುಕ್ರವಾರ ಮಂಡ್ಯ ಜಿಲ್ಲೆಯ ಮಳವಳ್ಳಿಯ 60 ವರ್ಷದ ಪುರುಷರೊಬ್ಬರಲ್ಲೂ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಇವರನ್ನು ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಮಂಡ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

English summary
Police have seal down main commercial centre pete beedi in mandya as precautionary measure to coronavirus,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X