ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಮ್ಯಾ ವಿರುದ್ಧ ಆಕ್ರೋಶಗೊಂಡ ಅಂಬರೀಶ್ ಅಭಿಮಾನಿಗಳು

|
Google Oneindia Kannada News

ಮಂಡ್ಯ, ನವೆಂಬರ್ 26 : ಮಂಡ್ಯದಲ್ಲಿ 2 ಲಕ್ಷಕ್ಕೂ ಅಧಿಕ ಜನರು ಮಾಜಿ ಸಚಿವ ಅಂಬರೀಶ್ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಮಂಡ್ಯದ ಮಾಜಿ ಸಂಸದೆ ರಮ್ಯಾ ಅವರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂಬರೀಶ್ ಅವರು ರಮ್ಯಾಗೆ ರಾಜಕೀಯದ ದಾರಿ ತೋರಿಸಿದ್ದಾರೆ. ಆದ್ದರಿಂದ, ಮಂಡ್ಯಕ್ಕೆ ಬಂದು ರಮ್ಯಾ ಅವರು ಅಂತಿಮ ದರ್ಶನ ಪಡೆಯಬೇಕಿತ್ತು ಎಂಬುದು ಜನರ ಒತ್ತಾಯವಾಗಿತ್ತು. ಆದರೆ, ರಮ್ಯಾ ಅವರು ಮಂಡ್ಯಕ್ಕೆ ಬರಲೇ ಇಲ್ಲ.

ನ.23 ಬೆಂಗಳೂರು ರೇಸ್ ಕ್ಲಬ್‌ಗೆ ಅಂಬರೀಶ್ ಕೊನೆ ಭೇಟಿನ.23 ಬೆಂಗಳೂರು ರೇಸ್ ಕ್ಲಬ್‌ಗೆ ಅಂಬರೀಶ್ ಕೊನೆ ಭೇಟಿ

ಅಂಬರೀಶ್ ಅವರು ವಿಧಿವಶರಾದ ಸುದ್ದಿ ತಿಳಿದ ರಮ್ಯಾ ಅವರು ಟ್ವೀಟ್ ಮಾಡಿದ್ದರು. ಆದರೆ, ಅಂತಿಮ ದರ್ಶನ ಪಡೆಯಲು ಬೆಂಗಳೂರಿಗೆ ಅಥವ ಮಂಡ್ಯಕ್ಕೆ ಆಗಮಿಸಲಿಲ್ಲ. ರಮ್ಯಾ ಅವರು ಎಲ್ಲಿದ್ದಾರೆ? ಎಂಬ ಮಾಹಿತಿ ಯಾರಿಗೂ ಇಲ್ಲ.

ಒಂದೇ ತಿಂಗಳಿನಲ್ಲಿ ವಿಧಿಯ ಕರೆಗೆ ಓಗೊಟ್ಟ ಆಪ್ತ ಸ್ನೇಹಿತರು!ಒಂದೇ ತಿಂಗಳಿನಲ್ಲಿ ವಿಧಿಯ ಕರೆಗೆ ಓಗೊಟ್ಟ ಆಪ್ತ ಸ್ನೇಹಿತರು!

ರಮ್ಯಾ ಅವರು ಮಂಡ್ಯದ ಮಾಜಿ ಸಂಸದೆ. ಮಂಡ್ಯದ ಮಗಳಾಗಿ ಅವರು ಆಗಮಿಸಬೇಕಿತ್ತು. ತಮ್ಮನ್ನು ರಾಜಕೀಯವಾಗಿ ಬೆಳೆಸಿದ ಅಂಬರೀಶ್ ಅವರಿಗೆ ಮಂಡ್ಯದಲ್ಲಿಯೇ ಅವರು ಅಂತಿಮ ನಮನ ಸಲ್ಲಿಸಬೇಕಿತ್ತು ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜನಂತೆ ಬಾಳಿದ ಅಜಾತಶತ್ರು ಅಂಬಿಯಣ್ಣ : ಕಿಚ್ಚನ ಕಣ್ಣೀರ ಪತ್ರರಾಜನಂತೆ ಬಾಳಿದ ಅಜಾತಶತ್ರು ಅಂಬಿಯಣ್ಣ : ಕಿಚ್ಚನ ಕಣ್ಣೀರ ಪತ್ರ

ಅಂಬರೀಶ್ ಅವರು ಶನಿವಾರ ರಾತ್ರಿ ವಿಧಿವಶರಾದರು. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ಬೆಳಗ್ಗೆಯಿಂದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಹಲವಾರು ಗಣ್ಯರು ಬಂದು ಅಂತಿಮ ನಮನ ಸಲ್ಲಿಸಿದರು. ಆದರೆ, ರಮ್ಯಾ ಅವರು ಮಾತ್ರ ಬರಲಿಲ್ಲ.

ರಮ್ಯಾ ಅವರು ಮಂಡ್ಯಕ್ಕೆ ಬಂದು ಅಂಬರೀಶ್ ಅಂತಿಮ ದರ್ಶನ ಪಡೆಯಲಿದ್ದಾರೆ ಎಂದು ಅಭಿಮಾನಿಗಳು ನಂಬಿದ್ದರು. ಆದರೆ, ರಮ್ಯಾ ಅವರು ಟ್ವೀಟ್ ಮಾಡಿದ್ದು, ಬಿಟ್ಟರೆ ಬೇರೆಲ್ಲೂ ಕಾಣಿಸಿಕೊಳ್ಳಲಿಲ್ಲ.

ನವೆಂಬರ್ 3ರಂದು ನಡೆದ ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿಯೂ ಸಹ ರಮ್ಯಾ ಅವರು ಮತದಾನ ಮಾಡಿರಲಿಲ್ಲ. ಈಗ ಮತ್ತೆ ಮಂಡ್ಯಕ್ಕೆ ಅವರು ಆಗಮಿಸಿದ ಹಿನ್ನಲೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ.

ದುರಹಂಕಾರದ ಪರಮಾವಧಿ

ದುರಹಂಕಾರದ ಪರಮಾವಧಿ

ರಮ್ಯಾ ಇದು ದುರಹಂಕಾರದ ಪರಮಾವಧಿ ರಜನಿ, ಚಿರಂಜೀವಿಗಿಂತ ಕೆಲಸ ಇದ್ಯಾ ನಿನಗೆ, ಹತ್ತಿದ ಏಣಿ ಒದೆಯೋದು ಒಂದೇ ತಿನ್ನುವ ಅನ್ನಕ್ಕೆ ಬೆಲೆ ಕೊಡದಿರುವುದು ಕೂಡ ಒಂದೇ, ನಿನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅಂಬಿ, ಮಂಡ್ಯ ಬೇಕಿತ್ತು ಈಗ ಯಾರೂ ಬೇಡವಾದರಾ? ಎಂದು ಓದುಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಕ್ಷದಿಂದ ಹೊರಗೆ ಹಾಕಬೇಕು

ಪಕ್ಷದಿಂದ ಹೊರಗೆ ಹಾಕಬೇಕು

ನಾಯಿಗೆ ಅನ್ನ ಹಾಕಿದರೆ ನಿಯತ್ತಿನಿಂದ ಮನೆ ಬಾಗಿಲು ಕಾಯುತ್ತೆ ಕೆಲವರಿಗೆ ಅ ನಿಯತ್ತು ಇಲ್ಲಾ... ಪಕ್ಷದಿಂದ ಮೊದಲು ಇವರನ್ನು ಹೊರಗೆ ಹಾಕಬೇಕು ಎಂದು ಪೂರ್ವಿ ರಾಜು ಎಂಬ ಓದುಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀವು ಬದುಕಿದ್ದರೂ ಮಂಡ್ಯ ಜನಕ್ಕೆ ಸತ್ತಂತೆ

ನೀವು ಬದುಕಿದ್ದರೂ ಮಂಡ್ಯ ಜನಕ್ಕೆ ಸತ್ತಂತೆ

ಅಣ್ಣ ಸತ್ತಿದರೂ ಎಲ್ಲರ ಮನಸಿನಲ್ಲಿ ಇನ್ನು ಜೀವಂತವಾಗಿದ್ದಾರೆ. ಆದರೆ, ನೀನು ಬದುಕಿದ್ದರು ನಮ್ಮ ಮಂಡ್ಯ ಜನಕೆ ಸತ್ತಂತೆ. u exist virtual.. RIP Ramya

ಇಷ್ಟೇ ನಾ ಹಿರಿಯರಿಗೆ ಕೊಡುವ ಬೆಲೆ

ಇಷ್ಟೇ ನಾ ಹಿರಿಯರಿಗೆ ಕೊಡುವ ಬೆಲೆ

ಧನ್ಯರಾದರು ಮಂಡ್ಯ ಜನತೆ ನಿನ್ನಂತಹ ಅವಕಾಶವಾದಿ ಗೆ ಸ್ಥಾನ ಕೊಟ್ಟು ಗೌರವ ಕೊಟ್ಟ ತಪ್ಪಿಗೆ ತಲೆ ತಗ್ಗಿಸಿದ್ದಾರೆ. ಅಂದು ಬರಗೆಟ್ಟಾಗ ಕಾಲು ಹಿಡಿದು ಬೆಂಬಲಿಸಿ ಎಂದು ಗೋಗರೆದ ರಮ್ಯಾ, ಇಂದು ಮಾನವೀಯತೆಗೂ ಕೂಡ ಬರಲಿಲ್ಲವಲ್ಲ ಇಷ್ಟೇ ನಾ ಹಿರಿಯರಿಗೆ ಕೊಡುವ ಬೆಲೆ.

ಮಾನವೀಯತೆ ಎದುರು ಬೇರೇನು ಇಲ್ಲವೆಂದು ನಿರೂಪಿಸಿ

ಮಾನವೀಯತೆ ಎದುರು ಬೇರೇನು ಇಲ್ಲವೆಂದು ನಿರೂಪಿಸಿ

ರಮ್ಯಾ ಮೇಡಂ..... ಚಿತ್ರರಂಗದ ಹಿರಿಯ, ನಿಮ್ಮ ಪ್ರಪ್ರಥಮ ಚುನಾವಣೆಯಲ್ಲಿ ಕೈಹಿಡಿದು ನಡೆಸಿದ ಅಂಬರೀಷಣ್ಣನ ಅಂತಿಮ ದರ್ಶನ ಪಡೆಯಿರಿ ಅದರ ಮೂಲಕ ಮಾನವೀಯತೆ ಎದುರು ಬೇರೇನು ಇಲ್ಲವೆಂದು ನಿರೂಪಿಸಿ. ತಲೆಕೆಟ್ಟವರ ಬಾಯ್ಮುಚ್ಚಿಸಿ

ಅಂಬರೀಶ್‌ಗೆ ನಮನ

ಅಂಬರೀಶ್ ಅವರಿಗೆ ಟ್ವೀಟ್ ಮೂಲಕ ರಮ್ಯಾ ಅಂತಿಮ ನಮನ ಸಲ್ಲಿಸಿದ್ದಾರೆ.

English summary
Karnataka Former Minister and Kannada senior actor M.H.Ambareesh no more. Mandya people upset with Former MP Ramya for not attend ambareesh public view in Mandya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X